Health tips: ಇತ್ತೀಚೆಯ ದಿನಗಳಲ್ಲಿ ಹದಿಹರೆಯರಲ್ಲಿಯೇ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಬೆಳಕಿಗೆ ಬರಲಾರಂಭಿಸಿವೆ. ಇದಕ್ಕೆ ನಾವು ಸೇವಿಸುವ ಆಹಾರದ ಸಮಸ್ಯೆ ಕೂಡ ಇರಬಹುದು. ಇಲ್ಲವೇ, ಅನುವಂಶೀಕವಾಗಿಯು ಬರಬಹುದು. ಹೇಳುವುದಾದರೆ, ಹೃದಯದ ಆರೋಗ್ಯವು ದೀರ್ಘಾವಧಿಯ ಜೀವನದ ಮೂಲಾಧಾರವಾಗಿದೆ. ಇದನ್ನು ಸದೃಡವಾಗಿಟ್ಟುಕೊಳ್ಳಲು ಈ ಮೂರು ಅಭ್ಯಾಸಗಳನ್ನು ಚಾಚು ತಪ್ಪದೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇವು ತುಂಬಾ ಸುಲಭವಾಗಿದ್ದರೂ ತುಂಬಾ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ.
ಇದನ್ನೂ ಓದಿ: ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ನಿಂದ ವೈಮಾನಿಕ ದಾಳಿ; 3 ಪತ್ರಕರ್ತರು ಸೇರಿದಂತೆ 15 ಮಂದಿ ಬಲಿ| airstrike
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊದಲು ಹೃದ್ರೋಗ ತಜ್ಞರು ಸಮತೋಲಿತ ಆಹಾರಕ್ಕೆ ಆದ್ಯತೆ ನೀಡುತ್ತಾರೆ. ಅವರು ಹೇಳುವ ಪ್ರಕಾರ, ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು, ಒಮೆಗಾ-3 ಕೊಬ್ಬಿನಾಮ್ಲಗಳಿರುವ ಮೀನು, ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಆಹಾರದಲ್ಲಿ ಬಳಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.
ಇನ್ನು ಸಂಸ್ಕರಿಸಿದ ಆಹಾರ, ಅತಿಯಾದ ಸಕ್ಕರೆಯನ್ನು ಸೇವಿಸುವುದನ್ನು ನಿಯಂತ್ರಿಸಬೇಕು. ಉದಾಹರಣೆಗೆ ಮೆಡಿಟರೇನಿಯನ್ ಆಹಾರವನ್ನು ಅನುಸರಿಸುವುದು. ಅಂದರೆ, ಆಲಿವ್ ಎಣ್ಣೆ, ಬೀಜಗಳು, ಮತ್ತು ಸೊಪ್ಪುಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಪ್ರತಿನಿತ್ಯ ಮಾಡುವ ನಿಯಮಿತ ಚಟುವಟಿಕೆಯು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ವಾರಕ್ಕೆ ಕನಿಷ್ಠ 150 ನಿಮಿಷಗಳ ಏರೋಬಿಕ್ ಚಟುವಟಿಕೆಗಳನ್ನು ಮಾಡುವುದು. ಉದಾಹರಣೆಗೆ ತ್ವರಿತ ನಡಿಗೆ, ಈಜುವುದು, ಸೈಕ್ಲಿಂಗ್ ವ್ಯಾಯಾಮವನ್ನು ಮಾಡುವುದು. ಇದರ ಜೊತೆಗೆ ವಾರಕ್ಕೆ ಎರಡು ದಿನ ಸ್ನಾಯು ಬಲವರ್ಧನೆಯ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯವನ್ನು ಸುಧಾರಿಸಲು ಸಹಾಯವಾಗುತ್ತದೆ. ಈ ಚಟುವಟಿಕೆಗಳು ರಕ್ತದೊತ್ತಡವನ್ನು ಕಡಿಮೆ ಮಾಡಿ, ರಕ್ತದ ಚಲನೆಯನ್ನು ಸುಧಾರಿಸಿ, ಒತ್ತಡವನ್ನು ಕಡಿಮೆ ಮಾಡುತ್ತವೆ.
ನಮ್ಮಲ್ಲಿರುವ ಒತ್ತಡವು ಹೃದಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆದರಿಂದ ಧ್ಯಾನ, ಯೋಗ, ಆಳವಾದ ಉಸಿರಾಟ ಮಾಡುವ ತಂತ್ರಗಳನ್ನು ಮಾಡುವುದರಿಂದ ಹೃದಯೀ ಸಂಬಂಧಿ ಕಾಯಿಲೆಗಳಿಂದ ಹಿಂದೆ ಸರಿಯಬಹುದು. ಹಾಗೇ ದಿನಕ್ಕೆ 7-8 ಗಂಟೆಗಳ ಗುಣಮಟ್ಟದ ನಿದ್ರೆಯನ್ನು ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ದಿನಚರಿಯಲ್ಲಿ ವಿಶ್ರಾಂತಿಗೆ ಸಮಯವನ್ನು ಮೀಸಲಿಡಿ ಹಾಗೂ ಧನಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಿ.
ಸಮತೋಲಿತ ಆಹಾರ ಸೇವನೆ, ವ್ಯಾಯಾಮ ಹಾಗೂ ಒತ್ತಡ ನಿರ್ವಹಣೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಹಾಗೂ ಈ ಅಭ್ಯಾಸಗಳು ದೀರ್ಘಾವಧಿಯ ಜೀವನವನ್ನು ಸುಧಾರಿಸಿ, ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ