- ಪಪ್ಪಾಯಿಯನ್ನು ತುಂಬಾ ಆರೋಗ್ಯಕರ ಹಣ್ಣು ಎಂದು ಪರಿಗಣಿಸಲಾಗುತ್ತದೆ
- ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಪಪೈನ್ ಎಂಬ ಕಿಣ್ವವಿದೆ
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಉರಿಯೂತವನ್ನು ಕಡಿಮೆ ಮಾಡುತ್ತದೆ
- ಪಪ್ಪಾಯಿ ಎಲ್ಲರಿಗೂ ಸುರಕ್ಷಿತವಲ್ಲ ಎಂದು ಹಲವರಿಗೆ ತಿಳಿದಿಲ್ಲ
Papaya : ಪಪ್ಪಾಯಿಯನ್ನು ತುಂಬಾ ಆರೋಗ್ಯಕರ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಪಪೈನ್ ಎಂಬ ಕಿಣ್ವವಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವಂತಹ ಹಣ್ಣಾಗಿದೆ. ಪ್ರತಿಯೊಬ್ಬರು ಇದನ್ನು ಸೇವಿಸುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಪಪ್ಪಾಯಿ ಎಲ್ಲರಿಗೂ ಸುರಕ್ಷಿತವಲ್ಲ ಎಂದು ಹಲವಾರು ಜನರಿಗೆ ತಿಳಿದಿಲ್ಲ. ಹಾಗಾಗಿ ಪಪ್ಪಾಯಿಯನ್ನು ಸಂಪೂರ್ಣವಾಗಿ ಯಾರು ಸೇವಿಸಬಾರದು ಎಂದು ತಿಳಿಯಿರಿ.
1. ಗರ್ಭಿಣಿ ಮಹಿಳೆಯರು
ಗರ್ಭಿಣಿ ಮಹಿಳೆಯರು ಮಾಗಿದ ಪಪ್ಪಾಯಿಯನ್ನು ಸೇವಿಸುವುದನ್ನು ತಪ್ಪಿಸಬೇಕು. ಇದರಲ್ಲಿ ಲ್ಯಾಟೆಕ್ಸ್ ಮತ್ತು ಪಪೈನ್ ಇದ್ದು, ಇದು ಗರ್ಭಾಶಕ್ಕೆ ತೊಂದರೆ ಉಂಟು ಮಾಡಿ, ಅಕಾಲಿಕ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆ. ಸುರಕ್ಷಿತ ಗರ್ಭಧಾರಣೆಗಾಗಿ ಪಪಾಯಿ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮವಾಗಿದೆ.
2. ಹೃದಯದ ತೊಂದರೆ ಇರುವವರು
ಹೃದಯದ ತೊಂದರೆ ಅನುಭವಿಸುವವರು ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ತೊಂದರೆಯಾಗುವುದಿಲ್ಲ. ಆದರೆ ವಾರ್ಫರಿನ್ (ರಕ್ತ ತೆಳ್ಳಗೆ ಮಾಡುವ ಔಷಧ) ಸೇವಿಸುತ್ತಿದ್ದರೆ, ಇದು ಪಪ್ಪಾಯಿಯಲ್ಲಿರುವ ವಿಟಮಿನ್-K ರಕ್ತ ಗಟ್ಟಿಯಾಗಲು ಸಹಾಯ ಮಾಡಿ ಔಷಧದ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನೀವೇನಾದರೂ, ಹೆಚ್ಚು ಪ್ರಮಾಣದಲ್ಲಿ ಪಪ್ಪಾಯಿಯನ್ನು ಸೇವಿಸಿದರೆ ಇದು ಹೃದಯದ ಬಡಿತವನ್ನು ಅಸಮತೋಲನಗೊಳಿಸಬಹುದು.
3. ಅಲರ್ಜಿ ಸಮಸ್ಯೆ ಇರುವವರು
ಲ್ಯಾಟೆಕ್ಸ್ ಅಲರ್ಜಿ ಇರುವವರು ಪಪ್ಪಾಯಿ ಸೇವಿಸಿದರೆ “ಲ್ಯಾಟೆಕ್ಸ್-ಫ್ರೂಟ್ ಸಿಂಡ್ರೋಮ್” ಉಂಟಾಗುತ್ತದೆ. ಇದರಿಂದ ಬಾಯಿ ತುರಿಕೆ, ಗಂಟಲು ಉರಿ, ತುಟಿ-ನಾಲಿಗೆ ಊತ, ಚರ್ಮದಲ್ಲಿ ದದ್ದು ಕಾಣಿಸಿಕೊಳ್ಳುವುದು, ಉಸಿರುಗಟ್ಟುವಿಕೆ, ಅಲರ್ಜಿಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ವೈದ್ಯರ ಸಲಹೆ ಪಡೆದು ಪಪ್ಪಾಯಿ ಸೇವಿಸುವುದು ಉತ್ತಮ.
4. ಮೂತ್ರಪಿಂಡದ ಸಮಸ್ಯೆ ಇರುವ ವ್ಯಕ್ತಿಗಳು
ಪಪ್ಪಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗಾಗಿ ಈ ಸಮಸ್ಯೆ ಇರುವಂತಹವರು ಈ ಹಣ್ಣನ್ನು ಸೇವಿಸುವಾಗ ಎಚ್ಚರ ವಹಿಸಬೇಕು. ಇದು ಪಪ್ಪಾಯಿಯಲ್ಲಿ ಆಕ್ಸಲೇಟ್ ಪ್ರಮಾಣ ಹೆಚ್ಚಿರುವುದರಿಂದ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳು ಹೆಚ್ಚು ರೂಪುಗೊಳ್ಳಬಹುದು. ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ಇದು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗಾಗಿ ಸೀಮಿತ ಪ್ರಮಾಣದಲ್ಲಿ ಹಣ್ಣನ್ನು ಸೇವಿಸಬೇಕು.
5. ಹೊಟ್ಟೆಯ ಸಮಸ್ಯೆಯ ಜನರು
ಪಪ್ಪಾಯಿಯಲ್ಲಿ ಫೈಬರ್ ಮತ್ತು ಪಪೈನ್ ಸಮೃದ್ಧವಾಗಿದೆ. ಹೊಟ್ಟೆಯ ಸಮಸ್ಯೆ (ಅಲ್ಸರ್, ಗ್ಯಾಸ್ಟ್ರೈಟಿಸ್, IBS, ಆಮ್ಲತೆ) ಇರುವವರು ಹೆಚ್ಚು ಪ್ರಮಾಣದಲ್ಲಿ ಪಪ್ಪಾಯಿ ತಿನ್ನುವುದರಿಂದ ತೊಂದರೆಯಾಗಬಹುದು. ಇದು ಎದೆಯಲ್ಲಿ ಉರಿಯುವುದು, ಆಮ್ಲೀಯತೆ, ನೋವು ಉಂಟು ಮಾಡುತ್ತದೆ. ಹಾಗಾಗಿ ಸೂಕ್ಷ್ಮ ಹೊಟ್ಟೆಯನ್ನು ಹೊಂದಿದ ಜನರು ಈ ಪಪ್ಪಾಯಿಯನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು.
ಪಪ್ಪಾಯಿ ತುಂಬಾ ಪೌಷ್ಟಿಕ ಹಣ್ಣು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ ಇದು ಎಲ್ಲರಿಗೂ ಅಲ್ಲ. ಗರ್ಭಿಣಿಯರು, ಹೃದಯ ರೋಗಿಗಳು, ಲ್ಯಾಟೆಕ್ಸ್ ಅಲರ್ಜಿ ಇರುವವರು, ಮೂತ್ರಪಿಂಡದ ಕಲ್ಲುಗಳಿರುವವರು ಮತ್ತು ಹೊಟ್ಟೆಯ ಸಮಸ್ಯೆ ಇರುವವರು ಇದನ್ನು ಮಿತವಾಗಿ ಸೇವಿಸಬೇಕು. ಹಾಗೆಯೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.