ರಕ್ಷಾ ಬಂಧನಕ್ಕೆ ಟ್ರೆಂಡ್‌ನಲ್ಲಿರುವ ರಾಖಿ ಡಿಸೈನ್‌ಗಳು
- ಆಗಸ್ಟ್ 28ರಂದು ರಕ್ಷಾ ಬಂಧನ ಸಂಭ್ರಮ
- ಪರ್ಸನಲೈಸ್‌ಡ್ ರಾಖಿ ಹೊಸ ಟ್ರೆಂಡ್
- ಪರಿಸರ ಸ್ನೇಹಿ ರಾಖಿಗಳತ್ತ ಜನರ ಒಲವು
Latest Rakhi Designs: ಅಣ್ಣ-ತಮ್ಮಂದಿರ ಕೈಗೆ ರಾಖಿ ಕಟ್ಟಿ, ಪ್ರೀತಿ-ಬಾಂಧವ್ಯವನ್ನು ಸಂಭ್ರಮಿಸುವ ರಕ್ಷಾ ಬಂಧನ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷದ ರಕ್ಷಾ ಬಂಧನ ಆಗಸ್ಟ್ 28ರಂದು ನಡೆಯಲಿದ್ದು, ಹಬ್ಬ ಹತ್ತಿರವಾಗುತ್ತಿದ್ದಂತೆ ಮಾರುಕಟ್ಟೆಯಲ್ಲೂ ಬಗೆಬಗೆಯ ರಾಖಿ ಡಿಸೈನ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
ಪ್ರತಿ ವರ್ಷ ರಾಖಿಯಲ್ಲೂ ಹೊಸ ಟ್ರೆಂಡ್‌ಗಳು ಬರುತ್ತವೆ. ಈ ಬಾರಿ ಪರ್ಸನಲೈಸ್‌ಡ್ ರಾಖಿ, ಪರಿಸರ ಸ್ನೇಹಿ ರಾಖಿ, ಸಿಂಪಲ್ ಬ್ರೇಸ್‌ಲೆಟ್ ರಾಖಿ ಹಾಗೂ ಸಾಂಪ್ರದಾಯಿಕ ಡಿಸೈನ್‌ಗಳು ಹೆಚ್ಚು ಗಮನ ಸೆಳೆಯುತ್ತಿವೆ. ಹಾಗಾದರೆ ಇಷ್ಟೊಂದು ಆಯ್ಕೆಗಳು ಇರಬೇಕಾದರೆ, ಯಾವುದು ಉತ್ತಮ? ಎಂಬ ಗೊಂದಲ ಬೇಡ. ಇಲ್ಲಿವೆ ನೋಡಿ ಬಗೆ-ಬಗೆಯ ಡಿಸೈನ್‌ಗಳು.
ಈ ರಕ್ಷಾ ಬಂಧನಕ್ಕೆ ಟ್ರೆಂಡ್‌ನಲ್ಲಿರುವ ರಾಖಿಗಳು
ಫೋಟೋ, ಹೆಸರು ಇರುವ ರಾಖಿ
ಅಣ್ಣ ಅಥವಾ ತಮ್ಮನ ಫೋಟೋ, ಹೆಸರು ಅಥವಾ ಇಬ್ಬರಿಗೂ ಸಂಬಂಧಿಸಿದ ವಿಶೇಷ ಮೆಸೇಜ್ ಹಾಕಿಸಿ ರಾಖಿ ಮಾಡಿಸಿಕೊಳ್ಳುವ ಟ್ರೆಂಡ್ ಈಗ ಜೋರಾಗಿದೆ. ಸಹೋದರನಿಗೆ ಸ್ಪೆಷಲ್ ಆಗಿ ಏನಾದ್ರೂ ಕೊಡಬೇಕು ಅಂದುಕೊಂಡಿದ್ದರೆ ಇದು ಒಳ್ಳೆಯ ಆಯ್ಕೆ.
ಸಿಂಪಲ್ ರಾಖಿಗೂ ಫುಲ್ ಡಿಮ್ಯಾಂಡ್
ಹೆಚ್ಚು ಡಿಸೈನ್, ಅಲಂಕಾರ ಬೇಡ; ಸಿಂಪಲ್ ಆಗಿದ್ರೆ ಸಾಕು ಎನ್ನುವವರಿಗೆ ಮಿನಿಮಲಿಸ್ಟ್ ರಾಖಿಗಳು ಸೂಕ್ತ. ಬ್ರೇಸ್‌ಲೆಟ್ ರೀತಿ ಕಾಣಿಸುವ ಈ ರಾಖಿಗಳು ಸ್ಟೈಲಿಶ್ ಆಗಿಯೂ, ಧರಿಸಲು ಕಂಫರ್ಟಬಲ್ ಆಗಿಯೂ ಇರುತ್ತವೆ. ಇವುಗಳನ್ನು ದಿನ ಬಳಕೆಗೂ ಬಳಸಬಹುದು.
ಪರಿಸರ ಸ್ನೇಹಿ ರಾಖಿಗೆ ಆದ್ಯತೆ
ಈಗ ಎಲ್ಲಿ ನೋಡಿದ್ರೂ ಪರಿಸರ ಕಾಳಜಿಯ ಮಾತು. ಹೀಗಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸುವ ಇಕೋ-ಫ್ರೆಂಡ್ಲಿ ರಾಖಿಗಳಿಗೂ ಬೇಡಿಕೆ ಹೆಚ್ಚಾಗಿದೆ. ಪರಿಸರಕ್ಕೆ ಹಾನಿಯಾಗದ ರಾಖಿ ಆಯ್ಕೆ ಮಾಡಬೇಕು ಅನ್ನೋರಿಗೆ ಇದು ಬೆಸ್ಟ್.
ಸಾಂಪ್ರದಾಯಿಕ ರಾಖಿಗೂ ಬೇಡಿಕೆ
ರುದ್ರಾಕ್ಷಿ, ಮುತ್ತು, ಚಂದನ, ಬಣ್ಣದ ದಾರ ಹಾಗೂ ಸಾಂಪ್ರದಾಯಿಕ ಅಲಂಕಾರ ಇರುವ ರಾಖಿಗಳು ಎವರ್‌ಗ್ರೀನ್. ಸಾಂಪ್ರದಾಯಿಕ ಲುಕ್ ಇಷ್ಟಪಡುವ ಅಣ್ಣ-ತಮ್ಮಂದಿರಿಗೆ ಇಂಥ ರಾಖಿ ಚೆನ್ನಾಗಿ ಸೂಟ್ ಆಗುತ್ತೆ.
ನಿಮ್ಮ ಸೋದರನಿಗೆ ಯಾವುದು ಸೂಕ್ತ?
ಫ್ಯಾಷನ್ ಇಷ್ಟಪಡುವವರಾದ್ರೆ ಮಿನಿಮಲಿಸ್ಟ್ ರಾಖಿ, ಭಾವನಾತ್ಮಕ ಗಿಫ್ಟ್ ಇಷ್ಟಪಡುವವರಾದ್ರೆ ಹೇಳಿ ಮಾಡಿಸುವ ರಾಖಿ, ಪರಿಸರ ಕಾಳಜಿ ಇರುವವರಾದ್ರೆ ಇಕೋ-ಫ್ರೆಂಡ್ಲಿ ರಾಖಿ ಹಾಗೂ ಸಾಂಪ್ರದಾಯಿಕತೆಯನ್ನು ಇಷ್ಟಪಡುವವರಾದ್ರೆ ಕ್ಲಾಸಿಕ್ ರಾಖಿ ಆಯ್ಕೆ ಮಾಡಬಹುದು.
ರಾಖಿ ಡಿಸೈನ್ ಹೇಗೇ ಇರಲಿ, ಅದನ್ನು ಕಟ್ಟುವ ಹಿಂದಿನ ಪ್ರೀತಿ ಮತ್ತು ಸಹೋದರ-ಸಹೋದರಿಯರ ಬಾಂಧವ್ಯವೇ ಈ ಹಬ್ಬದ ನಿಜವಾದ ವಿಶೇಷತೆ.