ಲೈಫ್‌ಸ್ಟೈಲ್

ಸ್ನಾಯುಗಳ ಆರೋಗ್ಯಕ್ಕಾಗಿ ಮನೆಯಲ್ಲಿಯೇ ಸಿಗುವ ಈ ಆಹಾರಗಳನ್ನು ಸೇವಿಸಿ! Muscle Health

Muscle Health: ಇಂದಿನ ದಿನಗಳಲ್ಲಿ ಜನರಲ್ಲಿ ಹೆಚ್ಚುತ್ತಿರುವ ಒತ್ತಡ, ದೈಹಿಕ ತೊಂದರೆಗಳು ಹಾಗೂ ಇನ್ನಿತರ ವಿಚಾರಗಳಿಂದಾಗಿ ಸರಿಯಾಗಿ ಆಹಾರ ಸೇವಿಸದೇ ಸ್ನಾಯುಗಳಲ್ಲಿ ಬಲವನ್ನು ಕಳೆದುಕೊಂಡಿರುತ್ತಾನೆ. ಈ ಸಂದರ್ಭದಲ್ಲಿ ಅವುಗಳ ಶಕ್ತಿಯನ್ನು ಹೆಚ್ಚಿಸಲು ಎಷ್ಟೇ ಪ್ರಯತ್ನಪಟ್ಟರೂ ಅದು ಸಾಧ್ಯವಾಗದೇ ಇರಬಹುದು.

ಅಂದಹಾಗೇ ನಾವು ಸೇವಿಸುವಂತಹ ಆಹಾರಗಳಲ್ಲಿ ಅಧಿಕವಾದ ಪ್ರೊಟೀನ್​ ಇದ್ದರೆ ಇವು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಆದರೆ ಯಾವ ಆಹಾರಗಳನ್ನು ಸೇವಿಸುವುದರಿಂದ ಸ್ನಾಯುಗಳಿಗೆ ಬಲ ಸಿಗುತ್ತದೆ ಎಂದು ಅನೇಕ ಜನರಿಗೆ ತಿಳಿದಿರುವುದಿಲ್ಲ.

ನೀವೇನಾದರೂ, ಸ್ನಾಯುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತಿದ್ದರೆ, ನಿಮ್ಮ ಅಡುಗೆಮನೆಯಲ್ಲಿಯೇ ಸಿಗುವಂತಹ ಈ ಪದಾರ್ಥಗಳನ್ನು ಪ್ರತಿನಿತ್ಯ ಸೇವಿಸಿ. ಇವು ನಿಮ್ಮ ಆರೋಗ್ಯವನ್ನು ಕಾಪಾಡುವುದಲ್ಲದೇ, ಸ್ನಾಯುಗಳನ್ನು ಬಲಶಾಲಿಯಾಗಿರುವಂತೆ ಮಾಡುತ್ತದೆ. ಆಗಿದ್ದರೆ ಆ ಆಹಾರಗಳು ಯಾವುದು ಎಂದು ನೋಡೋಣ ಬನ್ನಿ...

* ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳು ಅಧಿಕವಾಗಿ ಪ್ರೊಟೀನ್​ ಮತ್ತು ಫೈಬರ್​ಗಳನ್ನು ಹೊಂದಿರುತ್ತದೆ. ಇವುಗಳಲ್ಲಿರುವ ಲ್ಯೂಸಿನ್, ಅಮೈನೋ ಆಸಿಡ್‌ಗಳು ಸ್ನಾಯುಗಳ ಬಲವನ್ನು ಉತ್ತೇಜಿಸುತ್ತದೆ ಹಾಗೆಯೇ ಇದರಲ್ಲಿರುವ ಕಾರ್ಬೋಹೈಡ್ರೇಟ್​ಗಳು ದೇಹಕ್ಕೆ ಪೂರಕ ಶಕ್ತಿಯನ್ನು ನೀಡುತ್ತವೆ. ದ್ವಿದಳ ಧಾನ್ಯಗಳ ನಿಯಮಿತ ಸೇವನೆಯು ಸ್ನಾಯು ಬಲವನ್ನು 90 ರಷ್ಟು ಹೆಚ್ಚಿಸುತ್ತದೆ.

* ಹುರಿದ ಕಡಲೆ ಹಿಟ್ಟು

ಹುರಿದ ಕಡಲೆ ಹಿಟ್ಟು ಒಂದು ಜನಪ್ರಿಯ ಆಹಾರ ಪದಾರ್ಥವಾಗಿದೆ. ಇದು ಹೆಚ್ಚು ಪ್ರೊಟೀನ್​ ನೀಡುವ ಸೂಪರ್​ ಫುಡ್ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಅಮೈನೋ ಆಸಿಡ್‌ಗಳು ಸ್ನಾಯುಗಳನ್ನು ಉತ್ತೇಜಿಸಿ, ಬಿಗಿತವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಇದು ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ, ಐರನ್ ಸ್ನಾಯು ಚಟುವಟಿಕೆಯನ್ನು ಬೆಂಬಲಿಸಿ ದೇಹವನ್ನು ಸದೃಢವಾಗಿರಲು ಸಹಾಯ ಮಾಡುತ್ತದೆ.

* ಕಡಲೆಕಾಯಿಗಳು

ಕಡಲೆಕಾಯಿಗಳಲ್ಲಿ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿದ್ದು, ಇದು ಸ್ನಾಯುಗಳ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಕ್ಯಾಲೋರಿಯನ್ನು ಹೊಂದಿದ್ದು, ವ್ಯಾಯಾಮ ಮತ್ತು ಸ್ನಾಯುಗಳ ನಿರ್ಮಾಣಕ್ಕೆ ನಿರಂತರ ಶಕ್ತಿಯನ್ನು ಒದಗಿಸುತ್ತದೆ. ಕಡಲೆಕಾಯಿಯಲ್ಲಿ ನಿಖರವಾಗಿ ಪ್ರೊಟೀನ್​ 25 ಗ್ರಾಂನಲ್ಲಿರುತ್ತದೆ. ಹಾಗಾಗಿ ಸ್ನಾಯುಗಳ ಶಕ್ತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವವರು ಈ ಧಾನ್ಯವನ್ನು ಪ್ರತಿನಿತ್ಯ ಸೇವಿಸುವುದು ಉತ್ತಮವಾಗಿದೆ.

* ಮೊಸರು

ಮೊಸರು ಒಂದು ಪೌಷ್ಟಿಕಾಂಶಗಳಿಂದ ಕೂಡಿದ ಆಹಾರವಾಗಿದೆ. ಇದು ಸ್ನಾಯು ಬಲವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹಾಗೆಯೇ ಇದು ವೇಗವಾಗಿ ಜೀರ್ಣವಾಗುವುದರಿಂದ ರಾತ್ರಿಯಿಡೀ ಸ್ನಾಯುಗಳ ಸಂಯೋಜನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಅಮೈನೋ ಆಸಿಡ್‌ಗಳು ವ್ಯಾಯಾಮದ ನಂತರ ಸ್ನಾಯುಗಳ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಸ್ನಾಯುಗಳ ಬಲ ಹೊಂದಬೇಕೆಂದರೆ ಮೊಸರನ್ನು ಆಹಾರದಲ್ಲಿ ಸೇವಿಸಿ.

* ಮೊಟ್ಟೆಗಳು

ಮೊಟ್ಟೆಗಳಲ್ಲಿ ಪ್ರೊಟೀನ್​ಗಳು ಹೇರಳವಾಗಿರುತ್ತವೆ. ಇವು ಸ್ನಾಯುಗಳ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿರುವ ಹಳದಿ ಭಾಗ ಹಾಗೂ ಬಿಳಿ ಭಾಗದಲ್ಲಿ ಸುಮಾರು 6 ಗ್ರಾಂ ಪ್ರೊಟೀನ್​ ಕಂಡುಬರುತ್ತದೆ. ಹಾಗಾಗಿ ವ್ಯಾಯಾಮ ಮಾಡಿದ ನಂತರ ಇದನ್ನು ಸೇವಿಸುವುದರಿಂದ ನೋವುಗಳು ಬೇಗನೆ ಕ್ಷೀಣಿಸುತ್ತವೆ. ಪ್ರತಿನಿತ್ಯ ಮೊಟ್ಟೆ ಸೇವಿಸುವುದರಿಂದ ವಿಟಮಿನ್ B12, D ಮತ್ತು ಐರನ್​ಗಳು ಸ್ನಾಯು ಚಟುವಟಿಕೆಯನ್ನು ಬೆಂಬಲಿಸಿ, ಆರೋಗ್ಯಕರ ಫ್ಯಾಟ್‌ಗಳು ಶಕ್ತಿ ನೀಡುತ್ತವೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.