Health tips: ಕೆಲವೊಂದು ವರ್ಗದ ಜನರು ತಮ್ಮ ತೂಕವನ್ನು ಕಳೆದುಕೊಳ್ಳಲು ಅನೇಕ ಸಾಹಸಗಳನ್ನು ಎದುರಿಸುತ್ತಾರೆ. ಯೋಗ, ಜಿಮ್, ಊಟ ಬಿಡುವುದು ಇನ್ನಿತರ ವಿಧಾನಗಳಿಂದ ತೂಕ ಕಳೆದುಕೊಳ್ಳುತ್ತಾರೆ. ತೂಕವನ್ನು ಕಳೆದುಕೊಳ್ಳುವುದು ಹೇಗೆ ಕಷ್ಟವೋ ಅದೇ ರೀತಿಯಲ್ಲಿ ಕಳೆದುಕೊಂಡ ತೂಕವು ಬೇಗನೆ ಮರಳುವುದು ಸಾಮಾನ್ಯವಾದಂತ ಸಮಸ್ಯೆ. ಇದಕ್ಕೆ ವೈಜ್ಞಾನಿಕ ಮತ್ತು ಜೀವನಶೈಲಿಯ ಕಾರಣಗಳಿವೆ. ಈ ಸಮಸ್ಯೆಯನ್ನು ತಡೆಗಟ್ಟಲು ದೀರ್ಘಕಾಲೀನ ತಂತ್ರಗಳು ಅಗತ್ಯವಾಗಿವೆ ಇವುಗಳನ್ನು ಅನುಸರಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.
ತೀವ್ರ ಕ್ಯಾಲರಿ ಕಡಿತವು ತಕ್ಷಣದ ತೂಕ ಇಳಿಕೆಗೆ ಕಾರಣವಾಗುತ್ತದೆ, ಇದು ದೇಹದಲ್ಲಿನ ಸ್ನಾಯುವಿನ ತೂಕ ಹಾಗೂ ನೀರನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮತ್ತೆ ಸಾಮಾನ್ಯವಾದ ಆಹಾರವನ್ನು ಸೇವಿಸುವುದರಿಂದ ದೇಹವು ಕೊಬ್ಬನ್ನು ಮರುಪಡೆಯುತ್ತದೆ.
ದೀರ್ಘಕಾಲ ಕಡಿಮೆ ಕ್ಯಾಲರಿ ಸೇವನೆಯಿಂದ ಚಯಾಪಚಯ ದರ ಕುಂಠಿತವಾಗುತ್ತದೆ. ಇದರಿಂದ ದೇಹವು ಕಡಿಮೆ ಶಕ್ತಿಯನ್ನು ಸೀಳಿ ದೇಹದ ತೂಕವನ್ನು ಬೇಗನೆ ಜಾಸ್ತಿ ಮಾಡುತ್ತದೆ.
ತೂಕ ಈಳಿಸುವ ಕ್ರಮ ಮಾಡುವಾಗ ಸರಿಯಾದ ವ್ಯಾಯಾಮವಿಲ್ಲದಿದ್ದರೆ, ಸ್ನಾಯುವಿನ ತೂಕ ಕಡಿಮೆಯಾಗಿ ಚಯಾಪಚಯವನ್ನು ಇನ್ನಷ್ಟು ಕಡಿಮೆ ಮಾಡುತ್ತದೆ.
ತಾತ್ಕಾಲಿಕ ಡಯಟ್ಗಳಿಮದ ತೂಕ ಕಳೆಡದುಕೊಂಡರೂ ಸಹ ಮತ್ತ ಪುನಃ ಮೊದಲಿನ ರೀತಿಯಲ್ಲಿ ಆಹಾರ ಸೇವನೆ ನಡೆಸುವುದರಿಂದ ತೂಕ ಹೆಚ್ಚಳವಾಗಲು ಕಾರಣವಾಗುತ್ತದೆ.
ತೀವ್ರ ಡಯೆಟ್‌ಗಿಂತ, ಪೋಷಕಾಂಶ-ಸಮೃದ್ಧ ಆಹಾರಗಳಾದ ತರಕಾರಿಗಳು, ಹಣ್ಣುಗಳು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳನ್ನು ಸೇವಿಸಿ. ಇದರಿಂದ ದಿನಕ್ಕೆ 500-750 ಕ್ಯಾಲರಿ ಕಡಿತವು ಸುರಕ್ಷಿತ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಶಕ್ತಿ ತರಬೇತಿ ಸ್ನಾಯುವಿನ ತೂಕವನ್ನು ಕಾಪಾಡುತ್ತದೆ. ಇದು ದೇಹದಲ್ಲಿನ ಚಯಾಪಚಯವನ್ನು ಹೆಚ್ಚಿಸುತ್ತದೆ. ಏರೋಬಿಕ್ ವ್ಯಾಯಾಮವು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.
ಆರೋಗ್ಯಕರ ಆಹಾರ ಹಾಗೂ ವ್ಯಾಯಾಮವನ್ನು ದಿನನಿತ್ಯ ಮಾಡುವುದರಿಂದ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಪ್ರತಿ ದಿನ 3-4 ಲೀಟರ್ ನೀರನ್ನು ಸೇವಿಸಿ ಹಾಗೆಯೇ, 7-8 ಗಂಟೆ ನಿದ್ರೆ ಮಾಡುವುದರಿಂದ ಚಯಾಪಚಯ ಕ್ರಿಯೆ ಮಾಡಲು ಸಾಧ್ಯವಾಗಿ ಹಸಿವನ್ನು ನಿಯಂತ್ರಿಸುತ್ತದೆ.
ತೂಕ, ಆಹಾರ ಮತ್ತು ಆರೋಗ್ಯದ ದಾಖಲೆಗಳನ್ನು ಆಗಾಗ ನೆಪಿನಲ್ಲಿಡಿ. ವೈದ್ಯಕೀಯ ಸಲಹೆ ಪಡೆಯಿರಿ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ