ರೀಲ್ಸ್ ನೋಡಿ ಕೊರಿಯನ್​ ಗ್ಲಾಸ್​ ಸ್ಕಿನ್​ಗೆ ಪ್ರಯತ್ನಿಸಿದ್ರೆ ಈಗಿರೋ ಸ್ಕಿನ್​ ಕೂಡ ಉಳಿಯಲ್ಲ ಎಚ್ಚರ! | ​ Glass Skin  
ಲೈಫ್‌ಸ್ಟೈಲ್

ರೀಲ್ಸ್ ನೋಡಿ ಕೊರಿಯನ್​ ಗ್ಲಾಸ್​ ಸ್ಕಿನ್​ಗೆ ಪ್ರಯತ್ನಿಸಿದ್ರೆ ಈಗಿರೋ ಸ್ಕಿನ್​ ಕೂಡ ಉಳಿಯಲ್ಲ ಎಚ್ಚರ! | ​ Glass Skin

ಈ ಅಧ್ಯಯನವನ್ನು 'ಯುರೋಪಿಯನ್ ಅಕಾಡೆಮಿ ಆಫ್ ಡರ್ಮಟಾಲಜಿ ಅಂಡ್ ವೆನೆರಿಯಾಲಜಿ ಕಾಂಗ್ರೆಸ್'ನಲ್ಲಿ ಮಂಡಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.

Glass Skin: ಜಾಲತಾಣಗಳಲ್ಲಿ ಮುಳುಗಿ ಹೋಗುವ ಅದೆಷ್ಟೋ ಮಂದಿ, ಈ ರೀಲ್​​ ವಿಡಿಯೋಗಳಲ್ಲಿ ಹೆಚ್ಚಾಗಿ ಹರಿದಾಡುವ ಕೊರಿಯನ್ ತ್ವಚೆಯ ಆರೈಕೆ (Korean skincare), ವಿಶೇಷವಾಗಿ 'ಗ್ಲಾಸ್ ಸ್ಕಿನ್' (Glass Skin) ಎಂದೇ ಕರೆಯಲ್ಪಡುವ ವಿಡಿಯೊಗಳನ್ನು ನೋಡಿ ತಮ್ಮದೂ ಹಾಗೆಯೇ ಇರಬೇಕೆಂದು ಮಾಡಿಕೊಳ್ಳುವ ಪ್ರಯತ್ನ ನಿಜಕ್ಕೂ ಬೇಸರದ ಸಂಗತಿ. ಕಾರಣ, ಇತ್ತೀಚಿಗೆ ಹೊರಬಿದ್ದಿರುವ ಹೊಸ ಆತಂಕಕಾರಿ ವರದಿ.

ಈ ರೀಲ್​ನಂತಹ ವಿಡಿಯೋಗಳಲ್ಲಿ ಹರಿದುಬರುತ್ತಿರುವ ಗ್ಲಾಸ್​ ಸ್ಕಿನ್​ ಕೇರ್​ ಅಥವಾ ಕೊರಿಯನ್​ ಸ್ಕೀನ್​ ಕೇರ್​ ಸಲಹೆಗಳ ವಿಡಿಯೋಗಳು ನೋಡುಗರನ್ನು ದಾರಿತಪ್ಪಿಸುವಂತಿವೆ ಎಂದು ಎಚ್ಚರಿಕೆ ನೀಡಲಾಗಿದೆ. ಜನಪ್ರಿಯ ಟಿಕ್​ಟಾಕ್​ ಫ್ಲಾಟ್​ಫಾರ್ಮ್​ನಲ್ಲಿ ಬರುವ ಕೆ-ಬ್ಯೂಟಿ (K-beauty) ವಿಡಿಯೊಗಳನ್ನು ಆಧರಿಸಿದ ಅಧ್ಯಯನವೊಂದರಲ್ಲಿ ಈ ಆತಂಕಕಾರಿ ವಿಷಯ ಬಹಿರಂಗಗೊಂಡಿದೆ. ಈ ಅಧ್ಯಯನವನ್ನು 'ಯುರೋಪಿಯನ್ ಅಕಾಡೆಮಿ ಆಫ್ ಡರ್ಮಟಾಲಜಿ ಅಂಡ್ ವೆನೆರಿಯಾಲಜಿ ಕಾಂಗ್ರೆಸ್'ನಲ್ಲಿ ಮಂಡಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಶೇ.95ರಷ್ಟು ವಿಡಿಯೋಗಳು

'ಗ್ಲಾಸ್ ಸ್ಕಿನ್' ಎಂದರೆ ನಯವಾದ, ಸ್ವಚ್ಛವಾದ ಮತ್ತು ತೇವಾಂಶಭರಿತ ತ್ವಚೆ ಎಂದರ್ಥ. ಪರಿಶೀಲನೆಗೆ ಒಳಪಡಿಸಿದ ಕೊರಿಯನ್ ತ್ವಚೆಯ ಆರೈಕೆ ವೀಡಿಯೊಗಳ ಪೈಕಿ ಶೇ.95ರಷ್ಟು ವಿಡಿಯೋಗಳು ವೈಜ್ಞಾನಿಕವಾಗಿ ಸಾಬೀತಾಗದ, ಉತ್ಪ್ರೇಕ್ಷಿತ ಅಥವಾ ದಾರಿತಪ್ಪಿಸುವ ಕನಿಷ್ಠ ಒಂದಾದರೂ ವಿಷಯವನ್ನು ಒಳಗೊಂಡಿವೆ ಎಂದು ಹೇಳಲಾಗಿದೆ. 'ಕೆ-ಬ್ಯೂಟಿ' ವಿಷಯವನ್ನು ಟಿಕ್‌ಟಾಕ್‌ನಲ್ಲಿ ಸೃಷ್ಟಿಸುವವರಲ್ಲಿ ಹೆಚ್ಚಿನವರು ಚರ್ಮರೋಗ ತಜ್ಞರೂ ಅಲ್ಲ ಅಥವಾ ತ್ವಚೆಯ ಆರೈಕೆ ಕ್ಷೇತ್ರದಲ್ಲಿ ಅರ್ಹತೆ ಪಡೆದವರೂ ಅಲ್ಲ. ಇವರೆಲ್ಲ, ಕೇವಲ ತಮ್ಮ ವೈಯಕ್ತಿಕ ಅನುಭವಗಳನ್ನು ಸತ್ಯವೆಂಬಂತೆ ವಿಡಿಯೋದಲ್ಲಿ ತೋರಿಸುತ್ತಿದ್ದಾರೆ.

ಎಲ್ಲರಿಗೂ ಒಂದೇ ಅಲ್ಲ!

ಪ್ರತಿಯೊಬ್ಬರ ತ್ವಚೆಯು ವಿಭಿನ್ನ. ಒಬ್ಬರಿಗೆ ಸೂಕ್ತ ಎನಿಸುವ ಉತ್ಪನ್ನವು, ಇನ್ನೊಬ್ಬರಲ್ಲಿ ತೀವ್ರ ಅಲರ್ಜಿ ಮತ್ತು ಮೊಡವೆಗಳನ್ನು ಉಂಟುಮಾಡಬಹುದು. ಎಂಟು ಅಥವಾ ಹತ್ತು ಹಂತಗಳ ತ್ವಚೆಯ ಆರೈಕೆ ಕ್ರಮವನ್ನು ಅನುಸರಿಸುವುದರಿಂದ ತ್ವಚೆಯ ಮೇಲೆ ಅನಗತ್ಯ ರಾಸಾಯನಿಕಗಳ ಪ್ರಮಾಣ ಹೆಚ್ಚಾಗಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂತಹ ಸ್ಕಿನ್ ಕೇರ್​ ವಿಡಿಯೋ ಅಥವಾ ಸಲಹೆಗಳನ್ನು ಕುರಡಾಗಿ ನಂಬಿ, ದೇವರು ಕೊಟ್ಟಿರುವ ನೈಸರ್ಗಿಕ ಸೌಂದರ್ಯವನ್ನು ಹಾಳು ಮಾಡಿಕೊಳ್ಳುವುದು ದುರಂತ.

ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸುವ ಬದಲು, ನಿಮ್ಮ ಸ್ವಂತ ತ್ವಚೆಯ ಪ್ರಕಾರಕ್ಕೆ ಅನುಗುಣವಾದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ವಿಪರೀತ ಚರ್ಮದ ಸಮಸ್ಯೆಗಳನ್ನು ಹೊಂದಿರುವವರು ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಪುಕ್ಕಟೆ ಸಲಹೆಯ ವಿಡಿಯೋಗಳ ಕಡೆ ಗಮನ ಕೊಡುವ ಬದಲು, ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಅತ್ಯುತ್ತಮ ಸಲಹೆ ಎನ್ನಬಹುದು,(ಏಜೆನ್ಸೀಸ್).