ಲೈಫ್‌ಸ್ಟೈಲ್

ನೀವು 30 ವರ್ಷ ದಾಟಿದ್ದೀರಾ? ನಿಮ್ಮ ಜೀವನಶೈಲಿಯಲ್ಲಿ ಈ ಬದಲಾವಣೆಗಳು ಆಗ್ಲೇಬೇಕು, ಇಲ್ಲದಿದ್ರೆ ಅಪಾಯ ಫಿಕ್ಸ್ | Lifestyle

Lifestyle : ಜೀವನದಲ್ಲಿ 30 ವರ್ಷಗಳ ಮೈಲಿಗಲ್ಲನ್ನು ತಲುಪಿದ ನಂತರ ಜೀವನದ ಹೊಸ ಹಂತ ಪ್ರಾರಂಭವಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಈ ಸಮಯದಲ್ಲಿ ತುಂಬಾ ಎಚ್ಚರಿಕೆಯನ್ನು ವಹಿಸಬೇಕು. 20ರ ಹರೆಯದವರಂತೆ ನಿರ್ಲಕ್ಷ್ಯವಹಿಸಿದರೆ ಅದು ನಿಮ್ಮ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.

ಅದರಲ್ಲೂ 30 ವರ್ಷ ದಾಟಿದ ಮೇಲಂತೂ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಮತ್ತು ಮೂಳೆಗಳನ್ನು ಗಟ್ಟಿಗೊಳಿಸುವ ಆಹಾರಗಳನ್ನೂ ಸೇವಿಸಬೇಕು. ಅಂದಹಾಗೆ 30 ವರ್ಷ ದಾಟಿದ ನಂತರ ಆರೋಗ್ಯವಾಗಿರಲು ತಮ್ಮ ಜೀವನಶೈಲಿಯಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಆರೋಗ್ಯ ತಪಾಸಣೆ

ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ದೇಹದಲ್ಲಿನ ಯಾವುದೇ ಕಾಯಿಲೆಯನ್ನು ಮೊದಲೇ ತಿಳಿದುಕೊಳ್ಳಬಹುದು. ಅದರಲ್ಲೂ ಕೊಬ್ಬಿನ ಪ್ರಮಾಣ ಮತ್ತು ಬಿಪಿಯನ್ನು ಪರೀಕ್ಷಿಸಿಕೊಳ್ಳುವುದು ತುಂಬಾ ಒಳ್ಳೆಯದು.

ಮೂಳೆಗಳ ಆರೋಗ್ಯದತ್ತ ಗಮನ

ವಯಸ್ಸಾದಂತೆ ಮೂಳೆಯ ಸಾಂದ್ರತೆಯು ಯಾರಿಗಾದರೂ ಕಡಿಮೆಯಾಗುತ್ತದೆ. ಇದು ಮೂಳೆ ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಕ್ಯಾಲ್ಸಿಯಂ ಕಡಿಮೆಯಾಗುವುದರಿಂದ ಈ ಸ್ಥಿತಿಯು ಸಂಭವಿಸುತ್ತದೆ. ಆದ್ದರಿಂದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪೂರಕಗಳು ಅಗತ್ಯವಿದೆಯೇ ಎಂದು ಪರಿಶೀಲಿಸಿಕೊಳ್ಳಿ.

ಹೃದಯದ ಆರೋಗ್ಯದ ಮೇಲೆ ಗಮನ

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿದೆ. ಹೃದಯದ ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸಬೇಕು. ಹೃದಯದ ಆರೋಗ್ಯವನ್ನು ಹೆಚ್ಚಿಸಲು ಮೀನುಗಳಂತಹ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಆಹಾರಗಳನ್ನು ತೆಗೆದುಕೊಳ್ಳಬೇಕು.

ಮಾನಸಿಕ ಆರೋಗ್ಯ

ನೀವು ದೈಹಿಕವಾಗಿ ಎಷ್ಟೇ ಸದೃಢರಾಗಿದ್ದರೂ ಮಾನಸಿಕವಾಗಿ ಚೆನ್ನಾಗಿಲ್ಲದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ತಾನಾಗಿಯೇ ಪರಿಣಾಮ ಬೀರುತ್ತದೆ. ಅನಗತ್ಯ ಒತ್ತಡವನ್ನು ತಪ್ಪಿಸಿ. ನಿಮಗೆ ಒತ್ತಡ ತರುವ ವಿಷಯಗಳಿಂದ ದೂರವಿರಿ.

ಗಮನಿಸಿ: ಈ ಮೇಲಿನ ಮಾಹಿತಿಯನ್ನು ಇಂಟರ್ನೆಟ್​ನಲ್ಲಿ ದೊರೆತ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಇದು ಕೇವಲ ಜಾಗೃತಿಗಾಗಿ. ಇದನ್ನು ವಿಜಯವಾಣಿ.ನೆಟ್​ ದೃಢೀಕರಿಸುವುದಿಲ್ಲ. ಹೀಗಾಗಿ ಈ ಮೇಲಿನದ್ದನ್ನು ಅನುಸರಿಸುವ ಮುನ್ನ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.