ಲೈಫ್‌ಸ್ಟೈಲ್

ಈ 5 ಆಹಾರಗಳನ್ನು ಒಟ್ಟಿಗೆ ತಿನ್ನಬೇಡಿ; ಹುಷಾರ್! ನಿಮ್ಮ ಹಾರ್ಮೋನ್​ಗಳ ಆರೋಗ್ಯ ಹಾಳಗೋದಂತು ಗ್ಯಾರಂಟಿ! | Hormonal Health

Hormonal Health: ಆಹಾರ ಸೇವನೆ ವಿಷಯದಲ್ಲಿ ನಮ್ಮೆಲ್ಲರಿಗೂ ಕೆಲ ಅದ್ಯತೆಗಳಿರುತ್ತದೆ. ಅದು ನೆಚ್ಚಿನ ತಿಂಡಿ ಆಗಿರಬಹುದು ಅಥವಾ ನಿರ್ದಿಷ್ಟ ಆಹಾರವಾಗಿರಬಹುದು. ಒಮ್ಮೊಮ್ಮೆ ಎರಡು ನಮಗೆ ಇಷ್ಟವಾದ ಆಹಾರವನ್ನು ಒಟ್ಟಿಗೆ ತಿನ್ನಬಹುದು. ಇದರಿಂದ ನಮ್ಮ ನಾಲಿಗೆ ರುಚಿ ಸಿಗುತ್ತೆ. ಆದರೆ, ಆರೋಗ್ಯದಲ್ಲಿ ಏರುಪೇರಾಗಿ ಸಮಸ್ಯೆಗೆ ಸಿಲುಕುವುದಂತು ಗ್ಯಾರಂಟಿ ಎನ್ನುತ್ತಾರೆ ವೈದ್ಯರು.

ಹೌದು, ಈ ಜೋಡಿ(ಸಂಯೋಜನೆ) ಆಹಾರಗಳು ಕೆಲವೊಮ್ಮೆ ಉತ್ತಮ ಸಂಯೋಜನೆ ಆಗಿದ್ದರೂ, ಕೆಲ ಬಾರಿ ಒಟ್ಟಿಗೆ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ಈ ಸಂಯೋಜನೆ ಆಹಾರ ತಿಂದಾಗ ಆ ಕ್ಷಣಕ್ಕೆ ತೃಪ್ತಿ ಮತ್ತು ಸಂತೋಷ ಭಾವನೆಯನ್ನು ನೀವು ಅನುಭವಿಸಬಹುದು. ಆದರೆ, ಕೆಲ ಆಹಾರಗಳ ಸಂಯೋಜನೆ ತಿನ್ನುವುದನ್ನು ಮುಂದುವರೆಸಿದಾಗ, ನಿಮ್ಮ ಹಾರ್ಮೋನ್​ಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ, ಇದನ್ನು ತಿಳಿಯಲು ಕೂತಹಲವಿದೆಯೇ? ಪೌಷ್ಟಿಕತಜ್ಞೆ ಪೂರ್ಣಿಮಾ ಪೆರಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿರುವಂತೆ ವಿಧಾನಗಳ ಬಗ್ಗೆ ತಿಳಿಯೋಣ ಬನ್ನಿ...

ಹಾರ್ಮೋನ್​ಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ 5 ಆಹಾರಗಳ ಸಂಯೋಜನೆ ಇಲ್ಲಿದೆ..

1.ಹಾಲು + ಹಣ್ಣುಗಳು

ನಮ್ಮಲ್ಲಿ ಹಲವರು ಬೆಳಗಿನ ಉಪಹಾರಕ್ಕೆ ಒಂದು ಲೋಟದ ಹಾಲಿನ ಜತೆ ಹಣ್ಣನ್ನು ಸೇವಿಸುತ್ತಾರೆ.ನೀವು ಕೂಡ ಸೇವಿಸಿದರೆ ಅದನ್ನು ನಿಲ್ಲಿಸಿ ಎನ್ನುತ್ತಾರೆ ಪೌಷ್ಟಿಕತಜ್ಞೆ ಪೂರ್ಣಿಮಾ ಪೆರಿ. ಹೌದು, ಹಾಲನ್ನು ಹಣ್ಣುಗಳೊಂದಿಗೆ ಅದರಲ್ಲಿ ಬಾಳೆಹಣ್ಣು ಮತ್ತು ಸಿಟ್ರಿಸ್​ ಹಣ್ಣುಗಳೊಂದಿಗೆ ಬೆರಸುವುದರಿಂದ ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಅಲ್ಲದೆ, ನಿರಂತರ ಸೇವನೆಯಿಂದ ಕರುಳಿನ ಊರಿಯುತವನ್ನು ಉಂಟು ಮಾಡುತ್ತದೆ. ಆದ್ದರಿಂದ ಇವುಗಳನ್ನು ಪ್ರತ್ಯೇಕವಾಗಿ ಸೇವಿಸಿ ಎನ್ನುತ್ತಾರೆ ವೈದ್ಯರು.

2. ಚಹಾ/ಕಾಫಿ + ಕಬ್ಬಿಣಾಂಶ ಹೊಂದಿದ ಆಹಾರ

ನೀವು ತಪ್ಪಿಸಬೇಕಾದ ಮತ್ತೊಂದು ಆಹಾರ ಸಂಯೋಜನೆ ಎಂದರೆ ಅದು ಕಬ್ಬಿಣಾಂಶ ಹೊಂದಿದ ಆಹಾರಗಳ ಜತೆ ಚಹಾ ಮತ್ತು ಕಾಫಿ ಸೇವನೆ. ಹೌದು, ಇವುಗಳಲ್ಲಿ ಬೇಳೆಕಾಳು ಅಥವಾ ಕಡು ಹಸಿರು ಎಲೆಗಳ ತರಕಾರಿಗಳಂತಹ ಆಹಾರಗಳು ಸೇರಿವೆ. ಈ ಸಂಯೋಜನೆಯನ್ನು ಏಕೆ ಕೆಟ್ಟದಾಗಿ ಮಾಡುತ್ತದೆ? ಎಂದರೆ, ಚಹಾ ಮತ್ತು ಕಾಫಿಯಲ್ಲಿ ಟ್ಯಾನಿನ್‌ಗಳು ಎಂಬ ಸಂಯುಕ್ತ ಇರುವುದರಿಂದ ಇದು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸುತ್ತದೆ. ಹೀಗಾಗಿ, ಇದು ಕಡಿಮೆ ಶಕ್ತಿ, ಆಯಾಸ ಮತ್ತು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ.

3.ಡೈರಿ ಉತ್ಪನ್ನ+ ಅಧಿಕ ಸಕ್ಕರೆ ಆಹಾರ

ಡೈರಿ ಉತ್ಪನ್ನಗಳನ್ನು ಮತ್ತು ಅಧಿಕ ಸಕ್ಕರೆ ಅಂಶ ಹೊಂದಿರುವ ಸಂಯೋಜನೆಯನ್ನು ತಿನ್ನುವುದು ಬೀಡಬೇಕು. ಹೌದು. ಮೋಸರಿನ ಜತೆ ಸ್ಟ್ರಾಬೇರಿ ಅಥವಾ ಬಾಳೆ ಹಣ್ಣು ಸೇರಿಸುವುದು ಉತ್ತಮವಾದರೂ ಇದು ಆರೋಗ್ಯಕ್ಕೆ ಉತ್ತಮವಲ್ಲ ಎನ್ನುತ್ತಾರೆ ವೈದ್ಯೆ ಪೂರ್ಣಿಮಾ. ಇದರಿಂದ ಕೆಲವರ ಹಾರ್ಮೋನ್​ಗಳ ಆರೋಗ್ಯ ಹಾನಿಯಾಗಬಹುದು. ಅಲ್ಲದೆ, ಇದು ಮುಖ್ಯವಾಗಿ ಚಯಪಚ ಕ್ರಿಯೆಗೆ ಅಡ್ಡಿಪಡಿಸುತ್ತದೆ.

4.ಗೋಧಿ ರೊಟ್ಟಿ+ ಸಕ್ಕರೆ

ಗೋಧಿಯನ್ನು ಸಕ್ಕರೆಯೊಂದಿಗೆ ಬೆರೆಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಪೂರ್ಣಿಮಾ ಹೇಳುತ್ತಾರೆ. ಹಾಗೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕುಸಿಯಬಹುದು, ಹಸಿವು ಹೆಚ್ಚಾಗುತ್ತದೆ ಮತ್ತು ಮನಸ್ಥಿತಿಯಲ್ಲಿ ಏರುಪೇರಾಗಬಹುದು. ಇದಲ್ಲದೆ, ಇದು ಅನಗತ್ಯ ಕೊಬ್ಬಿನ ಶೇಖರಣೆಗೆ ಕಾರಣವಾಗಬಹುದು.

5.ಮೊಸರು+ ಪಾರೊಟ/ಪುಲಾವ್​

ಬಿಸಿ ಪಾರೊಟ ಅಥವಾ ಪುಲಾವ್ ಜತೆ ಮೊಸರಿನ ಸಂಯೋಜನೆಯು ತುಂಬಾ ರುಚಿಕರವಾಗಿದೆ, ಅಲ್ಲವೇ? ಆದರೆ ಅದು ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೌದು, ಹಾಲು ಜೀರ್ಣಕ್ರಿಯೆಗೆ ಉತ್ತಮ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಅದನ್ನು ಕಾರ್ಬೋಹೈಡ್ರೇಟ್‌ಗಳೊಂದಿಗೆ ಸಂಯೋಜಿಸಿದಾಗ ಅಲ್ಲ. ಹಾಗೆ ಮಾಡುವುದರಿಂದ ಹೊಟ್ಟೆಯುಬ್ಬರ, ಆಮ್ಲಿಯತೆ ಸೇರಿ ಇತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ, ಇದು ನೇರವಾಗಿ ಹಾರ್ಮೋನುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯೆ ಪೂರ್ಣಿಮಾ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.