Medicines : ಉತ್ತಮ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಸುಧಾರಿಸುತ್ತೆ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ, ಕೆಲವು ರೀತಿ ಆಹಾರ ಸಂಯೋಜನೆಗಳು ಆರೋಗ್ಯಕ್ಕೆ ಹಾನಿ ಮಾಡಬಹುದು ಎಂಬ ವಿಚಾರ ಕೆಲವರಿಗೆ ತಿಳಿದಿಲ್ಲ. ಕೆಲ ಆಹಾರವನ್ನು ಏಕಕಾಲದಲ್ಲಿ ಸೇವಿಸಿದರೆ, ಅಡ್ಡಪರಿಣಾಮದಿಂದಾಗಿ ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು. ಹೀಗಾಗಿ, ಅವುಗಳನ್ನು ತಪ್ಪಿಸಬೇಕಿದೆ.
ಆರೋಗ್ಯಕರ ಆಹಾರ ಸೇವಿಸುವುದು ಹಾಗೂ ಸಾಕಷ್ಟು ನೀರು ಕುಡಿಯುವುದು ಎಲ್ಲವೂ ಬಹಳ ಮುಖ್ಯ. ಆದಾಗ್ಯೂ, ಕೆಲ ಜನರಿಗೆ ಆಹಾರದ ಜತೆಗೆ ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸಗಳಿವೆ. ನೀವೇನಾದರು ಕೆಲವು ಸಮಸ್ಯೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಒಂದು ವಿಚಾರವನ್ನು ನೆನಪಿನಲ್ಲಿಡಬೇಕು. ಅದೇನೆಂದರೆ, ಔಷಧಿ ತೆಗೆದುಕೊಂಡ ತಕ್ಷಣ ಈ ಆಹಾರಗಳನ್ನು ಸೇವಿಸಿದರೆ, ಖಂಡಿತವಾಗಿಯೂ ಅಡ್ಡಪರಿಣಾಮಗಳು ಉಂಟಾಗುತ್ತವೆ.
ಔಷಧಿ ತೆಗೆದುಕೊಂಡ ನಂತರ ಯಾವುದೇ ಕಾರಣಕ್ಕೂ ಎನರ್ಜಿ ಡ್ರಿಂಕ್ಸ್ ತೆಗೆದುಕೊಳ್ಳಬಾರದು. ಔಷಧಿ ಜೊತೆಗೆ ಎನರ್ಜಿ ಡ್ರಿಂಕ್ಸ್ ಸೇವಿಸಿದರೆ, ನೀವು ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ, ಧೂಮಪಾನ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಲದೆ, ಮದ್ಯಪಾನವೂ ಒಳ್ಳೆಯದಲ್ಲ. ಔಷಧಿ ತೆಗೆದುಕೊಂಡ ನಂತರ ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು. ಯಕೃತ್ತಿನ ಸಮಸ್ಯೆಗಳ ಅಪಾಯವೂ ಇದೆ.
ಹಾಲು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಿ ಅನೇಕ ಜನರು ಹಾಲಿನೊಂದಿಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಇದು ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಹಾಗಾಗಿ, ಔಷಧಿಯೊಂದಿಗೆ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ತೆಗೆದುಕೊಳ್ಳಬೇಡಿ.
ನೀವು ಈ ತಪ್ಪುಗಳನ್ನು ಮಾಡದಂತೆ ತುಂಬಾ ಎಚ್ಚರವಹಿಸಿ, ಇಲ್ಲದಿದ್ದರೆ ಅಡ್ಡಪರಿಣಾಮಗಳು ಉಂಟಾಗುತ್ತವೆ. ಕೆಲವೊಮ್ಮೆ ಈ ಅಡ್ಡಪರಿಣಾಮಗಳು ಜೀವಕ್ಕೆ ಮಾರಕವೂ ಆಗಬಹುದು. ಆದ್ದರಿಂದ ಈ ತಪ್ಪುಗಳನ್ನು ಮಾಡದಂತೆ ನೋಡಿಕೊಳ್ಳಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.