ಲೈಫ್‌ಸ್ಟೈಲ್

ಗರ್ಭಾವಸ್ಥೆಯಲ್ಲಿನ ಮಹಿಳೆಯರು ಈ ಆಹಾರಗಳನ್ನು ಸೇವಿಸಿ, ಇವು ನಿಮ್ಮ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ! | Pregnancy period

Pregnancy period : ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಆದಷ್ಟು ಕಾಳಜಿ ವಹಿಸುವುದು ಉತ್ತಮವಾಗಿದೆ. ಏಕೆಂದರೆ ನೀವು ಸೇವಿಸುವಂತಹ ಆಹಾರಗಳು ನಿಮ್ಮ ದೇಹ ಹಾಗೂ ಗರ್ಭದಲ್ಲಿರುವ ಮಕ್ಕಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಆದರಿಂದ ಆದಷ್ಟು ಮಹಿಳೆಯರು ಗರ್ಭಾವಸ್ಥೆಯಲ್ಲಿ ಪೌಷ್ಟಿಕತೆಯಿಂದ ತುಂಬಿದ ಆಹಾರದ ಕಡೆ ಹೆಚ್ಚು ಗಮನ ವಹಿಸಬೇಕು.

ಸಂಶೋಧನೆಯ ಪ್ರಕಾರ ಮಗುವಿನ ಮೆದುಳು ಮತ್ತು ಬೆನ್ನುಹುರಿಯ ಸರಿಯಾದ ಬೆಳವಣಿಗೆಯಾಗಲು ಮಹಿಳೆಯರು ಗರ್ಭಾವಸ್ಥೆಯಲ್ಲಿ ಕೋಲೀನ್ ಸಮೃದ್ಧ ಆಹಾರವನ್ನು ತೆಗೆದುಕೊಳ್ಳಬೇಕು. ಇದು ಮಗುವಿನ ಕಲಿಕೆ, ಸ್ಮರಣೆ ಮತ್ತು ನರಪ್ರೇಕ್ಷಣೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿರುವಂತಹ ಮಹಿಳೆಯರು ಯಾವ ಆಹಾರವನ್ನು ಸೇವಿಸಬೇಕು ಎಂದು ಈ ಕೆಳಗೆ ನೀಡಲಾಗಿದೆ.

1. ವಿಟಮಿನ್​ ಸಮೃದ್ಧ ಆಹಾರ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಆದಷ್ಟು ಪೌಷ್ಟಿಕಾಂಶ ಇರುವಂತಹ ಆಹಾರವನ್ನು ಸೇವಿಸಬೇಕು. ಅದರಲ್ಲಿ ಮೊಟ್ಟೆಯ ಹಳದಿ ಲೋಳೆ, ಸೋಯಾಬೀನ್, ಚೀಸ್ ಮತ್ತು ಕಡಲೆಕಾಯಿ, ಎಲೆಕೋಸು ಇಂತಹ ಆಹಾರಗಳನ್ನು ತಿನ್ನುವುದರಿಂದ ಮಕ್ಕಳ ಮೆದುಳು, ನರಮಂಡಲ, ಬೆನ್ನುಹುರಿ ಹಾಗೂ ತಾಯಂದಿರ ಆರೋಗ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಬಹುದು.

2. ಬಾದಾಮಿ ಮತ್ತು ವಾಲ್ನಟ್ಸ್

ಯಾವುದೇ ಮಹಿಳೆಯು ಗರ್ಭವನ್ನು ಹೊಂದಿದ ನಂತರ ಆಕೆಯು ಬಾದಾಮಿ ಮತ್ತು ವಾಲ್ನಟ್​ಗಳನ್ನು ಸೇವಿಸುವುದರಿಂದ ಇವು ಮಕ್ಕಳ ಮೆದುಳಿನ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತವೆ. ಹಾಗೆಯೇ ಇದರಲ್ಲಿರುವ ವಿಟಮಿನ್​ ಇ ಮತ್ತು ಬಿ ಜೊತೆಗೆ ಒಮೆಗಾ-3 ನಂತಹ ಕೊಬ್ಬಿನಾಮ್ಲಗಳು ಇರುವುದರಿಂದ ಮಗುವಿನ ನರ ಕೊಳವೆಯ ರಚನೆಗೆ ಸಹಾಯ ಮಾಡುತ್ತದೆ.

3. ಹಸಿರು ತರಕಾರಿಗಳು

ಪಾಲಕ್, ಬೀನ್ಸ್, ಎಲೆಕೋಸು, ಹಾಗಲಕಾಯಿ, ಬಟಾಣಿ, , ಹಾಲು , ಸೌತೆಕಾಯಿ ಮತ್ತು ಕ್ಯಾಪ್ಸಿಕಂನಂತಹ ಹಸಿರು ಎಲೆಗಳ ತರಕಾರಿಗಳು ಸೇವಿಸುವುದರಿಂದ ಮಕ್ಕಳ ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೇ ಇದು ಮಕ್ಕಳ ಮೆದುಳು ಹಾಗೂ ಬೆಳವಣಿಗೆಗೆ ಸಹಾಯ ಮಾಡುತ್ತದೆ.

4. ನಡಿಗೆ

ಗರ್ಭಾವಸ್ಥೆಯಲ್ಲಿನ ಮಹಿಳೆಯರು ಪ್ರತಿನಿತ್ಯ 30 ನಿಮಿಷಗಳ ಕಾಲ ನಡೆಯುವುದನ್ನು ಮಾಡಿದರೆ, ಇದು ರಕ್ತಸಂಚಾರವನ್ನು ಸುಧಾರಿಸಿ, ಮಕ್ಕಳ ಮೆದುಳಿನ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ