Spiders : ಸಾಮಾನ್ಯವಾಗಿ ಮನೆಯಲ್ಲಿ ಮನುಷ್ಯರ ಜತೆ ವಾಸ ಮಾಡುವ ಇಲಿ, ನೋಣ, ಸೊಳ್ಳೆ ಇವುಗಳು ಮನೆಯ ಮೂಲೆಗಳಲ್ಲಿ ಗೂಡು ಕಟ್ಟುತ್ತಾ ಸಮಸ್ಯೆ ಮಾಡ್ತವೆ. ಇದೆಲ್ಲಾದ ನಡುವೆ ಜೇಡರ ಹುಳ ಮನೆಯ ಪ್ರತಿ ಮೂಲೆಯಲ್ಲಿ ಬಲೆಯನ್ನು ಹೆಣೆಯುತ್ತಾ ಸದಾ ತೊಂದರೆ ಕೊಡುತ್ತಾ ಇರ್ತಾವೆ. ಇಂತಹ ಜೇಡರ ಹುಳವನ್ನು ಮನೆಯಿಂದ ದೂರ ಮಾಡೋದೆಗೆ ಎಂದು ತಿಳಿಯೋಣ..
1. ನಿಂಬೆಹಣ್ಣು ಮತ್ತು ಲವಂಗ
ನಿಂಬೆಹಣ್ಣಿನ ಎರಡು ಭಾಗವನ್ನು ಕತ್ತರಿಸಿ, ಅದಕ್ಕೆ 8-10 ಲವಂಗವನ್ನು ಚುಚ್ಚಿ, ಜೇಡಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಕಿಟಕಿ, ಬಾಗಿಲು ಅಥವಾ ಮೂಲೆಗಳಲ್ಲಿ ಇರಿಸಿ. ಜೇಡಗಳು ಈ ವಾಸನೆಯನ್ನು ತಡೆಯಲಾರವು.
2. ಪುದೀನಾ ಎಣ್ಣೆ
10-15 ಹನಿ ಪುದೀನಾ ಎಣ್ಣೆಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ, ಸ್ಪ್ರೇ ಬಾಟಲಿಯಲ್ಲಿ ತುಂಬಿ, ಜೇಡಗಳು ಬರುವ ಸ್ಥಳಗಳಲ್ಲಿ ಸಿಂಪಡಿಸಿ. ಪುದೀನಾದ ವಾಸನೆ ಜೇಡಗಳನ್ನು ಓಡಿಸುತ್ತದೆ.
3. ದಾಲ್ಚಿನ್ನಿ
ದಾಲ್ಚಿನ್ನಿ ಚೂರುಗಳನ್ನು ಅಥವಾ ಪುಡಿಯನ್ನು ಜೇಡಗಳು ಕಾಣಿಸಿಕೊಳ್ಳುವ ಜಾಗದಲ್ಲಿ ಚಿಮುಕಿಸಿ. ಇದು ಸಹ ಒಂದು ಪರಿಣಾಮಕಾರಿ ವಿಧಾನ.
4. ಕಾಫಿ ಪೌಡರ್
ಬಳಸಿದ ಕಾಫಿ ಪೌಡರ್ ಅಥವಾ ತಾಜಾ ಕಾಫಿ ಗಿಡದ ಎಲೆಗಳನ್ನು ಸಣ್ಣ ಚೀಲದಲ್ಲಿ ತುಂಬಿ, ಜೇಡಗಳು ಬರುವ ಸ್ಥಳಗಳಲ್ಲಿ ಇರಿಸಿ.
ಇದನ್ನೂ ಓದಿ:ಕತಾರ್ ರಾಜಧಾನಿ ದೋಹಾದಲ್ಲಿ ಸಭೆ ಸೇರಿದ್ದ ಹಮಾಸ್ ಉಗ್ರರ ಮೇಲೆ ದಾಳಿ ಮಾಡಿದ ಇಸ್ರೇಲ್| Israel5. ಬೆಳ್ಳುಳ್ಳಿ
ಬೆಳ್ಳುಳ್ಳಿಯ ಒಂದು ತುಂಡನ್ನು ಕತ್ತರಿಸಿ, ಜೇಡಗಳು ಕಾಣಿಸಿಕೊಳ್ಳುವ ಜಾಗದಲ್ಲಿ ಇರಿಸಿ. ಇದರ ತೀವ್ರ ವಾಸನೆ ಜೇಡಗಳನ್ನು ದೂರವಿಡುತ್ತದೆ.
6. ವಿನೆಗರ್
ಸಮ ಪ್ರಮಾಣದ ವಿನೆಗರ್ ಮತ್ತು ನೀರನ್ನು ಬೆರೆಸಿ, ಸ್ಪ್ರೇ ಬಾಟಲಿಯಲ್ಲಿ ತುಂಬಿ, ಮನೆಯ ಮೂಲೆಗಳಲ್ಲಿ ಸಿಂಪಡಿಸಿ.
7.ತುಳಸಿ ಎಲೆಗಳು
ಒಣಗಿದ ತುಳಸಿ ಎಲೆಗಳನ್ನು ಸಣ್ಣ ಚೀಲದಲ್ಲಿ ತುಂಬಿ, ಜೇಡಗಳು ಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಇರಿಸಿ.
ಸಲಹೆಗಳು
- ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ, ಆಹಾರದ ತುಣುಕುಗಳು ಅಥವಾ ಕಸವನ್ನು ಬಿಡಬೇಡಿ.
- ಜೇಡಗಳು ಒದ್ದೆಯಾದ ಸ್ಥಳಗಳನ್ನು ಇಷ್ಟಪಡುತ್ತವೆ, ಆದ್ದರಿಂದ ಸಿಂಕ್, ಬಾತ್‌ರೂಮ್‌ನಂತಹ ಜಾಗಗಳನ್ನು ಒಣಗಾಗಿಡಿ.
- ಬಾಗಿಲು ಮತ್ತು ಕಿಟಕಿಗಳಿಗೆ ಜಾಲಿಗಳನ್ನು (ಮೆಶ್) ಬಳಸಿ.
ಈ ಮನೆಮದ್ದುಗಳು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿವೆ. ಒಂದು ವೇಳೆ ಜೇಡಗಳ ಸಮಸ್ಯೆ ತೀವ್ರವಾಗಿದ್ದರೆ, ವೃತ್ತಿಪರ ಕೀಟನಾಶಕ ಸೇವೆಯನ್ನು ಸಂಪರ್ಕಿಸಿ.(ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.