ಲೈಫ್‌ಸ್ಟೈಲ್

5 ದಿನ, 150 ನಿಮಿಷ: ಈ ಸರಳ ನಡಿಗೆ ನಿಯಮದಿಂದ ಹೃದಯಾಘಾತಕ್ಕೆ ಗುಡ್‌ಬೈ! | Health tips

Health tips: ನಡಿಗೆಯು ಒಂದು ಸರಳ, ಕಡಿಮೆ ಮತ್ತು ತೀವ್ರತೆಯ ವ್ಯಾಯಾಮವಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡಲು ಶಕ್ತಿಶಾಲಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ವಿಶ್ವಾದ್ಯಂತ ಸಾವಿರಾರು ಜನರು ಹೃದಯಾಘಾತ ಮತ್ತು ಸ್ಟ್ರೋಕ್‌ಗೆ ಒಳಗಾಗುತ್ತಾರೆ. ಆದರೆ, ದಿನನಿತ್ಯ ನಾವು ನಡೆಯುವ ನಡಿಗೆಯಿಂದ ಈ ಅಪಾಯಗಳನ್ನು ತಡೆಯಬಹುದು. ಇದಕ್ಕೆ ಒಂದು ನಿರ್ದಿಷ್ಟ ನಿಯಮದ ನಡಿಗೆಯನ್ನು ಪಾಲಿಸುವುದು ಮುಖ್ಯ.

ನಡಿಗೆ ನಿಯಮ ಎಂದರೇನು?

ಹೃದಯದ ಆರೋಗ್ಯಕ್ಕಾಗಿ ವೈದ್ಯರು ಸೂಚಿಸುವ ಪ್ರಕಾರ 5-30-150 ನಿಯಮವನ್ನು ಶಿಫಾರಸ್ಸು ಮಾಡುತ್ತಾರೆ. ಅಂದರೆ ವಾರಕ್ಕೆ 5 ದಿನ ದಿನಕ್ಕೆ 30 ನಿಮಿಷ ವಾರಕ್ಕೆ 150 ನಿಮಿಷಗಳಷ್ಟು ಪ್ರತಿಯೊಬ್ಬ ಮನುಷ್ಯನು ನಡೆಯಬೇಕು ಎಂದು ತಿಳಿಸಿದ್ದಾರೆ.

ಈ ನಿಯಮವು ನಿಮ್ಮಲ್ಲಿರುವ ರಕ್ತದೊತ್ತಡ, ಕೊಲೆಸ್ಟ್ರಾಲ್, ಮತ್ತು ಒತ್ತಡವನ್ನು ಕಡಿಮೆ ಮಾಡಿ, ರಕ್ತ ಸಂಚಾರವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ದಿನಕ್ಕೆ 7 ಸಾವಿರದಿಂದ 10 ಸಾವಿರ ಹೆಜ್ಜೆಗಳನ್ನು ಇಡುವವರಲ್ಲಿ ಹೃದಯ ಸಂಬಂಧ ಕಾಯಿಲೆಗಳ ಅಪಾಯವು ಶೇ. 30-40ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಈ ನಡಿಗೆ ಪ್ರಾರಂಭಿಸುವುದು ಹೇಗೆ?

ಸರಿಯಾದ ವೇಗ

ಪ್ರತಿಯೊಬ್ಬ ಮನುಷ್ಯನು ಕೂಡಾ ಈ ರೀತಿಯಾಗಿ ವೇಗವನ್ನು ಹೊಂದುವುದರಿಂದ ಗುರಿ ತಲುಪಲು ಸಹಾಯವಾಗುತ್ತದೆ. ಕನಿಷ್ಟ ಗಂಟೆಗೆ 4 ರಿಂದ 5 ಕಿಮೀ ವೇಗದಲ್ಲಿ ನಡೆಯಿರಿ. ಇದು ನಿಮ್ಮ ಹೃದಯ ಬಡಿತವನ್ನು ಸಾಧಾರಣವಾಗಿ ಹೆಚ್ಚಿಸುತ್ತದೆ.

ವಿಭಜನೆ

ನೀವು ನಡೆಯಲು ಪ್ರಯತ್ನಿಸಿದಾಗ ಒಂದೇ ಬಾರಿಗೆ 30 ನಿಮಿಷ ನಡೆಯಲು ಆಗದಿದ್ದರೆ, ನೀವು ಅದನ್ನು 15 ನಿಮಿಷಗಳ 2 ಸೆಷನ್ಸ್​ಗಳಾಗಿ ಭಾಗ ಮಾಡಿಕೊಳ್ಳಿ. ಈ ವೇಳೆಯಲ್ಲಿ 15 ನಿಮಿಷಗಳಿಗೆ 2 ಕಿಮೀ ದೂರ ನಡೆಯುವಷ್ಟು ಸಾಮರ್ಥ್ಯವನ್ನು ಪಡೆದುಕೊಳ್ಳಿ. ಇದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಸರಿಯಾದ ಪಾದರಕ್ಷೆಗಳು

ನಡಿಗೆಯ ಸಮಯದಲ್ಲಿ ಶೂಗಳ ರಕ್ಷಣೆಯು ಆರೋಗ್ಯಕರ ಮತ್ತು ಸುರಕ್ಷಿತ ಅನುಭವಕ್ಕೆ ಮುಖ್ಯವಾಗಿದೆ. ಸರಿಯಾದ ಶೂಗಳು ಕಾಲಿನ ಗಾಯಗಳನ್ನು ತಡೆಯುತ್ತವೆ ಮತ್ತು ಹೃದಯ ಆರೋಗ್ಯವನ್ನು ಬೆಂಬಲಿಸುತ್ತವೆ. ಈ ಕೆಳಗಿನ ಸಲಹೆಗಳು ಶೂಗಳ ರಕ್ಷಣೆಗೆ ಸಹಾಯಕವಾಗಿವೆ

ಪರಿಸರ

ನೀವು ನಡೆಯಲು ಪ್ರಾರಂಭಿಸಿದಾಗ ಉತ್ತಮ ಸ್ಥಳವನ್ನು ಆಯ್ದುಕೊಳ್ಳಿ. ಅದರಲ್ಲಿ ಉದ್ಯಾವನ, ರಸ್ತೆ, ವಿಶಾಲವಾದ ಪ್ರದೇಶಗಳು ಇವು ನಡಿಗೆಗೆ ಸೂಕ್ತವಾದ ಜಾಗಗಳಾಗಿವೆ. ಈ ಪ್ರದೇಶಗಳು ಮನಸ್ಸಿನ ದುಗುಡನ್ನು ಕಡಿಮೆ ಮಾಡಿ ನಡೆಯಲು ಸಹಾಯ ಮಾಡುತ್ತದೆ.

ಹೀಗೆ ನಡೆಯುವುದರಿಂದ ಆಗುವ ಪ್ರಯೋಜನಗಳು

ದಿನಕ್ಕೆ 30 ನಿಮಿಷದಂತೆ ನಡೆಯಲು ಪ್ರಾರಂಭಿಸಿದರೆ, ಇದು ನಿಮ್ಮ ತೂಕ ನಿಯಂತ್ರಣ, ಮಧುಮೇಹ ತಡೆಗಟ್ಟುವಿಕೆ, ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ದೈನಂದಿನ ನಡಿಗೆಯಿಂದ ಶೇ. 50 ರಷ್ಟು ಹೃದಯಘಾತಗಳು ಕಡಿಮೆಯಾಗಿವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ