South Indian Cocktail Recipes 
ಆಹಾರ

ಮನೆಯಲ್ಲೇ ತಯಾರಿಸಬಹುದು ದಕ್ಷಿಣ ಭಾರತದ ಶೈಲಿಯ ಕಾಕ್‌ಟೇಲ್​ಗಳು; 4 ಅದ್ಭುತ ಪಾನೀಯ ರೆಸಿಪಿ ಇಲ್ಲಿದೆ..South Indian Cocktail Recipes

ಪ್ರಮುಖ ಮುಖ್ಯಾಂಶಗಳು

  • ವಿದೇಶಿ ಶೈಲಿಯ ಪಾನೀಯಗಳಿಗಿಂತ ಈಗ ಸ್ಥಳೀಯ ರುಚಿಯ ಕಾಕ್​ಟೇಲ್​ಗಳಿಗೆ ಹೆಚ್ಚಿನ ಬೇಡಿಕೆ
  • ಫಿಲ್ಟರ್ ಕಾಫಿ, ಎಳನೀರು ಮತ್ತು ಮಜ್ಜಿಗೆಯ ಫ್ಲೇವರ್‌ ಹೊಂದಿರುವ ಕಾಕ್‌ಟೇಲ್‌ಗಳು ರೆಸಿಪಿ
  • ಮನೆಯಲ್ಲೇ ಸುಲಭವಾಗಿ ತಯಾರಿ, ಸಂಬಂಧಿಕರೊಂದಿಗೆ ಕುಡಿಯಬಹುದಾದ ದಕ್ಷಿಣ ಭಾರತೀಯ ಕಾಕ್​ಟೇಲ್​ಗಳು
South Indian Cocktail Recipes: ಪಾಶ್ಚಿಮಾತ್ಯರ ಆಹಾರ, ಬಟ್ಟೆ, ಜೀವನ ಶೈಲಿಗೆ ಮನಸೋತಿದ್ದ ಭಾರತೀಯರು ಸದ್ಯ ಇಂದಿನ ದಿನಗಳಲ್ಲಿ ಇಲ್ಲಿನ ಸೊಗಡನ್ನೇ ನೆಚ್ಚಿಕೊಳ್ಳೋಕೆ ಶುರು ಮಾಡಿಕೊಂಡಿದ್ದಾರೆ. ಇದಕ್ಕೆ ಉದಾಹರಣೆಯೆಂದರೆ, ಜಯನಗರದಲ್ಲಿ ಇತ್ತೀಚೆಗೆ ಶುರುವಾದ ಕಹಳೆ ಎನ್ನುವ ಕಾಫಿ ಬಾರ್​, ಕೆಲವು ಹೋಟೆಲ್​ಗಳಲ್ಲಿ ಹಿಂದಿನ ಸಂಪ್ರದಾಯದಂತೆ ನೀಡುವ ಮಲ್ಲಿಗೆ ಹೂ, ಅರಿಶಿನ ಕುಂಕುಮ ಕೊಡುವ ವಾಡಿಕೆಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ  ಬಾರ್ ಮತ್ತು ಪಬ್‌ಗಳಲ್ಲಿಯೂ ಪಾಲನೆ ಮಾಡುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. 
ಇತ್ತೀಚೆಗೆ  ಬೆಂಗಳೂರಿನ 'ಸೋಕ' ದಂತಹ ಪ್ರಸಿದ್ಧ ಬಾರ್‌ಗಳಲ್ಲಿ  ಮೈಸೂರಿನ ಏಲಕ್ಕಿ ಬಾಳೆಹಣ್ಣು ಮತ್ತು ಮಲ್ಲಿಗೆ ಹೂವಿನ ಸುಗಂಧವನ್ನು ಬಳಸಿಕೊಂಡು ಪಾನೀಯಗಳನ್ನು ತಯಾರಿಸಲಾಗುತ್ತಿದೆ. ಇದು ಬಿಸಿಲ ಬೇಗೆಗೆ ಹೇಳಿ ಮಾಡಿಸಿದ ಕಾಕ್​ಟೇಲ್​. ಈ ಬೇಸಿಗೆ ಕಾಲದಲ್ಲಿ ದಕ್ಷಿಣ ಭಾರತ ಶೈಲಿಯ ನಾಲ್ಕು ವಿಶಿಷ್ಟ ಕಾಕ್​ಟೇಲ್​ ರೆಸಿಪಿ ತಯಾರಿಸೋದರ ಬಗ್ಗೆ ಹಾಗೂ ಇದಕ್ಕೆ ಬೇಕಾದ ವಸ್ತುಗಳು ಯಾವುದು ಎನ್ನುವುದನ್ನು ಈ ಲೇಖನದಲ್ಲಿ ನಿಮಗಾಗಿ ಉಲ್ಲೇಖಿಸಲಾಗಿದೆ.

ಯಾವೆಲ್ಲ ಕಾಕ್​ಟೇಲ್​ಗಳು ಇಲ್ಲಿ ಫೇಮಸ್

ಮಾಮೀಸ್ ಮಾರ್ಟಿನಿ 

ಇದು ಫಿಲ್ಟರ್​ ಕಾಫಿಯ ಘಮವನ್ನು ಅಮಲೇರಿಸುವ ಪಾನೀಯ. ಚೆನ್ನೈ ಭಾಗದ್ದಾಗಿದ್ದು, ಕಾಫಿ ಪ್ರಿಯರಿಗೆ ಇದು ಅಚ್ಚುಮೆಚ್ಚು
 ಬೇಕಾದ ವಸ್ತುಗಳು
  • 60 ಮಿಲಿ ಐರಿಶ್ ವಿಸ್ಕಿ
  • 30 ಮಿಲಿ ಕಾಫಿ ಲಿಕ್ಕರ್ 
  •  30 ಮಿಲಿ ಫಿಲ್ಟರ್ ಕಾಫಿ ಡಿಕಾಕ್ಷನ್
  •  ಐಸ್ ಕ್ಯೂಬ್ಸ್.
ತಯಾರಿಸೋದು ಹೇಗೆ
ಎಲ್ಲವನ್ನೂ ಶೇಕರ್‌ನಲ್ಲಿ ಹಾಕಿ ಚೆನ್ನಾಗಿ ಕುಲುಕಿ, ಐಸ್​ ಕ್ಯೂಬ್​ಗಳ ತಣ್ಣಗಾಗುವವರೆಗೂ ಕುಲುಕಬೇಕು ಆನಂತರ ಗ್ಲಾಸ್‌ಗೆ ಸೋಸಿಕೊಳ್ಳಿ. ಮೇಲೆ ಅಲಂಕಾರಕ್ಕಾಗಿ ಮೂರು ಕಾಫಿ ಬೀಜಗಳನ್ನು ಹಾಕಿ.

 ಮರಿನಾ ಗೊಯ್ಯಾ  

ಚೆನ್ನೈನ ಮರಿನಾ ಬೀಚ್ ನೆನಪಿಸುವ ಈ ಪಾನೀಯ ಸೀಬೆಹಣ್ಣಿನ ಸ್ವಾದವನ್ನು ಹೊಂದಿದ್ದಾಗಿದೆ.
ತಯಾರಿಸಲು ಬೇಕಾದ ಪದಾರ್ಥ
  • 30 ಮಿಲಿ ವೋಡ್ಕಾ 
  • 30 ಮಿಲಿ ವೈಟ್ ರಮ್ 
  • 30 ಮಿಲಿ ಜಿನ್
  •  30 ಮಿಲಿ ಆರೆಂಜ್ ಲಿಕ್ಕರ್
  •   30 ಮಿಲಿ ಟಕಿಲಾ 
  • 30 ಮಿಲಿ ಸೀಬೆಹಣ್ಣಿನ ಜ್ಯೂಸ್
  •  ಸ್ವಲ್ಪ ಮೆಣಸಿನ ಪುಡಿ

ತಯಾರಿಸೋದು ಹೇಗೆ?

ಗ್ಲಾಸ್‌ನ ಅಂಚಿಗೆ ನಿಂಬೆ ರಸ ಮತ್ತು ಮೆಣಸಿನ ಪುಡಿ ಹಚ್ಚಿ. ಐಸ್ ತುಂಬಿಸಿ ಎಲ್ಲ ಪದಾರ್ಥಗಳನ್ನು ಬೆರೆಸಿ ಮೆಲ್ಲನೆ ಕಲಕಿ. ಸೀಬೆಹಣ್ಣಿನ ತುಂಡಿನಿಂದ ಅಲಂಕರಿಸಿ.

 ನೀರಾ ನೈಟ್ಸ್

ನೀರಾ ತಯಾರಿಕೆಗೆ ಬೇಕಾಗುವುದು ಮುಖ್ಯವಾಗಿ ಎಳನೀರು. ಇದೇ ಈ ಪಾನೀಯದ ಪ್ರಮುಖ ಆಕರ್ಷಣೆ. ಇದು ಅತ್ಯಂತ ತಂಪು ನೀಡುವ ಕಾಕ್‌ಟೇಲ್.

ತಯಾರಿಸಲು ಬೇಕಾದ ಪದಾರ್ಥ

  • 60 ಮಿಲಿ ಕೋಕನಟ್ ರಮ್
  • 60 ಮಿಲಿ ಎಳನೀರು
  • ಸ್ವಲ್ಪ ರೋಸ್ ವಾಟರ್ ಮತ್ತು ಸಕ್ಕರೆ
  • ತೆಂಗಿನ ಕಾಯಿ ಗಂಜಿ ದಾಲ್ಚಿನ್ನಿ ಪುಡಿ

ತಯಾರಿಸೋದು ಹೇಗೆ?

ಸಕ್ಕರೆ ಮತ್ತು ಪುದೀನಾ ಎಲೆಗಳನ್ನು ಜಜ್ಜಿ, ರಮ್ ಮತ್ತು ಎಳನೀರು ಸೇರಿಸಿ. ಐಸ್ ಮತ್ತು ದಾಲ್ಚಿನ್ನಿ ಪುಡಿ ಉದುರಿಸಿ ಸವಿಯಿರಿ.
ತೆನ್ಕಾಸಿ ಸಾರಲ್ 
ದಕ್ಷಿಣ ಭಾರತೀಯ ಮಸಾಲೆ ಮಜ್ಜಿಗೆಯನ್ನು ಕಾಕ್‌ಟೇಲ್ ರೂಪದಲ್ಲಿ ಸವಿಯಲು ಇದು ಸೂಕ್ತ.
ತಯಾರಿಸಲು ಬೇಕಾದ ಪದಾರ್ಥ
  • 60 ಮಿಲಿ ಜಿನ್
  • 90 ಮಿಲಿ ಮಸಾಲೆ ಮಜ್ಜಿಗೆ (ಶುಂಠಿ, ಹಸಿಮೆಣಸಿನಕಾಯಿ, ಕರಿಬೇವು ಹಾಕಿದ್ದು)
  • ಸಾಸಿವೆ ಒಗ್ಗರಣೆ, ನಿಂಬೆ ರಸ.

ತಯಾರಿಸೋದು ಹೇಗೆ?

 ಜಿನ್ ಮತ್ತು ಶುಂಠಿ ರಸವನ್ನು ಐಸ್‌ನೊಂದಿಗೆ ಮಿಕ್ಸ್ ಮಾಡಿ. ಗ್ಲಾಸ್‌ಗೆ ಮಜ್ಜಿಗೆ ಸುರಿದು, ಮೇಲೆ ಸಾಸಿವೆ ಒಗ್ಗರಣೆ ನೀಡಿ ವಿಭಿನ್ನವಾಗಿ ಸವಿಯಿರಿ, (ಏಜೆನ್ಸೀಸ್)​.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.