ಲೈಫ್‌ಸ್ಟೈಲ್

ಸಂಧಿವಾತ ರೋಗಿಗಳಿಗಾಗಿ ಉಚಿತ ವೈದ್ಯಕೀಯ ಶಿಬಿರ; ಜು. 4ರ ವರೆಗೂ ಲಭ್ಯ, ನೋಂದಣಿ ಕಡ್ಡಾಯ..

ಬೆಂಗಳೂರು: ಇಂಡಿಯಾ ಆಯುರ್ವೇದ ಫೌಂಡೇಷನ್ ಮತ್ತು ಸ್ವಸ್ಥ ಸಮೃದ್ಧ ಭಾರತ ಸಂಧಿವಾತ ರೋಗಿಗಳಿಗೆಂದೇ ಉಚಿತ ವೈದ್ಯಕೀಯ ಶಿಬಿರವನ್ನು ರಾಜಧಾನಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ.

ಬೆಂಗಳೂರಿನ ಯಲಚೇನಹಳ್ಳಿಯ ಸರ್ಕಾರಿ ಆಸ್ಪತ್ರೆ ಬಳಿಯ ಶಾಸ್ತ್ರಿಸ್ ಆಯುರ್ಧಾಮದಲ್ಲಿ ಇಂದು ಈ ಶಿಬಿರ ಆರಂಭಗೊಂಡಿದ್ದು, ಜುಲೈ 4ರ ವರೆಗೂ ನಡೆಯಲಿದೆ.

ಉಚಿತವಾಗಿ ನಡೆಯಲಿರುವ ಈ ಶಿಬಿರದ ಪ್ರಯೋಜನ ಪಡೆಯಲು ನೋಂದಣಿ ಕಡ್ಡಾಯ. ಆಸಕ್ತರು ಡಾ.ಸಿ.ಎ.ಕಿಶೋರ್ (80500 10100) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.