ಲೈಫ್‌ಸ್ಟೈಲ್

ಈ ಆಹಾರಗಳನ್ನು ಯಾವ ಸಮಯದಲ್ಲಿ ತಿಂದರೆ ಬೆಸ್ಟ್? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Best Time

Best Time to Eat: ನಮ್ಮ ದಿನನಿತ್ಯ ಆಹಾರ ಕ್ರಮದಲ್ಲಿ ಕೆಲವೊಂದಿಷ್ಟು ಹಣ್ಣು-ತರಕಾರಿ ಸೇರಿದಂತೆ ಇತರೆ ಪೌಷ್ಠಿಕ ಆಹಾರಗಳನ್ನು ಸೇರಿಸಿಕೊಳ್ಳುವ ಮೂಲಕ ಆರೋಗ್ಯದ ಕಾಳಜಿಯನ್ನು ತಪ್ಪದೇ ಅನುಸರಿಸಲು ನಾವು ಬಯಸುತ್ತೇವೆ. ಸೇಬು, ಬಾಳೆಹಣ್ಣು, ಬಾದಾಮಿ, ಹಾಲು, ಮೊಸರು ಮತ್ತು ಇನ್ನಿತರ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು ಎಂದು ಹಲವರು ಸಲಹೆ ನೀಡುತ್ತಾರೆ. ಆದ್ರೆ, ಯಾವ ಸಮಯದಲ್ಲಿ ತಿನ್ನುವುದು ಸೂಕ್ತ ಎಂದು ಹೇಳುವುದನ್ನು ಮಾತ್ರ ಮರೆಯುತ್ತಾರೆ.

ಸೂಕ್ತ ಸಮಯ?

ನಾವೆಲ್ಲಾ ನೋಡಿದಂತೆ ಅನೇಕರು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ತರಕಾರಿ-ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಮೂಲಕ ತಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಭಾವಿಸುತ್ತಾರೆ. ಆದ್ರೆ, ಅವರಿಗೆ ತಾವು ಸೇವನೆ ಮಾಡ್ತಿರೋ ಗಳಿಗೆ ಹಲವು ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ ಎಂಬುದು ಮಾತ್ರ ತಿಳಿಯುತ್ತಿಲ್ಲ. ಹಾಗಾದ್ರೆ, ನೀವು ಹೇಳುತ್ತಿರುವ ಸಂಗತಿಯೇನು? ಯಾವ ಆಹಾರವನ್ನು ಯಾವ ಸೂಕ್ತ ಸಮಯಕ್ಕೆ ತಿನ್ನಬೇಕು ನಾವು? ಎಂಬ ಪ್ರಶ್ನೆಗೆ ಹೀಗಿದೆ ಉತ್ತರ.

ಯಾವ ಆಹಾರ ಯಾವ ಸಮಯಕ್ಕೆ?

ಸೇಬು: ಬೆಳಗ್ಗೆ ಸೇವನೆ ಉತ್ತಮ, ರಾತ್ರಿ ಹೊತ್ತು ಬೇಡ!

ಅನ್ನ: ಬೆಳಗ್ಗೆ ಸೇವನೆ ಉತ್ತಮ, ರಾತ್ರಿ ತ್ಯಜಿಸಿ

ಬಾದಾಮಿ: ಬೆಳಗ್ಗೆ ಸೇವನೆ ಉತ್ತಮ, ರಾತ್ರಿ ಬೇಡ

ಚಹಾ: ಸಂಜೆ ಹೊತ್ತು ಉತ್ತಮ, ರಾತ್ರಿ ತ್ಯಜಿಸಿ

ಬಾಳೆಹಣ್ಣು: ನೈಟ್ ಬೆಸ್ಟ್​, ಸಂಜೆ​ ಬೇಡ

ಮೊಸರು: ಬೆಳಗ್ಗೆ ಉತ್ತಮ, ಸಂಜೆ ತ್ಯಜಿಸಿ

ಮೀನು: ಬೆಳಗ್ಗೆ ತ್ಯಜಿಸಿ, ರಾತ್ರಿ ಉತ್ತಮ

ಚಪಾತಿ: ದಿನದ 24 ಗಂಟೆಗಳಲ್ಲಿ ಯಾವ ಸಮಯದಲ್ಲಾದರೂ ಸೇವಿಸಬಹುದು.

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಸದಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಹೆಚ್ಚಿನ ಮಾಹಿತಿ ತಿಳಿಯುವುದು ಉತ್ತಮ.