- ಪಾಲಕ್ ಸೊಪ್ಪನ್ನು ಸಾಮಾನ್ಯವಾಗಿ ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ
- ಕಬ್ಬಿಣ, ಕ್ಯಾಲ್ಸಿಯಂ, ಫೈಬರ್ ಮತ್ತು ವಿಟಮಿನ್‌ಗಳು ಸಮೃದ್ಧಿಯಾಗಿ ಇರುತ್ತವೆ
- ಪಾಲಕ್ ಸೇವಿಸುವುದರಿಂದ ಕೆಲವರಲ್ಲಿ ಗಂಭೀರ ಕಾಯಿಲೆಗಳು ಬರಲಾರಂಭಿಸುತ್ತವೆ
Spinach: ಪಾಲಕ್ ಸೊಪ್ಪನ್ನು ಸಾಮಾನ್ಯವಾಗಿ ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಫೈಬರ್ ಮತ್ತು ವಿಟಮಿನ್‌ಗಳು ಸಮೃದ್ಧಿಯಾಗಿ ಇರುತ್ತವೆ. ಇದನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಆದಾಗ್ಯೂ, ಪಾಲಕ್ ಸೇವಿಸುವುದರಿಂದ ಕೆಲವರಲ್ಲಿ ಗಂಭೀರ ಕಾಯಿಲೆಗಳು ಬರಲಾರಂಭಿಸುತ್ತವೆ ಎಂದು ನಿಮಗೇನಾದರೂ ತಿಳಿದಿದಿಯೇ? ಹೌದು, ಪಾಲಕ್ ಪ್ರಯೋಜನಗಳ ಜೊತೆ ಕೆಲವು ಅಡ್ಡ ಪರಿಣಾಮಗಳನ್ನು ಹೊಂದಿದೆ. ಹಾಗಿದ್ದರೆ ಯಾವ ಜನರಿಗೆ ಸಮಸ್ಯೆಗಳಾಗುತ್ತವೆ ಎಂದು ತಿಳಿಯೋಣ ಬನ್ನಿ..
ಯಾವ ರೋಗಿಗಳು ಪಾಲಕ್ ತಿನ್ನಬಾರದು
1. ನಿಮಗೆ ಕೀಲು ನೋವು ಅಥವಾ ಯೂರಿಕ್ ಆಮ್ಲ ಹೆಚ್ಚಾಗಿದ್ದರೆ
ಪಾಲಕ್ ಸೊಪ್ಪು ಪ್ಯೂರಿನ್‌ಗಳಲ್ಲಿ ಸಮೃದ್ಧವಾಗಿವೆ. ಇದು ಆಕ್ಸಲಿಕ್ ಆಮ್ಲವನ್ನು ಹೊಂದಿರುತ್ತದೆ. ಈ ಎರಡು ಸಂಯುಕ್ತಗಳು ಒಟ್ಟಿಗೆ ಸೇರಿದಾಗ ಕೀಲು ನೋವು ಮತ್ತು ಸಂಧಿವಾತ ಹೆಚ್ಚಾಗಬಹುದು. ಈಗಾಗಲೇ ಈ ಸಮಸ್ಯೆಯನ್ನು ಹೊಂದಿರುವವರು ಸೇವಿಸುವುದರಿಂದ ರೋಗ ಲಕ್ಷಣಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ.
2. ವಾರ್ಫರಿನ್ (ರಕ್ತ ತೆಳು ಮಾಡುವ ಔಷಧಿ) ಸೇವಿಸುವವರು
ಪಾಲಕ್‌ನಲ್ಲಿ ವಿಟಮಿನ್ ಕೆ ಅಧಿಕವಾಗಿರುತ್ತದೆ. ಹಾಗಾಗಿ ಈ ಔಷಧವನ್ನು ಸೇವಿಸುವಂತಹವರು ಪಾಲಕ್ ಸೊಪ್ಪನ್ನು ಅಧಿಕವಾಗಿ ತಿನ್ನುವುದರಿಂದ ಇದು INR ಕಡಿಮೆಯಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ರಕ್ತ ಹೆಪ್ಪುಗಟ್ಟಿಸುವಂತೆ ಮಾಡುತ್ತದೆ.
3. ಮೂತ್ರಪಿಂಡದಲ್ಲಿನ ಸಮಸ್ಯೆ
ಹೆಚ್ಚು ಪಾಲಕ್ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಹೆಚ್ಚುವರಿ ಆಕ್ಸಲಿಕ್ ಆಮ್ಲ ಸಂಗ್ರಹವಾಗಬಹುದು. ಇದು ನಿಮ್ಮ ದೇಹವು ನಿಮ್ಮ ವ್ಯವಸ್ಥೆಯಿಂದ ತೆಗದುಹಾಕಲು ಕಷ್ಟವಾಗುತ್ತದೆ. ಇದು ಮೂತ್ರಪಿಂಡಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳನ್ನು ಹೆಚ್ಚಿಸಲು ಕಾರಣವಾಗಬಹುದು. ಇದರಿಂದ ಮೂತ್ರಪಿಂಡದಲ್ಲಿ ಸಮಸ್ಯೆ ಉಂಟಾಗುತ್ತದೆ.
4. ಥೈರಾಯ್ಡ್ ಸಮಸ್ಯೆ
ಪಾಲಕ್‌ನಲ್ಲಿ ಗಾಯಿಟ್ರೋಜೆನ್ (Goitrogen) ಇದ್ದು, ಇದು ಥೈರಾಯ್ಡ್ ಗ್ರಂಥಿಯ ಕಾರ್ಯವನ್ನು ತಡೆಯಬಹುದು. ಹಾಗಾಗಿ ಈ ಸಮಸ್ಯೆ ಹೊಂದಿರುವವರು ಹಸಿಯಾಗಿ ಪಾಲಕ್ ಸೊಪ್ಪನ್ನು ಸೇವಿಸದೆ ಬೇಯಿಸಿ ತಿನ್ನಿರಿ.
5. ಅಲ್ಸರ್ ರೋಗಿಗಳು
ಯಾವ ವ್ಯಕ್ತಿಯಲ್ಲಿ ಅಲ್ಸರ್, ಅಲರ್ಜಿ, ಜೀರ್ಣಕ್ರಿಯೆಯಲ್ಲಿ ತೊಂದರೆ ಇರುತ್ತದೆಯೋ ಆ ವ್ಯಕ್ತಿಗಳು ಆದಷ್ಟು ಪಾಲಕ್ ಸೊಪ್ಪನ್ನು ತಿನ್ನುವುದನ್ನು ಕಡಿಮೆ ಮಾಡಬೇಕು. ಇದರಲ್ಲಿರುವ ಹೆಚ್ಚಿನ ಫೈಬರ್ ಮತ್ತು ಆಕ್ಸಲೇಟ್ ಕೆಲವರಲ್ಲಿ ಆಮ್ಲತೆ ಹೆಚ್ಚಿಸಬಹುದು. ಹಾಗಾಗಿ ಆದಷ್ಟು ಬೇಯಿಸಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.