ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎಂಬಂತೆ, ಎಳನೀರನ್ನು ಮಿತಿಗಿಂತ ( Coconut Water Side Effects ) ಹೆಚ್ಚು ಕುಡಿದರೆ ದೇಹಕ್ಕೆ ಹಾನಿಕಾರ ಖಂಡಿತ. ಆರೋಗ್ಯ ತಜ್ಞರ ಪ್ರಕಾರ, ತೆಂಗಿನ ನೀರು ನಿಮ್ಮ ಆರೋಗ್ಯಕ್ಕೆ ಬೇಕಾಗಿರುವ ಪೋಷಕಾಂಶವನ್ನು ನೀಡುತ್ತದೆ. ಆದರೆ ನೀವು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಹೋರಾಡುತ್ತಿದ್ದರೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ನೀವು ಹೆಚ್ಚು ತೆಂಗಿನ ನೀರನ್ನು ಕುಡಿಯುತ್ತಿದ್ದರೆ, ನೀವು ಅದನ್ನು ತೆಗೆದುಕೊಳ್ಳುವುದನ್ನು ಕೊಂಚ ಕಡಿಮೆ ಮಾಡುವುದು ಒಳ್ಳೆಯದಾಗಿದೆ.
ತೆಂಗಿನ ನೀರನ್ನು ಹೆಚ್ಚಿಗೆ ಪ್ರಮಾಣದಲ್ಲಿ ಕುಡಿಯಲೇಬೇಡಿ:
ತೆಂಗಿನ ನೀರಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕಂಡುಬರುತ್ತದೆ. ನೀವು ಅಗತ್ಯಕ್ಕಿಂತ ಹೆಚ್ಚು ತೆಂಗಿನ ನೀರನ್ನು ಸೇವಿಸಿದರೆ, ನಿಮ್ಮ ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳ ಸಮತೋಲನವು ತೊಂದರೆಗೊಳಗಾಗಬಹುದು.
ಮಧುಮೇಹಿಗಳು ತೆಂಗಿನಕಾಯಿ ನೀರನ್ನು ಹೆಚ್ಚು ಸೇವಿಸಿದರೆ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಬಹುದು. ತೆಂಗಿನ ನೀರಿನ ಅಧಿಕವು ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಇದು ಹೊಟ್ಟೆಯ ತೊಂದರೆ ಮತ್ತು ಅಸಿಡಿಟಿಗೆ ಕಾರಣವಾಗಬಹುದು.
ಹೊಟ್ಟೆ ನೋವು :
ತೆಂಗಿನ ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಮಿತಿಗಿಂತ ಹೆಚ್ಚು ತೆಂಗಿನ ನೀರು ಕುಡಿಯುವುದರಿಂದ ನಿಮ್ಮ ಕರುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಅತಿಸಾರ ಅಥವಾ ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ತಪ್ಪಿಸಲು ಬಯಸಿದರೆ ಕೊಂಚ ಎಳನೀರು ಸೇವನೆ ಕಡಿಮೆ ಮಾಡುವುದು ಉತ್ತಮವಾಗಿದೆ.
ಎಳನೀರಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿದ್ದು, ಮಿತಿಯಲ್ಲಿ ಸೇವಿಸದಿದ್ದರೆ ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪೊಟ್ಯಾಸಿಯಂ ಹೆಚ್ಚಾದರೆ ಆ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯಿದೆ.
ಗಮನಿಸಿ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ