ಗಣೇಶನ ಹಬ್ಬಕ್ಕೆ ಇನ್ನೇನು ಕೆಲವು ದಿನಗಳು ಬಾಕಿ ಇದೆ. ವಿಶೇಷವಾಗಿ ಈ ದಿನದಂದು ಮನೆಯಲ್ಲಿ ಗಣೇಶನನ್ನು ಕೂರಿಸಿ, ಗಜಾನನಿಗೆ ಇಷ್ಟವಾದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ರೂಪದಲ್ಲಿ ಇಡಲಾಗುತ್ತದೆ. ಮೋದಕ ಸಿದ್ಧಿವಿನಾಯಕನಿಗೆ ಬಹಳ ಪ್ರಿಯವಾದ ಖಾದ್ಯ. ಗಣೇಶ ಹಬ್ಬ ಮೋದಕವಿಲ್ಲದೆ ಸಂಪೂರ್ಣವಾಗಲು ಸಾಧ್ಯವೇ ಇಲ್ಲ. ಹಾಗಾದ್ರೆ ಗಜಾನನನಿಗೆ ಮೋದಕವನ್ನು ಮನೆಯಲ್ಲೇ ತಯಾರಿಸಲು ಯೋಚಿಸಿದ್ದರೆ. ನಾವು ಇಂದು ಮಾಡುವ ವಿಧಾನ ಹಾಗೂ ಬೇಕಾಗುವ ಸಾಮಗ್ರಿಗಳ ಪಟ್ಟಿ ನೀಡುತ್ತೇವೆ.
ಬೇಕಾಗುವ ಸಾಮಾಗ್ರಿಗಳು:
* ಎಳ್ಳು - ಅರ್ಧ ಕಪ್
* ಗಸಗಸೆ – 1 ಚಮಚ
* ಚಿಟಿಕೆ ಉಪ್ಪು
* ಏಲಕ್ಕಿ- ಸ್ವಲ್ಪ
* ಪಿಸ್ತಾ,ಗೋಡಂಬಿ - ಅರ್ಧ ಕಪ್
* ತುಪ್ಪ- 5 ಚಮಚ
* ಬೆಲ್ಲ - ಅರ್ಧ ಕಪ್
* ತೆಂಗಿನಕಾಯಿ ತುರಿ- ಒಂದು ಕಪ್
* ಮೈದಾ ಹಿಟ್ಟು- ಒಂದು ಕಪ್
* ಅಡುಗೆ ಎಣ್ಣೆ - 2 ಕಪ್
* ಚಿರೋಟಿ ರವೆ- ಅರ್ಧ ಕಪ್
ಮಾಡುವ ವಿಧಾನ:
* ಹೂರ್ಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿರಿ, ತಣ್ಣಗಾಗಲು ಬಿಡಿ.
* ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಬೆಲ್ಲ, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಿರಿ.
* ಮೊದಲಿಗೆ ಒಂದು ಬೌಲ್‍ಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ.
* ಹೂರಣ ತಯಾರಿಸಿಕೊಳ್ಳಿ.ತಣ್ಣಗಾದ ನಂತರ ಅದನ್ನು ಉಂಡೆಗಳನ್ನಾಗಿ ಮಾಡಿ.
* ಈಗ ನಾದಿಕೊಂಡ ಮೈದಾ ಹಿಟ್ಟಿನ ಮಿಶ್ರಣವನ್ನು ಉಂಡೆ ಮಾಡಿ ಲಟ್ಟಿಸಿಕೊಳ್ಳಿ. ಅದರ ಒಳಗೆ ಬೆಲ್ಲದ ಹೂರಣವನ್ನಿಟ್ಟು ಮೋದಕದ ಆಕಾರವನ್ನು ಮಾಡಿ. * ಈಗ ಅಡುಗೆ ಎಣ್ಣೆಯನ್ನು ಬಾಣಲೆಗೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಈಗಾಗಲೇ ಸಿದ್ಧಪಿಡಿಸಿಕೊಂಡ ಮೋದಕವನ್ನು ಬಾಣಲೆಗೆ ಹಾಕಿ ಬೇಯಿಸಿಕೊಂಡರೆ ಗಣಪತಿಗೆ ಇಷ್ಟವಾದ ಮೋದಕ ಸಿದ್ಧ.