- ಹಸಿ ಹಾಲಿನಲ್ಲಿದೆ ಮುಖ ಹೊಳೆಯುವಂತೆ ಮಾಡುವ ಗುಣಗಳು
- ಹಾಲಿನಲ್ಲಿರುವ ಕ್ಲೆರಿನ್ ಎಂಬ ಅಂಶವು ಮುಖದಲ್ಲಿರುವ ಸತ್ತ ಚರ್ಮ ತೆಗೆದು ಹಾಕುತ್ತದೆ
- ಕಲೆ, ಮೊಡವೆ ಹೋಗಲಾಡಿಸಲು ಹಸಿ ಹಾಲು ಮದ್ದು
Raw Milk Benefits: ಹಾಲು ದೇಹದ ಒಳಗಿನ ಜೀವಕೋಶಗಳ ಆರೋಗ್ಯವನ್ನು ಮಾತ್ರವಲ್ಲದೆ, ಚರ್ಮದ ಆರೋಗ್ಯವನ್ನು ಕಾಪಾಡುವ ಅಂಶಗಳನ್ನು ಹೊಂದಿದೆ. ಇದರಲ್ಲಿರುವ ಕ್ಲೆನರ್ ಮತ್ತು ಮಾಯಿಶ್ಚರೈಸರ್ ಅಂಶವು ತ್ವಚೆಯನ್ನು ತಾಜಾತನದಿಂದ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಹಾಲಿನಲ್ಲಿ ಸ್ನಾನ ಮಾಡುವ ಪದ್ಧತಿ ಇಂದು ನಿನ್ನೆಯದಲ್ಲ ದೇವಾನು ದೇವತೆಗಳು, ರಾಜ-ರಾಣಿಯರು ಇದರಲ್ಲೇ ಸ್ನಾನ ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ.
ಹಿಂದಿನ ಕಾಲದಲ್ಲಿ ಮುಖ ಸ್ವಚ್ಛಗೊಳಿಸಿಕೊಳ್ಳಲು ಹಾಲು, ಕಡಲೆ ಹಿಟ್ಟು ಬಳಕೆ ಮಾಡುತ್ತಿದ್ದರು. ಈಗಲೂ ಸಹ ಫೇಸ್ವಾಶ್ ಮತ್ತು ಸೋಪ್ ಕ್ಷೇತ್ರದಲ್ಲಿ ಹಾಲಿನ ಬಳಕೆ ಮಾಡಲಾಗುತ್ತಿದೆ. ಮುಖ ಒಣಗಿದಾಗ, ತುರಿಕೆ ಉಂಟಾದಾಗ ದುಬಾರಿ ಕ್ರೀಂ ಬಳಕೆ ಮಾಡುವ ಬದಲು, ನಿಮ್ಮ ಮನೆಯಲ್ಲೇ ಸಿಗುವ ಈ ಹಸಿ ಹಾಲನ್ನು ಬಳಕೆ ಮಾಡಿಕೊಳ್ಳಿ. ಇದು ಮುಖದ ತ್ವಚೆಗೆ ಹೇಗೆಲ್ಲ ಸಹಕಾರಿ ಎನ್ನುವುದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಸತ್ತ ಚರ್ಮ ಸ್ವಚ್ಛಗೊಳಿಸುತ್ತದೆ
ಹಸಿ ಹಾಲಿನಲ್ಲಿ ಕ್ಲೆನರ್ ಎನ್ನುವ ಅಂಶವಿದೆ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಐದು ನಿಮಿಷ ಮಸಾಜ್ ಮಾಡಿ. ನಂತರ ಸ್ವಚ್ಛಗೊಳಿಸಿಕೊಳ್ಳಿ ಇದರಿಂದ ನಿಮ್ಮ ಮುಖದಲ್ಲಿರುವ ಸತ್ತ ಕೋಶಗಳು ತೆಗೆದು, ತ್ವಚೆಯನ್ನು ಸುಧಾರಿಸುವಂತೆ ಮಾಡುತ್ತದೆ.
ದಿನಬಳಕೆಯಲ್ಲಿರಲಿ ಹಸಿ ಹಾಲು
ದಿನವೂ ನಿಮ್ಮ ಮುಖ ತೊಳೆಯುವಾಗ ಹಸಿ ಹಾಲನ್ನು ಹಚ್ಚಿ, ಸ್ವಚ್ಛಗೊಳಿಸಿಕೊಳ್ಳುವುದರಿಂದ ಇದು ತಾಜಾ ತ್ವಚೆಯನ್ನು ನೀಡುತ್ತದೆ. ಜೊತೆಗೆ, ಹಸಿ ಹಾಲು ಬಳಕೆ ಮಾಡುವುದರಿಂದ ಇತ್ತೀಚಿನ ದಿನದಲ್ಲಿ ಕಾಡುತ್ತಿರುವ ಕೆಮಿಕಲ್ನಿಂದ ಚರ್ಮ ಹಾಳಾಗುತ್ತದೆ ಎನ್ನುವ ಚಿಂತೆಯೇ ಇರೋದಿಲ್ಲ. ಹಾಲು ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮದಲ್ಲಿರುವ ಸುಕ್ಕು ಕಡಿಮೆಯಾಗುವಂತೆ ಮಾಡುತ್ತದೆ.
ಕಲೆ, ಮೊಡವೆ ಇದ್ದವರಿಗೆ ಅದ್ಭುತ ಲಾಭ
ಮುಖದ ಚರ್ಮದಲ್ಲಿ ಕಪ್ಪು ಕಲೆ, ಮೊಡವೆ ಇದ್ದವರು, ನಿತ್ಯವೂ ಹಾಲನ್ನು ಹಚ್ಚಿ ಮುಖ ಸ್ವಚ್ಛ ಮಾಡಿಕೊಳ್ಳುವುದರಿಂದ ಕಲೆಗಳು ಮಾಯಾವಾಗೊ ಹೊಸ ಚರ್ಮ ಹುಟ್ಟಿಕೊಳ್ಳುತ್ತದೆ. ಟ್ಯಾನಿಂಗ್ಗೆ ಹಸಿ ಹಾಲು ಸಹಕಾರಿ. ಇನ್ಮುಂದೆ ಹಸಿ ಹಾಲನ್ನು ಮುಖಕ್ಕೆ ಹಚ್ಚಿ 10-20 ನಿಮಿಷ ಬಿಟ್ಟರೆ ಅದು ನಿಮ್ಮ ಚರ್ಮದ ಮೇಲಿನ ಕಲೆ ತೊಡೆದು ಹಾಕುರತ್ತದೆ.. ಈ ಅಭ್ಯಾಸ ದಿನವೂ ಇರಲಿ ಎನ್ನುತ್ತಾರೆ ಚರ್ಮ ವೈದ್ಯರು.
ಒಣ ಚರ್ಮಕ್ಕೆ ಮದ್ದು
ಒಣ ಹಾಗೂ ಮಂದ ಚರ್ಮ ಇರುವವರು ದಿನವೂ ಹಸಿ ಹಾಲನ್ನು ಮುಖಕ್ಕೆ ಹಚ್ಚುವುದನ್ನು ರೂಢಿಸಿಕೊಳ್ಳಬೇಕು ಇದು ಒಣ ಚರ್ಮವನ್ನು ತೇವಗೊಳಿಸುತ್ತದೆ. ಒಣ ಚರ್ಮವನ್ನು ಮೃದುವಾಗಿಸುತ್ತದೆ ಎನ್ನುತ್ತಾರೆ ವೈದ್ಯರು.
ಕಡಲೆಹಿಟ್ಟು ಮತ್ತು ಹಾಲಿನ ಫೇಸ್ ಪ್ಯಾಕ್
ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬ್‌ಗಳ ಬದಲು, ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಪ್ಯಾಕ್ ಬಳಸಿ. ಎರಡು ಚಮಚ ಕಡಲೆಹಿಟ್ಟು, ಒಂದು ಚಿಟಿಕೆ ಅರಿಶಿನ ಮತ್ತು ಹಸಿ ಹಾಲನ್ನು ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಹಾಲು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡಿದರೆ, ಕಡಲೆಹಿಟ್ಟು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ, (ಏಜೆನ್ಸೀಸ್).
ಈ ಮೇಲಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕ ಮಾಹಿತಿಯನ್ನು ಅನುಸರಿಸಿ ಬರೆಯಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.