Drinking water: ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತವೆ ಎಂದು ಹೇಳಲಾಗಿದೆ. ಆರೋಗ್ಯಕ್ಕೆ ಊಟ ಎಷ್ಟು ಮುಖ್ಯವೋ, ನೀರು ಕೂಡ ಅಷ್ಟೇ ಮುಖ್ಯ. ವರದಿಯ ಪ್ರಕಾರ ಸರಿಯಾದ ಪ್ರಮಾಣದ ನೀರನ್ನು ಸೇವಿಸದಿದ್ದರೆ, ದೇಹದ ಒತ್ತಡದ ಮಟ್ಟ ಹೆಚ್ಚಾಗುತ್ತದೆ ಎನ್ನಲಾಗಿದೆ. ಕಡಿಮೆ ನೀರು ಸೇವಿಸಿದರೆ, ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಳದಿಂದಾಗಿ ದೇಹವು ಒತ್ತಡಕ್ಕೆ ಒಳಗಾಗಲಿದೆ. ಈ ಪ್ರಮುಖ ಆರೋಗ್ಯ ಸಂಬಂಧಿತ ಮಾಹಿತಿಯು ಜರ್ನಲ್ ಆಫ್ ಅಪ್ಲೈಡ್ ಫಿಸಿಯಾಲಜಿಯ ವರದಿಯಲ್ಲಿ ಬೆಳಕಿಗೆ ಬಂದಿದೆ.
ನಾವು ಒತ್ತಡದಲ್ಲಿದ್ದೇವೆ ಎಂದು ನಮಗೆ ಅನಿಸದೇ ಇರಬಹುದು. ಆದರೆ ದೇಹದಲ್ಲಿ ಒತ್ತಡದ ಮಟ್ಟ ಹೆಚ್ಚಾಗುತ್ತದೆ. ಇದು ಕಾರ್ಟಿಸೋಲ್ ಹಾರ್ಮೋನ್ನಿಂದಾಗಿ ಸಂಭವಿಸುತ್ತದೆ.
ದೇಹವು ನಿರ್ಜಲೀಕರಣಗೊಂಡಾಗ, ಮೆದುಳು ವಾಸೊಪ್ರೆಸಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ಮೂತ್ರಪಿಂಡಗಳಿಗೆ ನೀರನ್ನು ಸಂರಕ್ಷಿಸಲು ಸಂದೇಶವನ್ನು ಕಳುಹಿಸುತ್ತದೆ. ಇದರೊಂದಿಗೆ ಮೆದುಳಿನ ವ್ಯವಸ್ಥೆಯು ಸಹ ಸಕ್ರಿಯಗೊಳ್ಳುತ್ತದೆ. ಈ ವ್ಯವಸ್ಥೆಯು ದೇಹದಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಕಾರ್ಟಿಸೋಲ್ ಎಂಬ ಹಾರ್ಮೋನ್ ದೇಹವನ್ನು ಒತ್ತಡಕ್ಕೆ ಒಳಪಡಿಸುತ್ತದೆ ಮತ್ತು ಹೆಚ್ಚು ಗ್ಲೂಕೋಸ್ ಅನ್ನು ಉತ್ಪಾದಿಸುತ್ತದೆ.
ಗೊಂದಲ ಮತ್ತು ಗಮನದ ಕೊರತೆ: ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗಿ, ಗಮನ ಕೇಂದ್ರೀಕರಿಸಲು ತೊಂದರೆಯಾಗಬಹುದು.
ಮನಸ್ಥಿತಿಯ ಏರಿಳಿತ: ಖಿನ್ನತೆ ಅಥವಾ ಮನಸ್ಥಿತಿಯ ಏರಿಳಿತಗಳು ಕಾಣಿಸಿಕೊಳ್ಳಬಹುದು.
ಉದ್ವೇಗ ಮತ್ತು ಒತ್ತಡ: ನೀರಿನ ಕೊರತೆಯಿಂದ ಕಾರ್ಟಿಸಾಲ್‌ನಂತಹ ಒತ್ತಡ ಹಾರ್ಮೋನುಗಳು ಹೆಚ್ಚಾಗಿ, ಉದ್ವೇಗ ಮತ್ತು ಕಿರಿಕಿರಿಯ ಭಾವನೆ ಉಂಟಾಗಬಹುದು.
(ಏಜೆನ್ಸೀಸ್)
ಆರೋಗ್ಯವಾಗಿರಲು ನೀವು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ, ಮಹಿಳೆಯರು ದಿನಕ್ಕೆ 2 ಲೀಟರ್ ನೀರು ಕುಡಿಯಬೇಕು. ಪುರುಷರು 2.5 ಲೀಟರ್ ನೀರು ಕುಡಿಯುವುದು ಉತ್ತಮ.