Lizard repellent plants 
ಮನೆ ಮದ್ದು

ನೈಸರ್ಗಿಕವಾಗಿ ಮನೆಯಿಂದ ಹಲ್ಲಿಗಳನ್ನು ಓಡಿಸಬೇಕಾ?; ಈ ಸಸ್ಯಗಳನ್ನು ಮನೆಗೆ ಇಂದೇ ತಂದಿಡಿ..Lizard Repellent Plants

ಪ್ರಮುಖ ಮುಖ್ಯಾಂಶಗಳು

  • ಹಲ್ಲಿ ಮತ್ತು ಜಿರಳೆಗಳಿಂದ ಫುಡ್​ ಪಾಯಿಸನ್ ಆಗುವ ಸಾಧ್ಯತೆ ಓಡಿಸೋದು ಹೇಗೆ?.
  • ಲ್ಯಾವೆಂಡರ್, ತುಳಸಿ, ಪುದೀನ ಸಸಿಗಳು ಮನೆಗೆ ತಂದಿಡಿ.
  • ಚೆಂಡು ಹೂ. ಮೊಟ್ಟೆ ಸಿಪ್ಪೆ ಹಾಗೂ ರೋಸ್ಮರಿ ಸಸಿಗಳು ಜಿರಳೆ ಓಡಿಸಲು ಸಹಕಾರಿ.
Lizard repellent plants: ಮನೆಯಲ್ಲಿ ಹಲ್ಲಿಗಳ ಉಪಟಳದಿಂದ ಬೇಸತ್ತಿದ್ದೀರಾ? ಗೋಡೆಗಳ ಮೇಲೆ ಹಲ್ಲಿಗಳು ಓಡಾಡುವುದನ್ನು ಕಂಡು ಅಸಹ್ಯನಿಸುತ್ತಿದೆಯೇ? ಹಲ್ಲಿಗಳನ್ನು ಓಡಿಸಲು ರಾಸಾಯನಿಕ ಕ್ರಿಮಿನಾಶಕಗಳನ್ನು ಬಳಸಿ ಸುಸ್ತಾಗಿದ್ದರೆ, ನಿಮಗೊಂದು ಅತ್ಯುತ್ತಮ ನೈಸರ್ಗಿಕ ಉಪಾಯ ಇಲ್ಲಿದೆ. ಯಾವುದೇ ಹಾನಿಕಾರಕ ರಾಸಾಯನಿಕಗಳಿಲ್ಲದೆ, ಮನೆಯ ಅಂದವನ್ನು ಹೆಚ್ಚಿಸುವುದರೊಂದಿಗೆ ಹಲ್ಲಿಗಳನ್ನು ಶಾಶ್ವತವಾಗಿ ದೂರವಿಡುವ ಕೆಲವು ಅದ್ಭುತ ಸಸ್ಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಒಂದನ್ನು ಬಿಟ್ಟರೇ ಸಾಕಷ್ಟು ಮರಿಗಳನ್ನು ತಂದಿರಿಸಿಕೊಳ್ಳುವ ಹಲ್ಲಿ ಮತ್ತು ಜಿರಳೆಗಳಿಂದ ಫುಡ್​ ಪಾಯಿಸನ್ ಆಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ವಯಸ್ಕರು ಮತ್ತು ಮಕ್ಕಳಿರುವ ಕುಟುಂಬಗಳು ಈ ಬಗ್ಗೆ ಹೆಚ್ಚೇ ಗಮನವಹಿಸಬೇಕಾಗುತ್ತದೆ.

ಹಲ್ಲಿಗಳ ಕಾಟದಿಂದ ಮುಕ್ತಿ ಹೇಗೆ

ಲ್ಯಾವೆಂಡರ್​ ಸಸಿ ನೇರಳೆ ಬಣ್ಣದ ಹೂಗಳು. ಇದರ ಸುವಾಸನೆಗೆ ಇದು ಹೆಸರುವಾಸಿ. ಹೀಗಾಗಿ ಹಲ್ಲಿಗಳು ಇದರ ವಾಸನೆಯನ್ನು ಇಷ್ಟಪಡುವುದಿಲ್ಲ. ಹೀಗಾಗಿ ಈ ಗಿಡವನ್ನು ನೀವು ನಿಮ್ಮ ಮನೆಯ ಆವರಣದಲ್ಲಿ ತಂದಿಡಬಹುದು. ಗಮನಿಸಿ ಇದಕ್ಕೆ ಆರರಿಂದ ಎಂಟು ಗಂಟೆ ಬೆಳಕಿನ ಅವಶ್ಯಕತೆ ಇರುತ್ತದೆ.

ಪುದೀನ ಅಥವಾ ತುಳಸಿ

ಪುದೀನ ಮತ್ತು ತುಳಸಿಯಲ್ಲಿರುವ ನೈಸರ್ಗಿಕ ಸುವಾಸನೆಯೂ ಹಲ್ಲಿಗೆ ದುರ್ವಾಸನೆಯಿದ್ದಂತೆ. ಇವುಗಳಿಂದ ಹಲ್ಲಿ ಮನೆಗೆ ಪ್ರವೇಶಿಸೋದಿಲ್ಲ. ಲೆಮನ್​​ ಗ್ರಾಸ್​​ ಸಹ ಸುವಾನೆ ಭರಿತವಾಗಿದ್ದು, ಇದನ್ನು ನೀವು ನಿಮ್ಮ ಮನೆಯ ಆವರಣದಲ್ಲಿ ಇಡುವುದರಿಂದ ಹಲ್ಲಿ ಪ್ರವೇಶವನ್ನು ತಡೆಗಟ್ಟಬಹುದಾಗಿದೆ.

ತುಳಸಿಯನ್ನು ಕಿಟಕಿ ಅಥವಾ ಮನೆಯ ಮುಖ್ತ ದ್ವಾರದ ಬಳಿ ಇಡುವುದರಿಂದ ಅದರ ಪರಿಮಳ ತಾಕಿ, ಅಲ್ಲಲ್ಲಿ ಬಚ್ಚಿಟ್ಟುಕೊಳ್ಳೋದರಿಂದ ಹಲ್ಲಿಗಳು ತಪ್ಪಿಸಿಕೊಂಡು ಜಾಗ ಖಾಲಿ ಮಾಡುತ್ತವೆ.

ಚೆಂಡು ಹೂವಿನ ಗಿಡ

ಹಳದಿ ಮತ್ತು ಕಿತ್ತಳೆ ಬಣ್ಣದ ಚೆಂಡು ಹೂ ಕೇವಲ ಮನೆಗೆ ಅಂದ ತರುವುದಷ್ಟೇ ಅಲ್ಲ, ಇದರಲ್ಲಿರುವ ತೀವ್ರವಾದ ವಾಸನೆ ಕೀಟಗಳನ್ನು ಹಾಗೂ ಹಲ್ಲಿಗಳನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಅವುಗಳಲ್ಲಿರುವ ಗಾಢ ಸುವಾಸನೆ ಅವು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.

ರೋಸ್ಮರಿ ಗಿಡ

ರೋಸ್ಮರಿ ಎಲೆಯಿಂದ ಹೊರ ಹೊಮ್ಮುವ ಸುವಾಸನೆಯು ಯಾವುದೇ ಕೀಟಗಳು, ಸೊಳ್ಳೆ ಹಾಗೂ ಹಲ್ಲಿಯನ್ನು ಮನೆಯೊಳಕ್ಕೆ ಸೇರಿಸುವಂತೆ ಮಾಡೋದಿಲ್ಲ. ಈ ಮೂಲಕ ಯಾವುದೇ ರಾಸಾಯನಿಕ ವಸ್ತು ಬಳಕೆ ಮಾಡದಂತೆ ಹಲ್ಲಿಗಳನ್ನು ದೂರವಿಡಬಹುದು, (ಏಜೆನ್ಸೀಸ್).