ಲೈಫ್‌ಸ್ಟೈಲ್

ಕಣ್ಣಿಗೆ ಜೇನುತುಪ್ಪ ಹಾಕುವುದರಿಂದ ದೃಷ್ಟಿ ಸಮಸ್ಯೆ ದೂರವಾಗುತ್ತಾ.? ಆಯುರ್ವೇದ ತಜ್ಞರು ಹೇಳೋದೇನು.? eyes

health tips; ನೈಸರ್ಗಿಕ ಉತ್ಪನ್ನವಾದ ಜೇನುತುಪ್ಪವನ್ನು ಮನೆಯಲ್ಲಿ ವಿವಿಧ ಮನೆ ಮದ್ದು ರೂಪದಲ್ಲಿ, ಸೌಂದರ್ಯ ಚಿಕಿತ್ಸೆಗೆ ಹಾಗೂ ಕೆಲ ಆಹಾರ ಉತ್ಪನ್ನಗಳ ತಯಾರಿಕೆಗಾಗಿ ಬಳಸಲಾಗುತ್ತದೆ. ಈ ಉತ್ಪನ್ನದಲ್ಲಿ ಆರೋಗ್ಯಕರ ಅಂಶ ಇರುವುದರಿಂದ ಇದು ವಿವಿಧ ರೋಗಗಳನ್ನು ನಿಯಂತ್ರಿಸುತ್ತದೆ. ಆದ್ದರಿಂದ ಜೇನುತುಪ್ಪವು ಆಯುರ್ವೇದ ಚಿಕಿತ್ಸಾ ವಿಧಾನದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.

ಜೇನುತುಪ್ಪವನ್ನು ಚರ್ಮಗಳ ರಕ್ತ ಶುದ್ಧಿಕರಣಕ್ಕೆ, ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಫ-ನೆಗಡಿಯ ನಿವಾರಣೆಗೆ, ಕೊಬ್ಬು ಕರಗಿಸಲು, ವಿಶೇಷವಾಗಿ ಉಪಯೋಗಿಸಲಾಗುತ್ತದೆ. ರುಚಿಯಲ್ಲಿ ಸಿಹಿ ಅಂಶವನ್ನು ಹೊಂದಿರುವ ಈ ಜೇನುತುಪ್ಪವನ್ನು ಬಾಯಿಗಷ್ಟೇ ಅಲ್ಲ, ಕಣ್ಣಿಗೂ ಹಾಕಬಹುದು ಎಂಬುದು ನಿಮಗೆ ಗೊತ್ತಾ. ಹೌದು ಕಣ್ಣುಗಳಲ್ಲಿ ಜೇನುತುಪ್ಪ ಹಾಕುವುದರಿಂದ ದೃಷ್ಟಿ ಸುಧಾರಿಸಲು ಸಾಧ್ಯ ಎಂದು ಆಯುರ್ವೇದ ಹೇಳಿದೆ. ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಒಂದಾಗಿದೆ. ಕಣ್ಣಿನ ಆರೋಗ್ಯವನ್ನು ಎಲ್ಲಾ ರೀತಿಯಲ್ಲೂ ನೋಡಿಕೊಳ್ಳುವುದು ಬಹಳ ಮುಖ್ಯ. ವಾಸ್ತವವಾಗಿ ಕಣ್ಣುಗಳಲ್ಲಿ ಜೇನುತುಪ್ಪವನ್ನು ಹಾಕುವುದು ಕಣ್ಣುಗಳ ನಿರ್ವಿಶೀಕರಣಕ್ಕಾಗಿ ಮಾಡುವ ನೈಸರ್ಗಿಕ ಪ್ರಕ್ರಿಯೆಯಂತೆ. ಹಾಗಿದ್ರೆ ಕಣ್ಣುಗಳಲ್ಲಿ ಜೇನುತುಪ್ಪವನ್ನು ಹಾಕುವುದು ಎಷ್ಟು ಸರಿ, ಅದನ್ನು ಹೇಗೆ ಹಾಕಬೇಕು ಎಂಬುದನ್ನು ತಿಳಿಯೋಣ.

ಕಣ್ಣಿಗೆ ಜೇನುತುಪ್ಪ ಹಚ್ಚೋದೇಗೆ.?

5) ಪ್ರತಿದಿನ ಹೀಗೆ ಮಾಡುವುದರಿಂದ ಒಣ, ಕೆಂಪು ಮತ್ತು ತುರಿಕೆಯಿಂದ ಕೂಡಿರುವ ಕಣ್ಣಿನ ಸಮಸ್ಯೆಗಳಿಗೆ ಉತ್ತಮ ಪರಿಹಾರ ಸಿಗುತ್ತದೆ.

4) 2 ನಿಮಿಷಗಳ ನಂತರ ಮಲಗುವ ಮುನ್ನ ಕಣ್ಣುಗಳನ್ನು ಜೇನುತುಪ್ಪದ ನೀರಿನಲ್ಲಿ ತೊಳೆಯಿರಿ.

3) ಎರಡೂ ಕಣ್ಣುಗಳ ಸುತ್ತಲೂ ಒಂದು ಹನಿ ಹಚ್ಚಿ.

2) ಜೇನುತುಪ್ಪವನ್ನು ಆಯ್ಕೆ ಮಾಡಿದ ಬಳಿಕ, ಮೊದಲು ನಿಮ್ಮ ಕಣ್ಣುಗಳನ್ನು ನೀರಿನಿಂದ ತೊಳೆಯಿರಿ.

1) ಮೊದಲನೆಯದಾಗಿ, ನಿಮ್ಮ ವೈದ್ಯರನ್ನು ಅಥವಾ ತಜ್ಞರನ್ನು ಕೇಳಿ ಸಂಪೂರ್ಣವಾಗಿ ಶುದ್ಧ ಜೇನುತುಪ್ಪವನ್ನು ಆರಿಸಿ.

(ಏಜೆನ್ಸೀಸ್)

ಅಧ್ಯಯನ ಪ್ರಕಾರ 1 ಹನಿ ಜೇನುತುಪ್ಪವು ಕಣ್ಣುಗಳಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎನ್ನಲಾಗಿದೆ. ಜೇನುತುಪ್ಪವು ಅದರ ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನೋವು ನಿವಾರಕ ಗುಣಲಕ್ಷಣಗಳನ್ನು ಹೊಂದಿದ್ದು, ಕಣ್ಣಿನ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ. ಸೋಂಕು ಅಥವಾ ಅಲರ್ಜಿಯ ಅಪಾಯವನ್ನು ಕಡಿಮೆ ಮಾಡಲು ಉತ್ತಮ ಗುಣಮಟ್ಟದ, ಶುದ್ಧ ಜೇನುತುಪ್ಪವನ್ನು ಆರಿಸಿ. ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸದೆ ತೆರೆದ ಗಾಯಗಳು ಅಥವಾ ಕಡಿತಗಳಿಗೆ ಜೇನುತುಪ್ಪವನ್ನು ಅನ್ವಯಿಸಬಾರದು ಎನ್ನಲಾಗಿದೆ. ಜೇನುತುಪ್ಪದ ಬಳಕೆಯ ಬಗ್ಗೆ ನಿಮಗೆ ಯಾವುದೇ ನಿರ್ದಿಷ್ಟ ಪ್ರಶ್ನೆಗಳಿದ್ದರೆ ಸಲಹೆಗಾಗಿ ಆರೋಗ್ಯ ವೃತ್ತಿಪರರು ಅಥವಾ ಚರ್ಮರೋಗ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.