- ಆಹಾರ ಪದಾರ್ಥ ಪೇಪರ್ನಲ್ಲಿ ಸುತ್ತುವುದು ನಿಷೇಧ
- ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕ್ರಮ ಜಾರಿ
- ಪತ್ರಿಕೆಯಲ್ಲಿರುವ ಸೀಸ ಹಾಗೂ ರಾಸಾಯನಿಕ ಅಂಶ ಆರೋಗ್ಯಕ್ಕೆ ಹಾನಿಕಾರಕ
FSSAI Food Safety: ಬೀದಿ ಬದಿ ತಿನ್ನುವ ಆಹಾರವಾದ ಬೋಂಡಾ, ಹಲಸು, ಪಕೋಡ ಸೇರಿದಂತೆ ತಿನ್ನುವ ಪದಾರ್ಥವನ್ನು ಕವರ್ ಅಥವಾ ಪೇಪರ್ನಲ್ಲಿ ಕಟ್ಟಿ ಕೊಡುವುದು ಭಾರತದ ವ್ಯಾಪಾರಿಗಳಿಗೆ ಅಭ್ಯಾಸವಾಗಿದೆ. ಕೆಲವೊಮ್ಮೆ ಜಾಗರೂಕವಾಗಿ ಕವರ್ ಬೇಡ ಎನ್ನುವ ನಾವು ಪೇಪರ್ನಲ್ಲಿ ಪ್ರಿಂಟ್ ಆಗಿರುವ ಅಕ್ಷರದ ಬಗ್ಗೆ ಮರೆತು ಅದರಲ್ಲಿ ಕೊಟ್ಟ ಆಹಾರ ಸೇವನೆ ಮಾಡಿಬಿಡುತ್ತೇವೆ. ಆದರೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇನ್ಮುಂದೆ ಯಾವ ಪದಾರ್ಥವನ್ನು ಪಾರ್ಸೆಲ್ ಕೊಡಲು ಅಥವಾ ಅಂಗಡಿ ಬಳಿಯೇ ತಿನ್ನಲು ಪ್ಲೇಟ್ ಕೊಡದೆ ನ್ಯೂಸ್ ಪೇಪರ್ ಕೊಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ
ಹೌದು, ಇತ್ತೀಚೆಗೆ ಮುಂಬೈನಲ್ಲಿ ಜನಪ್ರಿಯ ವಡಾ ಪಾವ್ ಮಾರಾಟಗಾರರೊಬ್ಬರು ಆಹಾರವನ್ನು ಕಟ್ಟಲು ಪತ್ರಿಕೆಗಳನ್ನು ಬಳಕೆ ಮಾಡುತ್ತಿದ್ದದ್ದನ್ನು ಕಂಡ ಹಿನ್ನೆಲರ, FSSAI ಯ ಪಶ್ಚಿಮ ಪ್ರದೇಶ ಮತ್ತು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಜಂಟಿ ತಪಾಸಣೆ ನಡೆಸಿ ಕ್ರಮ ಕೈಗೊಂಡವು. ಇತರ ತಪಾಸಣೆಗಳ ಸಮಯದಲ್ಲಿ, ಅಧಿಕಾರಿಗಳು ಅನುಮೋದಿತ ಪ್ಯಾಕೇಜಿಂಗ್ ಸಾಮಗ್ರಿಗಳ ಬಗ್ಗೆ ಮಾರಾಟಗಾರರಿಗೆ ಅರಿವು ಮೂಡಿಸಿದರು.
ನಿಷೇಧಕ್ಕೆ ಕಾರಣವೇನು?
ಜೂನ್ 5ರಿಂದ ಆಹಾರ ಪ್ಯಾಕ್ ಮಾಡಲು ಅಥವಾ ಅದರಲ್ಲಿ ಪದಾರ್ಥ ನೀಡುವುದು ನಿಷೇಧ ಎಂದು ಸೂಚನೆ ಕೊಟ್ಟಿದೆ. ಪತ್ರಿಕೆಯ ಇಂಕಿನಲ್ಲಿರುವ ಸೀಸ ಮತ್ತು ಅಪಾಯಕಾರಿ ರಾಸಾಯನಿಕಗಳು, ಬೈಂಡರ್‌ಗಳು ಬಿಸಿ ಆಹಾರಕ್ಕೆ ಕರಗಿ ಅದನ್ನು ತಿನ್ನುವ ದೇಹಕ್ಕೆ ಸೇರಿ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು FSSAI ಎಂದು ಹೇಳಿದೆ. ಈ ಪತ್ರಿಕೆಗಳನ್ನು ಅಲ್ಲಲ್ಲಿ ನೆಲದ ಮೇಲೆ ಇಟ್ಟು ಹಂಚಿಕೆಗೆ ತಯಾರಿ ಮಾಡಿಕೊಳ್ಳುತ್ತಾರೆ. ಇದರ ಮೇಲೆ ಧೂಳು ಸೇರಿದಂತೆ ಸಾಕಷ್ಟು ಕಣಗಳು ಇರುತ್ತವೆ ಇದು ಮಾನವನ ದೇಹಕ್ಕೆ ಹೋಗುವುದು ಅಪಾಯಕಾರಿ ಎಂದಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್) ನಿಯಮಗಳು 2018ರ ಅಡಿಯಲ್ಲಿ ನ್ಯೂಸ್ ಪೇಪರ್ನಲ್ಲಿ ಆಹಾರವನ್ನು ಸಂಗ್ರಹಿಸಿ, ನೀಡುವುದು ನಿಷಿದ್ಧ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೇ ಕರಿದ ತಿಂಡಿಯಾದ ಸಮೋಸ, ಜಿಲೇಬಿ, ಪಕೋಡ ಬಜ್ಜಿ, ಬೋಂಡಾ ಸಹ ಪೇಪರ್ನಲ್ಲಿ ಕೊಡುವಂತಿಲ್ಲ ಎಂದು ಹೇಳಿದ್ದಾರೆ, (ಏಜೆನ್ಸೀಸ್).