ಲೈಫ್‌ಸ್ಟೈಲ್

ಕಹಿಬೇವಿಗಿಂತ ಸಿಹಿಬೇವು ಎಷ್ಟು ಶಕ್ತಿಶಾಲಿ ಗೊತ್ತಾ?; ಗ್ಲೋಯಿಂಗ್​ ಸ್ಕಿನ್​​ ಪಡೆಯಲು ಇದು ಉತ್ತಮ ಮಾರ್ಗ

ಕಹಿಬೇವಿನ ಆರೋಗ್ಯ ಪ್ರಯೋಜನದ ಬಗ್ಗೆ ನಿಮಗೆಲ್ಲಾ ತಿಳಿದಿರುತ್ತದೆ. ಇದು ಚರ್ಮ ಮತ್ತು ಕೂದಲಿಗೆ ಬೇವಿನಸೊಪ್ಪು ಬಳಸುವುದು ಸಹಜ. ಆದರೆ ಸಿಹಿಬೇವನ್ನು ನೀವು ಬಳಸಿದ್ದೀರಾ. ಅದರಿಂದಲೂ ಕಹಿಬೇವಿಗಿಂತ ಡಬಲ್​​​ ಪ್ರಯೋಜನವನ್ನು ಪಡೆಯಬಹುದು. ನೀವು ದಿನನಿತ್ಯದಲ್ಲಿ ಸಿಹಿಬೇವನ್ನು ಬಳುಸುತ್ತಿರುತ್ತೀರಿ. ಅಯ್ಯೋ ಈ ಹೆಸರು ಕೇಳುತ್ತಿರುವುದು ಇದೇ ಮೊದಲು, ಇನ್ನೂ ಬಳಸುವುದು ಎಲ್ಲಿಂದಾ ಎಂದು ಆಲೋಚಿಸುತ್ತಿದ್ದೀರಾ.

ನಿಮ್ಮ ಗೊಂದಲವನ್ನು ನಾವು ಪರಿಹರಿಸುತ್ತೇವೆ. ಅಸಲಿಗೆ ನಾವು ಪ್ರತಿದಿನ ಅಡುಗೆಮನೆಯಲ್ಲಿ ಬಳಸುವ ಕರಿಬೇವನ್ನು ಸಿಹಿಬೇವು ಎಂದು ಕರೆಯಲಾಗುತ್ತದೆ. ಇದು ಕೂದಲಿಗೆ ವರವಷ್ಟೆ ಅಲ್ಲ ಚರ್ಮದ ಸಮಸ್ಯೆಗೂ ರಾಮಬಾಣವಾಗಿದೆ. ಆ್ಯಂಟಿಆಕ್ಸಿಡೆಂಟ್ ಇರುವ ಕರಿಬೇವಿನ ಎಲೆಗಳನ್ನು ಮುಖಕ್ಕೆ ಹಚ್ಚುವುದರಿಂದ ಏನೆಲ್ಲಾ ಪ್ರಯೋಜನ ಇದೆ ತಿಳಿದ್ರೆ ನೀವು ಬಳಸುವುದನ್ನು ತಪ್ಪಿಸುವುದಿಲ್ಲ.

ಕರಿಬೇವಿನ ಎಲೆಗಳು ವಿಟಮಿನ್ ಎ, ಬಿ, ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೇರಳವಾಗಿ ಹೊಂದಿದೆ. ಇದು ಮುಖದಲ್ಲಿರುವ ಮೊಡವೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಮುಖದಲ್ಲಿರುವ ಯಾವುದೇ ರೀತಿಯ ಸೋಂಕು ಅಥವಾ ಕಲೆಗಳಿದ್ದರೆ ಅದನ್ನು ಗುಣಪಡಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ಕರಿಬೇವಿನ ಫೇಸ್​ಪ್ಯಾಕ್​​​ ಮಾಡಲು ಬೇಕಾಗುವ ಪದಾರ್ಥಗಳು:

  • ಕರಿಬೇವಿನ ಎಲೆಗಳು- 15-20
  • ರೋಸ್​​​ ವಾಟರ್​​- 1 ಟೀಸ್ಪೂನ್
  • ಕಡ್ಲೆಹಿಟ್ಟು- 1 ಚಮಚ
  • ನಿಂಬೆ- 1 ಟೀಸ್ಪೂನ್
  • ಅರಿಶಿನ- 1 ಪಿಂಚ್

ಫೇಸ್​ಪ್ಯಾಕ್​ ಮಾಡುವ ವಿಧಾನ: ಮೊದಲು ಕರಿಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಇದರ ನಂತರ ಪೇಸ್ಟ್​​​​ ಅನ್ನು ಒಂದು ಬೌಲ್​​ನಲ್ಲಿ ಹಾಕಿ ಅದಕ್ಕೆ 1 ಚಮಚ ಕಡ್ಲೆಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ರೋಸ್ ವಾಟರ್, ನಿಂಬೆ ರಸ ಸೇರಿಸಿ. ಪೇಸ್ಟ್​​​ ಗಟ್ಟಿಯಾದರೆ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ರೋಸ್​ವಾಟರ್​ ಸೇರಿಸಿ ಮಿಶ್ರಣ ಮಾಡಿ. ಸಿದ್ಧಪಡಿಸಿದ ಫೇಸ್​​​ಪ್ಯಾಕ್​​ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ ಮತ್ತು 10 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ. ನಿಮ್ಮ ಚರ್ಮ ಸೆನ್ಸಿಟಿವ್​ ಆಗಿದ್ದರೆ ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಈ ಫೇಸ್​ಪ್ಯಾಕ್​​ ಬಳಸಿದ ಬಳಿಕ ನಿಮ್ಮ ಮುಖ ಹೇಗೆ ಆರೋಗ್ಯಕರವಾಗಿ ಕಾಣುತ್ತದೆ. ಮುಖದಲ್ಲಿನ ಕಲೆಗಳು ಕಡಿಮೆಯಾಗುವುದು ನಿಮಗೆ ಗೋಚರಿಸುತ್ತದೆ. ಮೊಡವೆ ಕಡಿಮೆಯಾಗಬೇಕಾದರೆ ವಾರದಲ್ಲಿ 2 ದಿನ ಇದನ್ನು ಬಳಸಬಹುದು.