ಲೈಫ್‌ಸ್ಟೈಲ್

ಮನಸ್ಥಿತಿ ಮತ್ತು ನೆನಪಿನ ಶಕ್ತಿ ಸುಧಾರಿಸಲು ಕಿತ್ತಳೆ ಹಣ್ಣು ಸಹಕಾರಿಯಂತೆ?; ಹೇಗಂತೀರಾ, ಇಲ್ಲಿದೆ ಮಾಹಿತಿ.. | Oranges

ಬಾಬುಪ್ರಸಾದ್​ ಮೋಡಿಸ್​

Oranges: ಕಿತ್ತಳೆ ಹಣ್ಣು ವಿಟಮಿನ್​ ಸಿ ಸೇರಿದಂತೆ ಹಲವು ಆಗತ್ಯ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ.ವಿಶೇಷವಾಗಿ ಸಮೃದ್ಧ ಪೋಷಕಾಂಶಗಳಿಂದ ಕೂಡಿದ ಕಿತ್ತಳೆ ಹಣ್ಣು ಸೇವನೆಯಿಂದ ವಿವಿಧ ರೀತಿಯ ಆರೋಗ್ಯ ಪ್ರಯೋಜನೆಗಳನ್ನು ಪಡೆಯುತ್ತೇವೆ ಎಂದು ವೈದ್ಯರ ಅಭಿಪ್ರಾಯವಾಗಿದೆ.

ಅಲ್ಲದೆ, ವಿಟಮಿನ್​​ ಸಿ ಜತೆಗೆ ಫೈಬರ್​, ಪೋಲ್ಯಾಟ್​ ಮತ್ತು ಪೌಷ್ಠಿಕಾಂಶದ ಅನೇಕ ಖನಿಜ ಸಂಯುಕ್ತಗಳಿಂದ ಕೂಡಿದೆ. ಅಲ್ಲದೆ, ಕಿತ್ತಳೆ ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ಕಿತ್ತಳೆ ಹಣ್ಣು ನಿಮ್ಮ ಮೆದುಳಿಗೆ ಕೂಡ ಒಳ್ಳೆಯದು ಎಂದು ಹೊಸ ಅಧ್ಯಯನದ ವರದಿಯೊಂದು ಬಹಿರಂಗಪಡಿಸಿದೆ.

ಮೆದುಳುಗೆ ಸಹಕಾರಿ

ಕಿತ್ತಳೆಯಲ್ಲಿರುವ ವಿಟಮಿನ್​ ಸಿ, ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಮೆದುಳಿನ ಕೋಶಗಳನ್ನು ಆಕ್ಸಿಡೇಟಿವ್​ ಮತ್ತು ಊರಿಯುತದಿಂದ ರಕ್ಷಣೆ ಮಾಡುತ್ತದೆ ಹಾಗೂ ನೆನಪಿನ ಶಕ್ತಿಯನ್ನು ನಿಧನವಾಗಿ ಅಧಿಕಗೊಳಿಸುತ್ತದೆ.

ಕಿತ್ತಳೆ ಹಣ್ಣಿನಲ್ಲಿ ಪ್ಲೇವನಾಯ್ಡ್​ಗಳು(ಶಕ್ತಿ ಅಂಶಗಳು) ಸಮೃದ್ಧವಾಗಿದೆ. ಇದು ಮೆದುಳಿನ ರಕ್ತದ ಹರಿವನ್ನು ಸುಧಾರಿಸುತ್ತದೆ. ಅಲ್ಲದೆ, ಅರಿವಿನ(ನೆನಪು) ಕಾರ್ಯವನ್ನು ಹೆಚ್ಚಿಸುತ್ತದೆ. ಸ್ಮರಣಶಕ್ತಿಯನ್ನು ಸುಧಾರಿಸುವುದರ ಜತೆ ಮಾನಸಿಕ ಸ್ಪಷ್ಟತೆಯನ್ನು ನೀಡುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.

ಖಿನ್ನತೆಯ ಅಪಾಯ ಕೂಡ ಕಡಿಮೆ

ಇನ್ನು ಹಾರ್ವರ್ಡ್ ವೈದ್ಯಕೀಯ ಶಾಲೆ ಮತ್ತು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ಹೊಸ ಅಧ್ಯಯನವು ಪ್ರತಿದಿನ ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಖಿನ್ನತೆಯ ಅಪಾಯವನ್ನು ಶೇಕಡಾ 20 ರಷ್ಟು ಕಡಿಮೆ ಮಾಡಬಹುದು ಎಂದು ಬಹಿರಂಗಪಡಿಸಿದೆ.

ಸಿಟ್ರಸ್ ಹಣ್ಣುಗಳು ಸಿರೊಟೋನಿನ್ ಮತ್ತು ಡೋಪಮೈನ್ ಉತ್ಪಾದನೆಯ ಮೇಲೆ ಪ್ರಭಾವ ಬೀರುವ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಸಂಶೋಧನೆಯು ತೋರಿಸಿದೆ. ಈ ರಾಸಾಯನಿಕಗಳು ಮನಸ್ಥಿತಿಯನ್ನು ಸುಧಾರಿಸಲು ಹೆಸರುವಾಸಿಯಾಗಿದೆ ಎಂದು ಅಧ್ಯಯನ ಹೇಳಿದೆ.

ಕಿತ್ತಳೆ ಹಣ್ಣಿನ ಸೇವನೆಯಿಂದ ಇತರೆ ಪ್ರಯೋಜನೆಗಳು

1.ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್​-ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

2.ಈ ಹಣ್ಣಿನಲ್ಲಿ ಸಿಟ್ರಸ್​ ಅಂಶವು ಹಲವು ದೀರ್ಘಕಾಲಿಕ ರೋಗಗಳ ಅಪಾಉವನ್ನು ತಡೆಯುತ್ತದೆ.

3.ವಿಟಮಿನ್​-ಸಿ ರಕ್ತಹೀನತೆ ತಡೆಯಲು ಸಹಾಯ ಮಾಡುತ್ತೆ

4.ಇದರಲ್ಲಿನ ಫೈಬರ್​ ಅಂಶವು ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತೆ(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.