- ಆಯುರ್ವೇದದಲ್ಲಿ ತ್ರಿಫಲಾಗೆ ಮಹತ್ವದ ಸ್ಥಾನ
- ಜೀರ್ಣಕ್ರಿಯೆ, ಮಲಬದ್ಧತೆ ತ್ರಿಫಲಾ ಪರಿಹಾರ
- ತ್ರಿಫಲಾ ಎಂದರೆ ಹರಿತಕಿ, ವಿಭೀತಕಿ ಹಾಗೂ ಆಮ್ಲಾ
Triphala powder: ಹೊಟ್ಟೆ ಸರಿಯಾಗಿ ಕ್ಲೀನ್ ಆಗುತ್ತಿಲ್ಲ, ಜೀರ್ಣಕ್ರಿಯೆ ನಿಧಾನವಾಗಿದೆ, ಮಲಬದ್ಧತೆ ಕಾಡುತ್ತಿದೆ ಎಂದು ಹಲವರು ವಿವಿಧ ಮನೆಮದ್ದುಗಳ ಮೊರೆ ಹೋಗುತ್ತಾರೆ. ಇಂತಹ ಸಮಯದಲ್ಲಿ ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿರುವ ತ್ರಿಫಲಾ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಿದೆ.
ತ್ರಿಫಲಾ ಎಂದರೆ ಹರಿತಕಿ, ವಿಭೀತಕಿ ಹಾಗೂ ಆಮ್ಲಾ (ನೆಲ್ಲಿಕಾಯಿ) ಎಂಬ ಮೂರು ಹಣ್ಣುಗಳ ಒಣಗಿದ ಭಾಗಗಳಿಂದ ತಯಾರಿಸುವ ಪುಡಿ. ಆಯುರ್ವೇದ ಪದ್ಧತಿಯಲ್ಲಿ ಇದನ್ನು ಜೀರ್ಣಕ್ರಿಯೆ ಹಾಗೂ ಹೊಟ್ಟೆಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಬಳಸಲಾಗುತ್ತೆ. ವಿಶೇಷವಾಗಿ ಮಲಬದ್ಧತೆ ಸಮಸ್ಯೆಗಳಿಗೆ ತ್ರಿಫಲಾ ಉತ್ತಮ ಮದ್ದು. ಆಯುರ್ವೇದ ಪ್ರಕಾರ, ಇದು ಜೀರ್ಣಕ್ರಿಯೆಗೆ ನೆರವಾಗಿ, ಮಲವಿಸರ್ಜನೆ ಸುಲಭವಾಗುವಂತೆ ಮಾಡುತ್ತದೆ;.
ಆದರೆ, ತ್ರಿಫಲಾ ಪುಡಿ ರೋಗಕಕ್ಕೆ ಅಂತಿಮ ಔಷಧ ಎಂದು ಹೇಳಲಾಗುವುದಿಲ್ಲ. ತ್ರಿಫಲಾವನ್ನು ಎಷ್ಟು ಪ್ರಮಾಣದಲ್ಲಿ ಹಾಗೂ ಹೇಗೆ ಸೇವಿಸಬೇಕು ಎಂಬುದು ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತೆ. ಮುಖ್ಯವಾಗಿ, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಅಥವಾ ಗಂಭೀರ ಆರೋಗ್ಯ ಸಮಸ್ಯೆ ಇರುವವರು ತ್ರಿಫಲಾವನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
ಆರೋಗ್ಯಕರ ಆಹಾರ, ಸಾಕಷ್ಟು ನೀರು, ನಿಯಮಿತ ವ್ಯಾಯಾಮ ಹಾಗೂ ಉತ್ತಮ ಜೀವನಶೈಲಿಯ ಜೊತೆಗೆ ಯಾವುದೇ ಆಯುರ್ವೇದ ಔಷಧವನ್ನು ಜಾಗರೂಕತೆಯಿಂದ ಬಳಸುವುದು ಮುಖ್ಯ,(ಏಜೇನ್ಸೀಸ್).