ಲೈಫ್‌ಸ್ಟೈಲ್

ನೀವು ಹೆಚ್ಚು ಪ್ಯಾರಸಿಟಮಾಲ್​ ಸೇವಿಸುತ್ತೀರಾ? ಹಾಗಿದ್ದರೆ, ಈ ಔಷಧಿ ನಿಮ್ಮ ಮೇಲೆ ಪರಿಣಾಮ ಬೀರೋದಂತೂ ಗ್ಯಾರಂಟಿ! Health tips

Health tips: ಪ್ಯಾರಸಿಟಮಾಲ್ ಔಷಧವು ಒಂದು ಸಾಮಾನ್ಯ ನೋವು ನಿವಾರಕ ಮತ್ತು ಜ್ವರ ಕಡಿಮೆ ಮಾಡುವ ಔಷಧವಾಗಿದೆ. ಇದನ್ನು ವಿಶ್ವದಾದ್ಯಂತ ಲಕ್ಷಾಂತರ ಜನರು ನೋವು, ಜ್ವರ ಬಂದಾಗ ಸೇವಿಸುತ್ತಾರೆ. ಈ ಔಷಧವನ್ನು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸುತ್ತಾರೆ. ಆದರೆ, ಇದನ್ನು ಅತಿಯಾಗಿ ಸೇವಿಸುವುದರಿಂದ ಅತಿಯಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದರಿಂದ ಈ ಮಾತ್ರೆಯನ್ನು ಸೇವಿಸುವವರು ಜಾಗರೂಕರಾಗಿರುವುದು ಒಳ್ಳೆಯದು.

ಪ್ಯಾರಸಿಟಮಾಲ್‌ನ ಅತಿಯಾದ ಬಳಕೆಯ ಅಪಾಯಗಳು

* ಯಕೃತ್ತಿನ ಹಾನಿ

ವಯಸ್ಕರಿಗೆ ಶಿಫಾರಸ್ಸು ಮಾಡಿದ ಗರಿಷ್ಟ ಡೋಸ್​ ಒಂದು ದಿನಕ್ಕೆ 4,000 ಮಿಲಿಗ್ರಾಂ ಆಗಿದೆ. ಇದಕ್ಕಿಂತ ಹೆಚ್ಚಾಗಿ ಸೇವಿಸಿದರೆ, ಯಕೃತ್ತಿನ ಮೇಲೆ ಪರಿಣಾಮ ಬೀರಿ ಯಕೃತ್ತಿನ ಕೋಶಗಳನ್ನು ಹಾನಿಗೊಳಿಸುವುದರಿಂದ ಜೀವಕ್ಕೆ ಅಪಾಯವಾಗುತ್ತದೆ.

* ಕಿಡ್ನಿ ಸಮಸ್ಯೆಗಳು

ಪ್ಯಾರಸಿಟಮಾಲ್​ ಔಷಧವನ್ನು ಅತಿಯಾಗಿ ಬಳಸುವುದರಿಂದ ಇದು ಕಿಡ್ನಿ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.

* ಜೀರ್ಣಕ್ರಿಯೆ ಸಮಸ್ಯೆ

ಪ್ಯಾರಸಿಟಮಾಲ್​ ಔಷಧದ ಅತಿಯಾದ ಡೋಸ್​ಗಳನ್ನು ಸೇವಿಸುವುದರಿಂದ ಹೊಟ್ಟೆಯ ನೋವು, ವಾಕರಿಕೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

* ಅಲರ್ಜಿ ಪ್ರತಿಕ್ರಿಯೆಗಳು

ಈ ಔಷಧದ ಡೋಸ್​ ಹೆಚ್ಚಿಗೆಯಾದಾಗ ಕೆಲವರಿಗೆ ಚರ್ಮದ ದದ್ದು, ಉಸಿರಾಟದ ತೊಂದರೆ ಅಥವಾ ಮೈ ಮೇಲೆ ಕೆಂಪುಗೆ ಚಿಕ್ಕ ಚಿಕ್ಕ ದದ್ದುಗಳು ಕಾಣಿಸಿಕೊಳ್ಳಬಹುದು.

* ಅತಿಯಾದ ಡೋಸ್‌ನ ಆರಂಭಿಕ ಲಕ್ಷಣಗಳು

ವಾಕರಿಕೆ, ಆಯಾಸ, ಮತ್ತು ಕಿಬ್ಬೊಟ್ಟೆಯ ನೋವು ಪ್ರಾರಂಭವಾಗುತ್ತದೆ. ಇದು ತೀವ್ರವಾಗಿದ್ದು, ರೋಗಿಗಳಿಗೆ ಗೊಂದಲವನ್ನುಂಟು ಮಾಡುತ್ತದೆ. ಆದರಿಂದ ಸೇವನೆ ಮಾಡುವವರು ಸರಿಯಾದ ಪ್ರಮಾಣದಲ್ಲಿ ಔಷಧಿಗಳನ್ನು ಸೇವಿಸಿ. ಹಾಗೆಯೇ ಬಹು ಔಷಧಿಗಳನ್ನು ಒಂದೇ ಬಾರಿ ತೆಗೆದುಕೊಳ್ಳಬೇಡಿ. ಅನಿವಾರ್ಯತೆ ಇದ್ದಾಗ ವೈದ್ಯರ ಸಲಹೆ ಪಡೆಯಿರಿ.

ತಡೆಗಟ್ಟುವಿಕೆ

* ಔಷಧದ ಲೇಬಲ್ ಓದಿ, ಅದರಲ್ಲಿರುವ ಶಿಫಾರಸನ್ನು ಪಾಲಿಸಿ, ಡೋಸ್ ಮೀರಬೇಡಿ

* ಒಂದೇ ಸಮಯಕ್ಕೆ ಬಹು ಔಷಧಿಗಳ ಸೇವನೆಯನ್ನು ತಪ್ಪಿಸಿರಿ

* ಈ ಔಷಧವನ್ನು ಸೇವಿಸುವಾಗ ಮದ್ಯಪಾನದೊಂದಿಗೆ ಸೇವಿಸಬೇಡಿ

* ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆಯಿರಿ

(ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ