ವ್ಯಾಯಮಾ, ವಾಕ್ ಹೀಗೆ ದೇಹದ ಆಯಾಸದಿಂದ ಅನೇಕ ಬಾರಿ ನಾವು ಅತಿಯಾದ ಆಯಾಸವನ್ನು ಅನುಭವಿಸುತ್ತೇವೆ ಎಂದು ಭಾವಿಸುತ್ತೇವೆ. ಆದರೆ ಅದು ತಪ್ಪು, ಈ ಆಯಾಸವು ಕೆಲವು ಕಾಯಿಲೆ ಅಥವಾ ಪೋಷಕಾಂಶಗಳ ಕೊರತೆಯನ್ನು ಸೂಚಿಸುತ್ತಿರುತ್ತದೆ. ಅದರಲ್ಲಿ ಮುಖ್ಯವಾಗಿ ನಮ್ಮ ದೇಹದೊಳಗೆ ನಡೆಯುವ ಕ್ರಿಯೆಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾಗಿರುವ ಮೆಗ್ನೀಸಿಯಮ್ ಕೂಡ ಒಂದು.
ಇದನ್ನು ಓದಿ: ಮಲಗುವ ಮುನ್ನ ಹಾಲು ಸೇವಿಸುವುದು ಉತ್ತಮ ಅಭ್ಯಾಸ; ಜತಗೆ ಡ್ರೈಫ್ರೂಟ್ಸ್ ಸೇರಿಸಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
ದೇಹದಲ್ಲಿನ 300ಕ್ಕೂ ಹೆಚ್ಚು ಅಗತ್ಯ ಪ್ರಕ್ರಿಯೆಗಳು ಮೆಗ್ನೀಸಿಯಮ್ ಅನ್ನು ಅವಲಂಬಿಸಿವೆ. ಇದರ ಕೊರತೆಯಿಂದಾಗಿ ಆಯಾಸ, ಸ್ನಾಯು ಸೆಳೆತ, ನಿದ್ರಾಹೀನತೆ ಮತ್ತು ಅನಿಯಮಿತ ಹೃದಯ ಬಡಿತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಈಗ ಪ್ರಶ್ನೆ ಇರುವುದು ಮೆಗ್ನೀಸಿಯಮ್ ಭರಿತ ಆಹಾರಕ್ಕಾಗಿ ನಾವು ಏನು ತಿನ್ನಬೇಕು? ಪೋಷಕಾಂಶಗಳ ಜತೆಗೆ ಹೆಚ್ಚಿನ ಪ್ರಮಾಣದ ಮೆಗ್ನೀಸಿಯಮ್ ಅನ್ನು ಒಳಗೊಂಡಿರುವ ಅನೇಕ ಸೂಪರ್‌ಫುಡ್‌ಗಳು ಇವೆ. ದಿನ ನಾವು ಅದನ್ನು ನೋಡುತ್ತೇವೆ ಆದರೆ ಸಂಪೂರ್ಣ ಮಾಹಿತಿ ತಿಳಿದಿಕೊಂಡಿರುವುದಿಲ್ಲ. ಮೆಗ್ನೀಸಿಯಮ್ ಹೇರಳವಾಗಿ ಯಾವುದರಿಂದ ಲಭ್ಯವಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.