ಲೈಫ್‌ಸ್ಟೈಲ್

ನೀವು ಒಂಟಿಯಾಗಿದ್ದಾಗ ಹೃದಯಾಘಾತವಾದ್ರೆ ಅದರಿಂದ ಬಚಾಚ್‌ ಆಗುವುದು ಹೇಗೆ ಗೊತ್ತಾ?Heart Attack

Heart Attack; ಹೃದಯಾಘಾತ ಹೇಳದೇ ಕೇಳದೇ ಬಂದು ಕ್ಷಣಮಾತ್ರದಲ್ಲಿ ಪ್ರಾಣವನ್ನೇ ಬಲಿ ತೆಗೆದುಕೊಂಡು ಬಿಡುತ್ತದೆ. ಅದರಲ್ಲೂ ಇತ್ತೀಚಿನ ದಿನಗಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೃದಯಾಘಾತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವುಗಳ ಬಗ್ಗೆ ಸಾಧ್ಯವಾದಷ್ಟು ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿರುತ್ತದೆ. ಹೃದಯಾಘಾತವು ಕೇವಲ ವಯಸ್ಸಾದವರಲ್ಲಿ ಮಾತ್ರವಲ್ಲದೇ, ಯುವಜನರು ಮತ್ತು ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಹೃದಯಾಘಾತದಿಂದ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದಾಗ್ಯೂ ಹೃದಯಾಘಾತ ಅಗುವ ಮೊದಲು ಸಾಕಷ್ಟು ಮುನ್ಸೂಚನೆಗಳನ್ನು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದ ನಮ್ಮ ಪ್ರಾಣ ಉಳಿಸಿಕೊಳ್ಳಬಹುದಾಗಿದೆ. ಹಾಗಾಗಿ ಒಂಟಿಯಾಗಿದ್ದಾಗ ಹೃದಯಾಘಾತಕ್ಕೆ ಒಳಗಾದರೆ ಏನು ಮಾಡಬೇಕು, ಅಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೇಗೆ ಎಂಬುದನ್ನು ತಿಳಿಯೋಣ.

ಹೃದಯಾಘಾತದ ಲಕ್ಷಣಗಳು

ಎದೆಯಲ್ಲಿ ತೀವ್ರ ನೋವು, ಉಸಿರಾಟದ ತೊಂದರೆ, ಬೆವರುವಿಕೆ, ತಲೆತಿರುಗುವಿಕೆ, ಕೈ ಅಥವಾ ದವಡೆಗೆ ನೋವು ಹರಡುವಿಕೆ ಕಂಡುಬಂದ ತಕ್ಷಣ ವೈದ್ಯಕೀಯ ತುರ್ತು ಸಂಖ್ಯೆಗೆ ಕರೆ ಮಾಡಿ. ಒಂಟಿಯಾಗಿದ್ದರೂ, ಮೊದಲು ತುರ್ತು ಸೇವೆಗೆ ಕರೆ ಮಾಡಿ ಮತ್ತು ನಿಮ್ಮ ಸ್ಥಳವನ್ನು ಸ್ಪಷ್ಟವಾಗಿ ತಿಳಿಸಿ. ಫೋನ್‌ನ ಸ್ಪೀಕರ್‌ ಮೋಡ್‌ನಲ್ಲಿ ಇರಿಸಿ, ಆದ್ದರಿಂದ ನೀವು ಮಾತನಾಡಲು ಆಗದಿದ್ದರೂ ಸಂಪರ್ಕದಲ್ಲಿ ಇರಬಹುದು.

ಶಾಂತವಾಗಿರಿ

ಆತಂಕವು ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸಬಹುದು. ಭಯಭೀತರಾಗುವುದು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಸಾಧ್ಯವಾದಷ್ಟು ಶಾಂತವಾಗಿರಲು ಪ್ರಯತ್ನಿಸಿ.

ಆಸ್ಪಿರಿನ್ ತೆಗೆದುಕೊಳ್ಳಿ

ತಕ್ಷಣ ಒಂದು 325 ಮಿಗ್ರಾಂ ಮಾತ್ರೆ ಅಥವಾ ಎರಡು 81 ಮಿಗ್ರಾಂ ಬೇಬಿ ಆಸ್ಪಿರಿನ್ ಮಾತ್ರೆಗಳನ್ನು ಅಗಿಯಿರಿ ಮತ್ತು ನುಂಗಿರಿ. ಆಸ್ಪಿರಿನ್ ಪ್ಲೇಟ್‌ಲೆಟ್‌ಗಳು ಅಂಟಿಕೊಳ್ಳುವುದನ್ನು ತಡೆಯುತ್ತದೆ, ಅಪಧಮನಿಗಳಲ್ಲಿ ಹೆಪ್ಪುಗಟ್ಟುವಿಕೆಯನ್ನು ನಿಧಾನಗೊಳಿಸುತ್ತದೆ. ಆಸ್ಪಿರಿನ್ ತಿನ್ನಲು ವೈದ್ಯರಿಂದ ಸೂಚನೆ ಇದ್ದರೆ ಮಾತ್ರ ತೆಗೆದುಕೊಳ್ಳಿ.

ಆರಾಮದಾಯಕವಾಗಿ ಕುಳಿತುಕೊಳ್ಳಿ

ಆರಾಮವಾಗಿ ಕುಳಿತುಕೊಳ್ಳಿ ಅಥವಾ ಸ್ವಲ್ಪ ಒರಗಿಕೊಳ್ಳಿ, ಆದರೆ ಸಂಪೂರ್ಣವಾಗಿ ಮಲಗಬೇಡಿ. ಇದು ಉಸಿರಾಟವನ್ನು ಸುಲಭಗೊಳಿಸಬಹುದು.

ವಾಹನ ಚಲಾಯಿಸಬೇಡಿ

ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ವಾಹನ ಚಲಾಯಿಸಲು ಪ್ರಯತ್ನಿಸಬೇಡಿ. ಏಕೆಂದರೆ ಇದು ನಿಮಗೆ ಮತ್ತು ಇತರರಿಗೆ ಅಪಾಯಕಾರಿಯಾಗಬಹುದು. ತಕ್ಷಣ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸಿ, ತುರ್ತು ಸೇವೆಗೆ ಕರೆ ಮಾಡಿ.

ತಿನ್ನುವುದು ಮತ್ತು ಕುಡಿಯುವುದನ್ನು ತಪ್ಪಿಸಿ

ಈ ಮೇಲೆ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ತಿನ್ನುವುದು ಮತ್ತು ಕುಡಿಯುವುದನ್ನು ತಪ್ಪಿಸುವುದು ಮುಖ್ಯ. ಆಹಾರ ಅಥವಾ ನೀರು ಸೇವಿಸುವುದು ಉಸಿರಾಟದ ತೊಂದರೆಯನ್ನು ಹೆಚ್ಚಿಸಬಹುದು ಅಥವಾ ತೊಂದರೆಗೆ ಕಾರಣವಾಗಬಹುದು.