ಅಂದಹಾಗೆ ಇದನ್ನು ತಯಾರಿಸುವುದು ಕೂಡ ತುಂಬಾ ಸರಳವಾಗಿದೆ. ಇದರ ತಯಾರಿಗೆ ಕೆಲವೇ ಪದಾರ್ಥಗಳು ಬೇಕಾಗುತ್ತವೆ ಮತ್ತು ಬೇಯಿಸಲು ಬಹಳ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಆಲೂಗಡ್ಡೆ ಬಳಸಿ ತಯಾರಿಸಲಾಗಿದ್ದರೂ ಸಹ ಇದು ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದೇನಲ್ಲ. ಪ್ರತಿ ವಾರ ನಿರ್ದಿಷ್ಟ ಪ್ರಮಾಣದ ಫ್ರೆಂಚ್ ಫ್ರೈಗಳನ್ನು ತಿನ್ನುವುದರಿಂದ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಹೊಸ ಅಧ್ಯಯನವೊಂದು ಕಂಡುಹಿಡಿದಿದೆ.
health-tips : ಫ್ರೆಂಚ್ ಫ್ರೈ ಯಾರಿಗೆ ಇಷ್ಟವಿಲ್ಲ ಹೇಳಿ. ಇದರ ಹೆಸರು ಕೇಳುತ್ತಿದ್ದಂತೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಬಾಯಲ್ಲೂ ಸಹ ನೀರು ಬರುತ್ತೆ. ಜನಪ್ರಿಯ ಫಾಸ್ಟ್ ಫುಡ್ ಫ್ರೆಂಚ್ ಫ್ರೈಯನ್ನು ಕೆಲವರು ವಾರಕ್ಕೆ ಎರಡರಿಂದ ಮೂರು ಬಾರಿಯಾದರೂ ತಿನ್ನಲು ಇಷ್ಟಪಡ್ತಾರೆ. ಇದನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ಆಹಾರ ಪ್ರಿಯರನ್ನು ತನ್ನ ಬಳಿ ಆಕರ್ಷಿಸುವ ಶಕ್ತಿಯನ್ನು ಈ ಫ್ರೆಂಚ್ ಫ್ರೈ ಹೊಂದಿದೆ.
ಇದನ್ನೂ ಓದಿ: ಮಡೆನೂರು ಮನುಗೆ ಬಿಗ್ ರಿಲೀಫ್; ಕೇಸ್ ಹಿಂಪಡೆದ ಸಂತ್ರಸ್ತೆ; 'ಅತ್ಯಾ*ಚಾರ' ಪ್ರಕರಣ ಇತ್ಯರ್ಥ | Madenur Manu
ಗಮನಾರ್ಹವಾಗಿ ಸಂಶೋಧಕರು ಯುನೈಟೆಡ್ ಸ್ಟೇಟ್ಸ್‌ನ 205,000 ಕ್ಕೂ ಹೆಚ್ಚು ವೈದ್ಯಕೀಯ ವೃತ್ತಿಪರರಿಂದ ಆರೋಗ್ಯ ಡೇಟಾವನ್ನು ಅಧ್ಯಯನ ಮಾಡಿದ್ದಾರೆ. ಇಲ್ಲಿ ಭಾಗವಹಿಸುವವರು ಸುಮಾರು 40 ವರ್ಷಗಳಲ್ಲಿ ವಿವರವಾದ ಆಹಾರ ಪ್ರಶ್ನಾವಳಿಗಳನ್ನು ಭರ್ತಿ ಮಾಡಿದ್ದು, ಆಲೂಗಡ್ಡೆ ತಿಂದವರಲ್ಲಿ ಯಾರಿಗೆ ಟೈಪ್ 2 ಮಧುಮೇಹ ಬಂತು ಎಂಬುದನ್ನು ಸಂಶೋಧಕರು ಪರೀಕ್ಷಿಸಿದ್ದಾರೆ. ಈ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟವು ಕಾಲಾನಂತರದಲ್ಲಿ ಅಧಿಕವಾಗಿ ಉಳಿಯಲು ಕಾರಣವಾಗುತ್ತದೆ.
ಬುಧವಾರ ಬಿಎಂಜೆ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ವಾರಕ್ಕೆ ಮೂರು ಬಾರಿ ಫ್ರೆಂಚ್ ಫ್ರೈಗಳನ್ನು ತಿನ್ನುವುದರಿಂದ ಟೈಪ್ 2 ಮಧುಮೇಹ ಬರುವ ಸಾಧ್ಯತೆಗಳು ಶೇಕಡಾ 20 ರಷ್ಟು ಹೆಚ್ಚಾಗಬಹುದು ಎಂದು ಕಂಡುಹಿಡಿದಿದೆ. ಸಂಶೋಧನೆಗಳ ಪ್ರಕಾರ, ವಾರಕ್ಕೆ ಐದು ಬಾರಿ ಫ್ರೈಸ್ ಸೇವಿಸುವ ಜನರು ಶೇಕಡಾ 27 ರಷ್ಟು ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ.
ಅಧ್ಯಯನದ ಅವಧಿಯಲ್ಲಿ ಆಹಾರ ಪದ್ಧತಿಗೆ ಸಂಬಂಧಿಸಿದ ಸಮೀಕ್ಷೆಗಳನ್ನು ಹಲವಾರು ಬಾರಿ ಪುನರಾವರ್ತಿಸಲಾಯಿತು. ನಂತರದ ದಿನಗಳಲ್ಲಿ, 22,000 ಕ್ಕೂ ಹೆಚ್ಚು ಟೈಪ್ 2 ಮಧುಮೇಹ ಪ್ರಕರಣಗಳು ದಾಖಲಾಗಿವೆ ಎಂದು ಬಿಬಿಸಿ ವರದಿ ಮಾಡಿದೆ. ಆಲೂಗಡ್ಡೆ ಸೇವನೆಯಿಂದ ಉಂಟಾಗುವ ಅಪಾಯಗಳು ಅಡುಗೆ ವಿಧಾನವನ್ನು ಅವಲಂಬಿಸಿ ಬದಲಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಆಲೂಗಡ್ಡೆಯನ್ನು ಹುರಿಯುವಾಗ, ಅವು ಹೀರಿಕೊಳ್ಳುವ ಕೊಬ್ಬಿನಿಂದಾಗಿ ಶಕ್ತಿಯ ಅಂಶ. ಕ್ಯಾಲೋರಿಗಳು ಹೆಚ್ಚಾಗುತ್ತದೆ. ನೀವು ಫ್ರೆಂಚ್ ಫ್ರೈಗಳನ್ನು ಹಲವು ಬಾರಿ ಸೇವಿಸಿದರೆ, ಅದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ ಫಾಸ್ಟ್ ಫುಡ್ ಫ್ರೈಗಳನ್ನು ತಿನ್ನುವುದಕ್ಕಿಂತ ಆರೋಗ್ಯಕರ ಎಣ್ಣೆಗಳನ್ನು ಬಳಸಿ ಮನೆಯಲ್ಲಿ ಫ್ರೈಗಳನ್ನು ತಯಾರಿಸುವುದು ಉತ್ತಮ ಆಯ್ಕೆಯಾಗಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
(ಏಜೆನ್ಸೀಸ್)