Kidney Problems: ಮೂತ್ರಪಿಂಡಗಳು ಮಾನವ ದೇಹದ ಪ್ರಮುಖ ಅಂಗ. ಅವು ದೇಹವನ್ನು ಶುದ್ಧೀಕರಿಸುತ್ತವೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತವೆ ಮತ್ತು ಮೂಳೆಯ ಆರೋಗ್ಯವನ್ನೂ ಸುಧಾರಿಸುತ್ತವೆ. ಆದರೆ, ಮೂತ್ರಪಿಂಡಗಳು ಹಲವು ಕಾರಣಗಳಿಂದ ಹಾನಿಗೊಳಗಾಗುತ್ತವೆ. ಈ ಸಮಸ್ಯೆಯಿಂದಾಗಿ, ದೇಹದಲ್ಲಿ ತ್ಯಾಜ್ಯ ಉತ್ಪನ್ನಗಳು ಸಂಗ್ರಹವಾಗುತ್ತವೆ. ಹೀಗಾಗಿ ಮೂತ್ರಪಿಂಡದ ಆರೋಗ್ಯವು ಬಹಳ ಮುಖ್ಯ.
ಆದಾಗ್ಯೂ, ಮೂತ್ರಪಿಂಡದ ಸಮಸ್ಯೆಗಳು ಪ್ರಾರಂಭವಾಗುವ ಮೊದಲು, ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಹಿಳೆಯರಲ್ಲಿ, ಹೆಚ್ಚು ಲಕ್ಷಣಗಳು ಗೋಚರಿಸುವುದಿಲ್ಲ. ಅವು ಕಾಣಿಸಿಕೊಂಡರೂ ಅವುಗಳನ್ನು ಹೆಚ್ಚಾಗಿ ಮತ್ತೊಂದು ಸಮಸ್ಯೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ. ನಿಮಗೆ ಮೂತ್ರಪಿಂಡದ ಸಮಸ್ಯೆಗಳು ಕಾಡಲಾರಂಭಿಸಿದರೆ, ದೇಹದಲ್ಲಿ ತ್ಯಾಜ್ಯ ಉತ್ಪನ್ನಗಳು ಸಂಗ್ರಹವಾಗುತ್ತವೆ ಮತ್ತು ಚರ್ಮದ ಸಮಸ್ಯೆಗಳು ಉಂಟಾಗುತ್ತವೆ.
ಶುಷ್ಕತೆ, ಚರ್ಮದ ಸಿಪ್ಪೆ ಸುಲಿಯುವುದು ಮತ್ತು ತುರಿಕೆ ಸೇರಿದಂತೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕಾರಣ, ಹಾರ್ಮೋನ್ಗಳ ಬದಲಾವಣೆಗಳು ಚರ್ಮದ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತವೆ. ನಿಮ್ಮ ಚರ್ಮವು ಅಸಹಜವೆಂದು ಭಾವಿಸಿದರೆ, ಮೂತ್ರಪಿಂಡ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ.
ಮೂತ್ರಪಿಂಡಗಳು ದೇಹದಲ್ಲಿನ ಕ್ಯಾಲ್ಸಿಯಂ, ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸುತ್ತವೆ. ಅವು ಸರಿಯಾಗಿ ಕೆಲಸ ಮಾಡದಿದ್ದರೆ, ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನ ಉಂಟಾಗುವ ಸಾಧ್ಯತೆಗಳು ಹೆಚ್ಚು. ಇದು ಸ್ನಾಯು ನೋವು ಮತ್ತು ಸೆಳೆತಕ್ಕೂ ಕಾರಣವಾಗಬಹುದು. ಮಹಿಳೆಯರಲ್ಲಿ ಹಾರ್ಮೋನ್ಗಳ ಏರಿಳಿತಗಳು ಈ ರೋಗಲಕ್ಷಣವನ್ನು ಇನ್ನಷ್ಟು ಹದಗೆಡಿಸಬಹುದು. ನೀವು ಈ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ.
ಮೂತ್ರಪಿಂಡಗಳು ಕೆಂಪು ರಕ್ತ ಕಣಗಳನ್ನು ತಯಾರಿಸಲು ಅಗತ್ಯವಿರುವ ಎರಿಥ್ರೋಪೊಯೆಟಿನ್ ಎಂಬ ಹಾರ್ಮೋನ್ ಅನ್ನು ಉತ್ಪಾದಿಸುತ್ತವೆ. ಮೂತ್ರಪಿಂಡದ ಸಮಸ್ಯೆಗಳು ಈ ಹಾರ್ಮೋನ್ ಉತ್ಪಾದನೆಯನ್ನು ಕಡಿತಗೊಳಿಸುವ ಮೂಲಕ ರಕ್ತಹೀನತೆಗೆ ಕಾರಣವಾಗಬಹುದು. ಇದು ದೇಹಕ್ಕೆ ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಆಯಾಸ ಮತ್ತು ದೌರ್ಬಲ್ಯವನ್ನು ಉಂಟುಮಾಡುತ್ತದೆ. ಕಾಲುಗಳು, ಕಣಕಾಲುಗಳು, ಮುಖ ಮತ್ತು ಕಣ್ಣುಗಳ ಸುತ್ತಲೂ ಊತ ಉಂಟಾಗುತ್ತದೆ. ಈ ಲಕ್ಷಣವು ಬೆಳಗ್ಗೆ ಹೆಚ್ಚಾಗಿ ಕಂಡುಬರುತ್ತದೆ.
ಇದನ್ನೂ ಓದಿ: ಧೋನಿಗೆ ಐಸಿಸಿ ‘ಹಾಲ್ ಆಫ್ ಫೇಮ್’ ಗೌರವ; ಈ ಪಟ್ಟಿಯಲ್ಲಿದೆ 11 ದಿಗ್ಗಜ ಕ್ರಿಕೆಟಿಗರ ಹೆಸರು! ಯಾರೆಲ್ಲ ಗೊತ್ತಾ? | MS Dhoni
ಈ ಹಿನ್ನೆಲೆ ನೀವು ಅಂತಹ ಸಮಸ್ಯೆಗಳನ್ನು ಅನುಭವಿಸಿದರೆ, ನಿಮ್ಮ ಮೂತ್ರಪಿಂಡಗಳು ಅಪಾಯದಲ್ಲಿ ಎಂದರ್ಥ. ಕೂಡಲೇ ನೀವು ಸಾಮಾನ್ಯವಾಗಿ ಭೇಟಿ ಮಾಡುವ ವೈದ್ಯರು ಅಥವಾ ಹಿರಿಯ ವೈದ್ಯರನ್ನು ಸಂಪರ್ಕಿಸುವುದು ಒಳಿತು,(ಏಜೆನ್ಸೀಸ್).