ಲೈಫ್‌ಸ್ಟೈಲ್

ಚಹಾದೊಂದಿಗೆ ಕ್ರಿಸ್ಪಿಯಾದ ಕಾರ್ನ್ ಚಾಟ್ ಸೇವಿಸಿ.. ಮಾಡೋದು ಬಹಳ ಸುಲಭ

Webdesk - Ashwini HR

ಬೆಂಗಳೂರು: ಕಾರ್ನ್ ಚಾಟ್... ಭಾರತೀಯರ ಮನೆಯಲ್ಲಿ ತಯಾರಾಗುವ ರುಚಿಕರವಾದ, ಗರಿಗರಿಯಾದ ಮಸಾಲೆಯುಕ್ತ ಆಹಾರವಾಗಿದೆ. ಇದು ಪಾರ್ಟಿ, ಸೆಲೆಬ್ರೇಷನ್ ಅಥವಾ ಸರಳವಾಗಿ ಸಂಜೆಯ ಸಮಯದಲ್ಲಿ ಮಾಡಬಹುದಾದ ಜನಪ್ರಿಯ ಭಕ್ಷ್ಯವಾಗಿದೆ. ಹಾಗಾದರೆ ಗರಿಗರಿಯಾದ ಕಾರ್ನ್ ಚಾಟ್ ಮಾಡುವುದು ಹೇಗೆ... ನೋಡೋಣ ಬನ್ನಿ...


ಬೇಕಾಗುವ ಪದಾರ್ಥಗಳು
1 ಕಪ್ ಸಿಹಿ ಕಾರ್ನ್ (ಮೆಕ್ಕೆ ಜೋಳದ ಕಾಳುಗಳು), 2 ಟೀಸ್ಪೂನ್ ಕಾರ್ನ್ ಫ್ಲೋರ್, 1/4 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕಂತೆ ಉಪ್ಪು, ಹುರಿಯಲು ಎಣ್ಣೆ

ಅಲಂಕಾರಕ್ಕೆ
1 tbsp ಸಣ್ಣದಾಗಿ ಹೆಚ್ಚಿದ ಈರುಳ್ಳಿ, 1 tbsp ಸಣ್ಣದಾಗಿ ಹೆಚ್ಚಿದ ಟೊಮೆಟೊ, 1 tbsp ಸಣ್ಣದಾಗಿ ಹೆಚ್ಚಿದ ಸೌತೆಕಾಯಿ, ಸಣ್ಣಗೆ ಹೆಚ್ಚಿದ 1 ಹಸಿರು ಮೆಣಸಿನಕಾಯಿ (ಬೇಕಾದರೆ), 1 tbsp ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, 1/2 ಟೀಸ್ಪೂನ್ ಚಾಟ್ ಮಸಾಲಾ, 1/2 ಟೀಸ್ಪೂನ್ ಹುರಿದ ಜೀರಿಗೆ ಪುಡಿ, 1/2 ಟೀಸ್ಪೂನ್ ಕಪ್ಪು ಉಪ್ಪು, 1 ಟೀಸ್ಪೂನ್ ನಿಂಬೆ ರಸ

ಮಾಡುವ ವಿಧಾನ
*ಬಟ್ಟಲಿನಲ್ಲಿ ಮೆಕ್ಕೆ ಜೋಳದ ಕಾಳುಗಳು, ಕಾರ್ನ್ ಫ್ಲೋರ್ , ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ. ಕಾರ್ನ್ ಫ್ಲೋರ್ ಮಿಶ್ರಣದಲ್ಲಿ ಜೋಳವನ್ನು ಸಮವಾಗಿ ಮ್ಯಾರಿನೇಟ್ ಮಾಡಲು ಚೆನ್ನಾಗಿ ಕೈಯ್ಯಾಡಿ.
*ಹುರಿಯಲು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಬಿಸಿಯಾದ ಮೇಲೆ ಮ್ಯಾರಿನೇಟ್ ಆದ ಜೋಳದ ಕಾಳುಗಳನ್ನು ಸೇರಿಸಿ. ಗರಿಗರಿಯಾಗಿ ಗೋಲ್ಡನ್ ಬ್ರೌನ್ ಆಗುವವರೆಗೆ ಅವುಗಳನ್ನು ಫ್ರೈ ಮಾಡಿ. ಹುರಿದ ಕಾರ್ನ್ ಅನ್ನು ಚಮಚದೊಂದಿಗೆ ತೆಗೆದುಹಾಕಿ. ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಟಿಶ್ಯೂ ಮೇಲೆ ಹಾಕಿ.
*ಪ್ರತ್ಯೇಕ ಮಿಕ್ಸಿಂಗ್ ಬೌಲ್‌ನಲ್ಲಿ, ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಸೌತೆಕಾಯಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ.
*ಡ್ರೆಸ್ಸಿಂಗ್‌ಗೆ ಚಾಟ್ ಮಸಾಲಾ, ಹುರಿದ ಜೀರಿಗೆ ಪುಡಿ, ಕಪ್ಪು ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
*ಗರಿಗರಿಯಾದ ಕಾರ್ನ್ ಚಾಟ್ ಅನ್ನು ತಕ್ಷಣವೇ ಬಡಿಸಿ, ಹೆಚ್ಚುವರಿಯಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಯಸಿದಲ್ಲಿ ಚಾಟ್ ಮಸಾಲಾವನ್ನು ಸಿಂಪಡಿಸಿ.