Health tips: ಪ್ರತಿಯೊಬ್ಬರ ದೇಹಕ್ಕೂ ಜೀವಸತ್ವಗಳು ಬಹಳ ಮುಖ್ಯ. ಅವು ದೇಹವನ್ನು ಆರೋಗ್ಯವಾಗಿರಿಸಲು ಮತ್ತು ಸಧೃಡವಾರಿಸಲು ಸಹಾಯ ಮಾಡುತ್ತದೆ. ಹಾಗೆಯೇ ವಿಟಮಿನ್ ಡಿ ಕೂಡ ನಮ್ಮ ದೇಹಕ್ಕೆ ಅಗತ್ಯವಾದ ಅಂಶವಾಗಿದೆ. ಆದರೆ, ಇಂದು ಅನೇಕ ಜನರು ವಿಟಮಿನ್ ಡಿ ಕೊರತೆಯನ್ನು ಅನುಭವಿಸುತ್ತಿದ್ದಾರೆ.
ನಮ್ಮ ದೇಹಕ್ಕೆ ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ಯನ್ನು ಸುಲಭವಾಗಿ ತಯಾರಿಸಬಹುದು. ಆದರೆ, ಇಂದಿನ ವೇಗದ ಜೀವನಶೈಲಿಯಿಂದಾಗಿ ಅನೇಕ ಜನರು ಈ ತೊಂದರೆಯಿಂದ ಬಳಲುತ್ತಿದ್ದಾರೆ. ವಾಸ್ತವವಾಗಿ ಹೇಳುವುದಾದರೆ, ಇಂದಿನ ದಿನಗಳಲ್ಲಿ ಆದಷ್ಟು ಜನರು ಮನೆಯಲ್ಲಿಯೇ ಇರುತ್ತಾರೆ ಇಲ್ಲವೇ ಕಚೇರಿಯಲ್ಲಿ ಕುಳಿತಿರುತ್ತಾರೆ. ಹಾಗಾಗಿ ವಿಟಮಿನ್ ಡಿ ಹಾಗೂ ಸೂರ್ಯನ ಕಿರಣಗಳು ಸಿಗುವುದಿಲ್ಲ.
ಸೂರ್ಯನ ಬೆಳಕು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದ್ದರೂ, ಅದನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ಆಹಾರಗಳಿವೆ. ನೀವು ಸಸ್ಯಾಹಾರಿಗಳಾಗಿದ್ದರೆ, ನಿಮ್ಮಲ್ಲಿ ವಿಟಮಿನ್ ಡಿ ಹೆಚ್ಚಿಸುವ ಆಹಾರಗಳು ಕಡಿಮೆಯಾಗಬಹುದು. ಆದರಿಂದ ನಿಮ್ಮ ಆಹಾರದಲ್ಲಿ ವಿಟಮಿನ್ ಡಿ ಪ್ರಮಾಣವನ್ನು ಹೆಚ್ಚಿಸಲು ಕೆಲವು ಸುಲಭ ಮತ್ತು ಉತ್ತಮ ಮಾರ್ಗಗಳನ್ನು ಅನುಸರಿಸಿ...
ಹಾಲು, ಮೊಸರು ಮತ್ತು ಇತರ ಕೆಲವು ಆಹಾರಗಳು ವಿಟಮಿನ್ ಡಿ ಯಿಂದ ಸಮೃದ್ಧವಾಗಿವೆ. ಆದ್ದರಿಂದ ಪ್ರತಿದಿನ ಒಂದು ಲೋಟ ಹಾಲು ಅಥವಾ ಒಂದು ಬಟ್ಟಲು ಮೊಸರು ಕುಡಿಯುವುದರಿಂದ ವಿಟಮಿನ್ ಡಿ ಹೆಚ್ಚಿಸಲು ಸುಲಭವಾದ ಮಾರ್ಗವಾಗಿದೆ.
ಅಣಬೆಗಳು ಸೂರ್ಯನ ಬೆಳಕಿಗೆ ಒಡ್ಡಿಕೊಂಡಿರುವುದರಿಂದ ಅದು ವಿಟಮಿನ್ ಡಿಯನ್ನು ಉತ್ಪಾದಿಸುತ್ತವೆ. ಹಾಗೆಯೇ ಬಿಸಿಲಿನಲ್ಲಿ ಒಣಗಿಸಿದ ಶಿಟೇಕ್, ಮೈಟೇಕ್ ಅಥವಾ ಪೋರ್ಟೊಬೆಲ್ಲೊ ಅಣಬೆಗಳು ವಿಟಮಿನ್ ಡಿ ಯ ಉತ್ತಮ ಮೂಲಗಳಾಗಿವೆ. ಅವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತವೆ.
ಇದನ್ನೂ ಓದಿ: ಹೋಟೆಲ್ಗೆ ಕರೆಸಿ ಪ್ರೇಯಸಿಯ ಬರ್ಬರ ಹತ್ಯೆ: ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ! Gayathri murder case
ಸೋಯಾಬೀನ್, ಬಾದಾಮಿ ಮತ್ತು ಓಟ್ಸ್ ಹಾಲುಗಳು ಹೆಚ್ಚಾಗಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನಿಂದ ಕೂಡಿದ್ದು, ಇವು ಸಸ್ಯಾಹಾರಿಗಳಿಗೆ ವಿಟಮಿನ್ ಡಿ ಯ ಅತ್ಯುತ್ತಮ ಗುಣಗಳನ್ನು ನೀಡಲು ಸಹಾಯ ಮಾಡುತ್ತದೆ.
ರಾಗಿ ಧಾನ್ಯವು ಕ್ಯಾಲ್ಸಿಯಂ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಹೆಚ್ಚಾಗಿ ಬಿಸಿಲಿನಲ್ಲಿ ಒಣಗಿಸಿದ ಅಥವಾ ಮೊಳಕೆಯೊಡೆದ ರಾಗಿಯು ವಿಟಮಿನ್ ಡಿ ಗುಣಾಂಶವನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಡಿ ಪಡೆಯಲು ಸಹಾಯವಾಗುತ್ತದೆ.
ಆವಕಾಡೊ ಕೇವಲ ರುಚಿಕರವಾಗಿರುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವಂತಹ ಹಣ್ಣಾಗಿದೆ. ಇದರಲ್ಲಿ ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ವಿಟಮಿನ್ ಡಿ ನಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಹೆಚ್ಚಿನ ವಿಟಮಿನ್ ಡಿ ಇಲ್ಲದಿದ್ದರೂ, ಇದು ನಿಮ್ಮ ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬಾದಾಮಿ, ಚಿಯಾ ಬೀಜಗಳು ಮತ್ತು ಅಗಸೆಬೀಜಗಳು ವಿಟಮಿನ್ ಡಿ ಅನ್ನು ಹೊಂದಿರುವುದಿಲ್ಲ. ಬದಲಿಗೆ ಇವು ಹೆಚ್ಚಿನ ಮಟ್ಟದ ಮೆಗ್ನೀಸಿಯಮ್ ಅನ್ನು ಹೊಂದಿರುತ್ತವೆ. ಇವುಗಳನ್ನು ಸೇವಿಸುವುದರಿಂದ ದೇಹವು ವಿಟಮಿನ್ ಡಿ ಅನ್ನು ಹೀರಿಕೊಳ್ಳಲು ಸಹಾಯಮಾಡುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ