ಲೈಫ್‌ಸ್ಟೈಲ್

ಬಿಲ್ ಗೇಟ್ಸ್‌ಗೆ ಚಹಾ ಮಾಡಿ ಕೊಟ್ಟ ಡಾಲಿ ಚಾಯ್‌ವಾಲಾ ನಿತ್ಯದ ಆದಾಯವೆಷ್ಟು?

Webdesk - Ashwini HR

ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಸುಮಾರು $149 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಮತ್ತು ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬಿಲ್ ಗೇಟ್ಸ್ ಅವರ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ತಕ್ಷಣ ವೈರಲ್ ಆಗುತ್ತವೆ. ಬಿಲ್ ಗೇಟ್ಸ್ ಭಾರತಕ್ಕೆ ಭೇಟಿ ನೀಡಿದಾಗಲೆಲ್ಲಾ ಅವರು ಯಾವಾಗಲೂ ವಿಡಿಯೋ ಅಥವಾ ಫೋಟೋವನ್ನು ಹಂಚಿಕೊಳ್ಳುತ್ತಾರೆ, ಅದು ಬಹು ಬೇಗ ಚರ್ಚೆಯ ವಿಷಯವಾಗುತ್ತದೆ.

ಇತ್ತೀಚೆಗೆ, ಪ್ರಸಿದ್ಧ ಡಾಲಿ ಚಾಯ್‌ವಾಲಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಬಿಲ್ ಗೇಟ್ಸ್ 'ಒಂದು ಚಾಯ್ ಪ್ಲೀಸ್' ಎಂದು ಹೇಳುತ್ತಿರುವುದು ಕಂಡುಬಂದಿದೆ. ಅಂದಹಾಗೆ ಇಂದು ನಾವು ಬಿಲ್ ಗೇಟ್ಸ್‌ಗೆ ಚಹಾ ಮಾಡಿ ಕೊಟ್ಟ ಡಾಲಿ ಚಾಯ್‌ವಾಲಾ ಅವರ ನಿವ್ವಳ ಮೌಲ್ಯದ ಬಗ್ಗೆ ತಿಳಿದುಕೊಳ್ಳೋಣ.  ಒಂದು ವಿಷಯ...ಈ ವಿಡಿಯೋ ಕಾಣಿಸಿಕೊಂಡ ನಂತರ ಡಾಲಿ ಚಾಯ್‌ವಾಲಾ ಸಾಕಷ್ಟು ಫೇಮಸ್ ಆಗಿದ್ದಾರೆ.

ಡಾಲಿ ಚಾಯ್‌ವಾಲಾ ಸ್ಟೈಲ್
ಡಾಲಿ ಚಾಯ್‌ವಾಲಾ ತನ್ನ ಅಸಾಮಾನ್ಯ ಸ್ಟೈಲ್ ಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ.  ತನ್ನ ಅಸಾಮಾನ್ಯ ಲುಕ್ ಗಾಗಿಯೂ ಬಹಳಷ್ಟು ಸದ್ದು ಮಾಡುತ್ತಾರೆ. ಬ್ರೈಟ್ ಕಲರ್ ಶರ್ಟ್, ಕನ್ನಡಕ... ಹೀಗೆ ವರ್ಣರಂಜಿತ ಸ್ಟೈಲ್ ಡಾಲಿ ಚಾಯ್‌ವಾಲಾ ರನ್ನು ಎದ್ದು ಕಾಣುವಂತೆ ಮಾಡುತ್ತದೆ. ಅಂದಹಾಗೆ ಡಾಲಿ ರಜನಿಕಾಂತ್ ಸ್ಟೈಲ್ನಲ್ಲಿ ಚಹಾ ಕೊಡುವುದನ್ನು ನೀವು ಗಮನಿಸಬಹುದು.

ನಿವ್ವಳ ಮೌಲ್ಯವೆಷ್ಟು?
ಡಾಲಿ ಕಳೆದ 16 ವರ್ಷಗಳಿಂದ ಮಹಾರಾಷ್ಟ್ರದ ನಾಗ್ಪುರದಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಸಹ ಡಾಲಿಯ ಚಹಾದ ಬಗ್ಗೆ ಕ್ರೇಜ್ ಬೆಳೆಸಿಕೊಂಡಿದ್ದಾರೆ. ಅವರ ಚಹಾ ಕುಡಿಯಲು ಬರುತ್ತಾರೆ ಇದೇ  ಟೀಯಿಂದ ಡಾಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಡಾಲಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯ ಒಡೆಯ. ಪ್ರತಿ ಕಪ್ ಚಹಾದ ಬೆಲೆ 7 ರೂ., ಅವರ ದೈನಂದಿನ ಗಳಿಕೆಯು 2450 ರೂ-3500 ರೂ. ಪ್ರತಿದಿನ 350 ರಿಂದ 500 ಕಪ್ ಚಾಯ್ ಮಾರಾಟದಿಂದ ಈ ಆದಾಯ ಬರುತ್ತದೆ.

ಡಾಲಿ ಚಾಯ್‌ವಾಲಾ ಚಹಾ ಮಾಡುವ ವಿಧಾನವನ್ನು ಜನರು ಬಹಳ ಇಷ್ಟಪಡುತ್ತಾರೆ. ದೂರದೂರುಗಳಿಂದ ಫುಡ್ ವ್ಲಾಗರ್‌ಗಳು ತಮ್ಮ ವಿಡಿಯೋಗಳನ್ನು ಮಾಡಲು ಬರುತ್ತಾರೆ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಬಿಲ್ ಗೇಟ್ಸ್ ಚಹಾ ಕುಡಿದಾಗಿನಿಂದ, ಡಾಲಿ ಚಾಯ್‌ವಾಲಾ ಹೆಚ್ಚು ಪ್ರಸಿದ್ಧರಾದರು.