ಆಪರೇಷನ್​ ವೇಳೆ ವೈದ್ಯರೇಕೆ ನೀಲಿ, ಹಸಿರು ಬಣ್ಣದ ಗೌನ್‌ಗಳನ್ನೇ ಹಾಕಿರುತ್ತಾರೆ? ಇಲ್ಲಿದೆ ಅಚ್ಚರಿ ಉತ್ತರ | Doctors Gown  
ಲೈಫ್‌ಸ್ಟೈಲ್

ಆಪರೇಷನ್​ ವೇಳೆ ವೈದ್ಯರೇಕೆ ನೀಲಿ, ಹಸಿರು ಬಣ್ಣದ ಗೌನ್‌ಗಳನ್ನೇ ಹಾಕಿರುತ್ತಾರೆ? ಇಲ್ಲಿದೆ ನೀವು ಕೇಳಿರದ ಅಚ್ಚರಿ ಉತ್ತರ | Doctors Gown

Doctors Gown: ನಮಗೆಲ್ಲ ಗೊತ್ತಿರುವಂತೆ, ಆಸ್ಪತ್ರೆಗಳಲ್ಲಿ ನೋಡಿರುವಂತೆ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಾಮಾನ್ಯವಾಗಿ ವೈದ್ಯರು ನೀಲಿ ಅಥವಾ ಹಸಿರು ಬಣ್ಣದ ಗೌನ್​ಗಳನ್ನೇ ಧರಿಸುತ್ತಾರೆ. ಚೆಕ್​ಅಪ್​ ಮಾಡುವಾಗ ಬಿಳಿ ಬಣ್ಣದ ಉಡುಗೆಯನ್ನು ತೊಡುವ ಡಾಕ್ಟರ್​ಗಳು, ಅದೇ ಆಪರೇಷನ್​ ವೇಳೆಯಲ್ಲಿ ನೀಲಿ ಮತ್ತು ಹಸಿರು ಬಣ್ಣಗಳ ಗೌನ್​ಗಳಿಗೆ ಆದ್ಯತೆ ಕೊಡುವುದೇಕೆ? ಇದರ ಹಿಂದಿರುವ ಕುತೂಹಲಕಾರಿ ಕಾರಣವೇನು ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ.

ಈ ಪ್ರಶ್ನೆ ತಮ್ಮ ತಲೆಯನ್ನು ಹೊಕ್ಕಿದಾಗ ಅದಕ್ಕೆ ಉತ್ತರ ತಕ್ಷಣಕ್ಕೆ ಸಿಗದೆ ಹೋದಾಗ, ಏನಿರಬಹುದು ಕಾರಣ ಎಂದು ಕುತೂಹಲದಿಂದ ಹುಡುಕುತ್ತೇವೆ. ಅಸಲಿಗೆ, ಶಸ್ತ್ರಚಿಕಿತ್ಸೆಗೆ ಮಾತ್ರ ನೀಲಿ ಮತ್ತು ಹಸಿರು ಬಟ್ಟೆಗಳನ್ನು ಧರಿಸುವುದರ ಹಿಂದೆ ಲೈಟಿಂಗ್ ಕಥೆಯಿದೆ. ಅದರಿಂದ ಅಡಚಣೆ ಉಂಟಾಗಬಾರದು ಎಂಬ ಉದ್ದೇಶದಿಂದಲೇ ಈ ಬಣ್ಣಗಳ ಗೌನ್​ಗಳಿಗೆ ವೈದ್ಯರು ಆದ್ಯತೆ ನೀಡುತ್ತಾರೆ. ಇದರ ಕಂಪ್ಲೀಟ್​ ಮಾಹಿತಿ ಹೀಗಿದೆ.

ಏನಿದು ಕಾರಣ?

ಈ ರೀತಿ ಡ್ರೆಸ್ಸಿಂಗ್ ಮಾಡಲು ಒಂದು ಪ್ರಮುಖ ಕಾರಣವಿದೆ. ಅದು, ಆಪರೇಷನ್​ ರೂಮ್​ನಲ್ಲಿ, ದೀಪಗಳು ತುಂಬಾ ಪ್ರಕಾಶಮಾನವಾಗಿರುತ್ತವೆ. ಅಂದರೆ ಕಣ್ಣಿಗೆ ಹೊಡೆಯುವಂತೆ ಇರುತ್ತವೆ. ಕಾರಣ, ದೇಹದಲ್ಲಿನ ಸಣ್ಣ ಅಂಗಗಳನ್ನೂ ಸ್ಪಷ್ಟವಾಗಿ ಗಮನಿಸಲು ಈ ರೀತಿಯ ಬೆಳಕು ಅತ್ಯಗತ್ಯ. ಆದರೆ, ಇದೇ ಲೈಟಿಂಗ್​ ವೈದ್ಯರ ಕಣ್ಣುಗಳ ಮೇಲೆ ಅತಿಯಾದ ಒತ್ತಡವನ್ನು ಉಂಟುಮಾಡುತ್ತದೆ.

ಅಂತಹ ಸಮಯದಲ್ಲಿ, ನೀಲಿ ಮತ್ತು ಹಸಿರು ಬಣ್ಣಗಳನ್ನು ಗಮನಿಸುವುದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕಣ್ಣುಗಳಿಗೆ ಹಿತವಾದ ಅನುಭವವನ್ನು ನೀಡುತ್ತದೆ. ಒಂದೇ ಬಣ್ಣವನ್ನು ದೀರ್ಘಕಾಲ ಗಮನಿಸಿದಾಗ ಕಣ್ಣಿನ ಆಯಾಸವೂ ಉಂಟಾಗುತ್ತದೆ. ರೋಗಿಗಳ ಕೆಂಪು ರಕ್ತವನ್ನು ಗಮನಿಸಿದಾಗ ಕಣ್ಣುಗಳಿಗೆ ಆಯಾಸ ಅನಿಸಬಹುದು. ಆಗ ಈ ಬಣ್ಣಗಳು ರಿಲೀಫ್​ ನೀಡಲಿವೆ ಎಂಬುದು ಗಮನಾರ್ಹ.

ಕೆಂಪು ಬಣ್ಣಕ್ಕೆ ವಿರುದ್ಧವಾಗಿ ನೀಲಿ ಮತ್ತು ಹಸಿರು ಬಣ್ಣಗಳನ್ನು ಗಮನಿಸುವುದು ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ಆಪರೇಷನ್​ ಸಮಯದಲ್ಲಿ ವೈದ್ಯರು ಎಚ್ಚರಿಕೆಯಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ. ರೋಗಿಯ ದೇಹದ ಪ್ರತಿಯೊಂದು ಸೂಕ್ಷ್ಮ ಭಾಗವನ್ನು ಸ್ಪಷ್ಟವಾಗಿ ಗಮನಿಸಲು ಇದು ಸಹಕಾರಿ. ಹೀಗಾಗಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕತ್ತರಿ, ಚಾಕು, ಸಿರಿಂಜ್​ ಸೇರಿದಂತೆ ಇನ್ನಿತರ ವೈದ್ಯಕೀಯ ಉಪಕರಣಗಳನ್ನು ಅಲ್ಲಿಯೇ ಬಿಡುವುದನ್ನು ತಪ್ಪಿಸಬಹುದು. ಜತೆಗೆ, ಇದು ರೋಗಿಗಳಲ್ಲಿ ಭಯ, ಆತಂಕ ಮತ್ತು ಗಾಬರಿಯನ್ನು ಸಹ ಕಡಿಮೆ ಮಾಡುತ್ತದೆ,(ಏಜೆನ್ಸೀಸ್).