ಲೈಫ್‌ಸ್ಟೈಲ್

ನಿಮ್ಮ ಮಕ್ಕಳಿಗೆ TV, Mobile ತೋರಿಸಿ ಊಟ ತಿನ್ನಿಸುತ್ತಿದ್ದೀರಾ!; ಇದು ಎಷ್ಟು ಅಪಾಯಕಾರಿ ಗೊತ್ತೆ?

TV, Mobile:ಇತ್ತೀಚಿನ ದಿನಮಾನಗಳ ಈ ತಾಂತ್ರಿಕ ಯುಗದಲ್ಲಿ ದಿನನಿತ್ಯ ಮಕ್ಕಳಿಗೆ ಟಿವಿ ಮತ್ತು ಮೊಬೈಲ್​ ತೋರಿಸಿಯೇ ಪಾಲಕರು ಊಟ ಮಾಡಿಸುತ್ತಾರೆ. ಅಲ್ಲದೆ, ಇದು ಮಕ್ಕಳಿಗೂ ಕೂಡ ಅಭ್ಯಾಸವಾಗಿಬಿಟ್ಟಿದೆ. ಮನೆಯಲ್ಲಿ ಟಿವಿ ಅಥವಾ ಮೊಬೈಲ್​ ಇಲ್ಲವಾದರೆ ಅಂದು ಊಟನೇ ಇಲ್ಲ ಎಂಬಾತಾಗಿದೆ. ಮನೋರಂಜನೆ ಪಡೆಯುತ್ತ ಮಕ್ಕಳು ಊಟ ಮಾಡುತ್ತಾರೆ ಎಂದು ಅಮ್ಮ ಅಂದುಕೊಂಡಿರುತ್ತಾಳೆ. ಆದರೆ, ಈ ಶಾರ್ಟ್​ಕಟ್​ ನಿಂದ ಮಗುವಿಗೆ ಏನೆಲ್ಲಾ ಅಪಾಯಗಳು ಎದುರಾಗಲಿವೆ ಎಂದು ತಿಳಿದುಕೊಳ್ಳಿ.

TV, Mobile ನೋಡುತ್ತಾ ತಿಂದರೆ ಅಪಾಯಕಾರಿ

ಮಕ್ಕಳ ಆಹಾರ ಪದ್ಧತಿ ಕುರಿತಂತೆ ಎನ್ವಿರಾರ್​ಮೆಂಟಲ್​ ಜನರಲ್​ ಆಪ್​ ಹೆಲ್ತ್​​ ನಿಯತಕಾಲಿಕೆ(ಮ್ಯಾಗ್​ಜಿನ್)ಯು ಸಂಶೋಧನೆಯೊಂದನ್ನು ಪ್ರಕಟಿಸಿದೆ. ಇದರ ಪ್ರಕಾರ, ಟಿವಿ ಮತ್ತು ಮೊಬೈಲ್​ ತೋರಿಸಿ ಊಟ ಮಾಡುವ ಮಕ್ಕಳು ಭವಿಷ್ಯದಲ್ಲಿ ಪ್ರತಿಬಾರಿ ಊಟಕ್ಕೆ ಮತ್ತು ಸಣ್ಣಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತಾನೆ ಇರುತ್ತಾರೆ ಎಂದು ಅಧ್ಯಯನ ಹೇಳಿದೆ. ಅಲ್ಲದೆ, 10 ವರ್ಷದವರೆಗೆ ಮಕ್ಕಳು ಟಿವಿ ಮತ್ತು ಮೊಬೈಲ್​ ನೋಡುತ್ತಾ ಊಟ ಮಾಡಿದರೆ ಮುಂದೆ ಬೊಜ್ಜು ಬೆಳೆಯುತ್ತದೆ. ಬೊಜ್ಜಿಗೆ ಬಲಿಯಾಗುವ ಸಂಭವ ಇದೆ. ಜತೆಗೆ ಅನೇಕ ರೋಗಗಳು ಕೂಡ ಕಾಣಿಸಕೊಳ್ಳಲಿವೆ ಎಂದು ವರದಿ ಉಲ್ಲೇಖಿಸಿದೆ.

WHO ಕೂಡ ಕೊಟ್ಟಿದೆ ಎಚ್ಚರಿಕೆ!

ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಮಕ್ಕಳು ಎಲೆಟ್ರಾನಿಕ್ಸ್​ ಗ್ಯಾಜೆಟ್​ಗಳಿಂದ ದೂರವಿರಬೇಕು ಎಂಬ ವರದಿ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸ್ಕ್ರೀನ್ ಸಮಯವನ್ನು ನಿರ್ಧರಿಸಲಾಗಿದೆ. ಈ ಮಕ್ಕಳ ಅತಿಯಾದ ಸ್ಕ್ರೀನ್ ಸಮಯವು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ವರದಿಯಲ್ಲಿ, WHO ಮಕ್ಕಳು ಮೊಬೈಲ್, ಟಿವಿ ಅಥವಾ ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರವಿರಲು ಸೂಚಿಸಿದೆ.

ಟಿವಿ ನೋಡಿ ಊಟ ಮಾಡುವುದರಿಂದ ಅನಾನುಕೂಲಗಳು

1.ಚಯಪಚಯ ಕ್ರಿಯೆ ನಿಧಾನ

2.ಮಕ್ಕಳು ಅತಿಯಾದ ತಿನ್ನುವಿಕೆ

3.ಜಂಕ್​ ಪುಡ್​ ತಿನ್ನಲಿ ಇಷ್ಟಪಡುತ್ತಾರೆ

4. ಬೊಜ್ಜು ಬರುತ್ತದೆ

5.ಪೌಷ್ಠಿಕಾಂಶದ ಕೊರತೆ.(ಏಜೆನ್ಸೀಸ್​)