Weight loss: ಇಂದಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ಕಠಿಣ ಮಾರ್ಗವಾಗಿ ಕಾಣಿಸಬಹುದು. ಕೆಲವೊಮ್ಮೆ ನಿಯಮಿತ ವ್ಯಾಯಾಮ, ಆಹಾರ ಸೇವನೆ ಹಾಗೂ ಕೆಲವೊಮ್ಮೆ ಮಾದಕ ವಸ್ತುಗಳಿಂದ ದೂರ ಇರುವುದು ಕೂಡಾ ತೂಕ ಇಳಿಸಿಕೊಳ್ಳಲು ಅದ್ಭುತವಾಗಿ ಕೆಲಸ ಮಾಡುತ್ತದೆ. ನಿವೇನಾದರೂ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಹೆಣಗಾಡುತ್ತಿದ್ದರೆ, 61 ವರ್ಷದ ಕ್ಯಾಲಿಫೋರ್ನಿಯಾ ನಿವಾಸಿ ಡೇಲ್ ವರಿಂದ ಸ್ಪೂರ್ತಿ ತೆಗೆದುಕೊಳ್ಳಿ...
ವರದಿಗಳ ಪ್ರಕಾರ ಡೇಲ್ ವಿಚ್ಚೇಧನ ಪಡೆದ ನಂತರ, ಕಠಿಣ ಪರಿಸ್ಥಿತಿಯನ್ನು ಅನುಭವಿಸಲು ಪ್ರಅರಂಭಿಸಿದರು. ತದನಂತರ ಇವರು ಶಿಸ್ತು ಹಾಗೂ ಸ್ಥಿರತೆಯಿಂದ 43 ಕೆಜಿ ತೂಕವನ್ನು ಕಳೆದುಕೊಂಡು ಫಿಟ್ ಆಗಿರುವ ಜೀವನಶೈಲಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಯ್ಯಪ್ಪ ಭಕ್ತರ ಬೆನ್ನಿಗೆ ಚೂರಿ… ಕೇರಳ ಸರ್ಕಾರದ ಪರವಾಗಿ ಬಾಹುಬಲಿ ಕಟ್ಟಪ್ಪ ಶೈಲಿಯಲ್ಲಿ ವಂಚನೆ ಆರೋಪ! Ayyappa Devotees
ತೂಕ ಇಳಿಸಿಕೊಳ್ಳುವ ಮೊದಲ ಹಂತವೆಂದರೆ, ಆಹಾರದಲ್ಲಿ ಬದಲಾವಣೆ ಮಾಡಬೇಕು. ಇಲ್ಲಿ ಹೆಚ್ಚು ಕ್ಯಾಲರಿ ಇರುವಂತಹ ಆಹಾರಗಳನ್ನು ಸೇವಿಸುವ ಬದಲು ಹಣ್ಣು, ತರಕಾರಿ, ಹಿಟ್ಟು, ಬೀಜಗಳು ಮತ್ತು ಪ್ರೋಟೀನ್ ಸಮೃದ್ಧ ಆಹಾರಗಳನ್ನು ಸೇವಿಸಬೇಕು ಎಂದು ತಿಳಸಿದ್ದಾರೆ.
ದಿನಕ್ಕೆ ಕನಿಷ್ಟ 30 ನಿಮಿಷಗಳ ವ್ಯಾಯಾಮ ಮಾಡಿ. ನಡೆಯುವುದು, ಓಡುವುದು, ಯೋಗ, ಈಜುವುದು, ತೂಕ ಎತ್ತುವ ವ್ಯಾಯಮಗಳನ್ನು ಮಾಡುವುದರಿಂದ ದೇಹದಲ್ಲಿರುವ ಕ್ಯಾಲೋರಿಯನ್ನು ಕಡಿಮೆ ಮಾಡಿ ಸ್ನಾಯುಗಳನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನವರಾತ್ರಿಯಂದು ಈ ವಸ್ತುಗಳನ್ನು ಮನೆಗೆ ತನ್ನಿ! ಸಂಪತ್ತು ಮತ್ತು ಸಮೃದ್ಧಿಯು ನಿಮ್ಮದಾಗುತ್ತದೆ.. navratri festival
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ದಿನಕ್ಕೆ 7-8 ಗಂಟೆಗಳ ಕಾಲ ನಿದ್ರೆಯನ್ನು ಮಾಡಬೇಕು. ನಮ್ಮಲ್ಲಾಗುವ ಅಧಿಕ ಒತ್ತಡದಿಂದ ಹಾರ್ಮೋನ್ಗಳು ತೂಕ ಹೆಚ್ಚಿಸುತ್ತವೆ. ಧ್ಯಾನ ಹಾಗೂ ಯೋಗ ಮಾಡುವುದರ ಮೂಲಕ ಒತ್ತಡವನ್ನು ನಿಯಂತ್ರಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ.
ಈ ಮೂರು ವಿಧಾನಗಳನ್ನು ಅನುಸರಿಸಿದ ನಂತರ ಇವರು, ಸೊಂಟದ ಫ್ಲಾಪ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದರ ಬಗ್ಗೆ ತಿಳಿಸಿದ್ದಾರೆ. 2023 ರಲ್ಲಿ, ಅವರು ಟಮ್ಮಿ ಟಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದು ಹೆಚ್ಚಾಗಿ ಯಾವುದೇ ತೊಂದರೆ ಮಾಡದೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದವು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ