Summer Skin Care Tips:ಬೇಸಿಗೆ ಕಾಲದಲ್ಲಿ ಅತಿಯಾದ ಬಿಸಿಲಿನ ತಾಪಮಾನದಿಂದ ಚರ್ಮಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆ ಕಾಡೋದು ಸಾಮಾನ್ಯ. ಅಧಿಕ ತಾಪಮಾನಕ್ಕೆ ದೇಹವನ್ನು ಒಡ್ಡಿಕೊಂಡಾಗ ಚರ್ಮ ತನ್ನ ಸಂವೇದನೆಯನ್ನು ಕಳೆದುಕೊಳ್ಳುತ್ತವೆ. ಹೀಗಾಗಿಯೇ ಚಳಿಗಾಲದಲ್ಲಿಯೇ, ಹೆಚ್ಚೆಚ್ಚು ಎಳ್ಳು, ಕೊಬ್ಬರಿಯಂತಹ ಎಣ್ಣೆ ಅಂಶವಿರುವ ಪದಾರ್ಥ ಸೇವನೆ ಮಾಡಬೇಕು. ಅದು ಬೇಸಿಗೆ ಕಾಲದಲ್ಲಿ ಚರ್ಮದ ಆರೋಗ್ಯ ಕಾಪಾಡುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಕೆಲವರು ಇದನ್ನು ನಿರ್ಲಕ್ಷ್ಯಿಸುತ್ತಾರೆ.
ಬೇಸಿಗೆಯಲ್ಲಿ ಉಷ್ಣಾಂಶ ಮತ್ತು ಆರ್ದತೆಯಿಂದಾಗಿ ತುರಿಕೆ, ಚರ್ಮ ಕೆಂಪಾಗುವುದಂತಹ ಫಂಗಲ್ ಸೋಂಕು ಅತಿ ಬೇಗನೆ ಹರಡುತ್ತದೆ. ಬೆವರಿನಿಂದ ಕೂಡಿದ ಒದ್ದೆಯಾದ ಚರ್ಮ ಫಂಗಲ್ ಸೋಂಕಿನಂತಹ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡಿಕೊಡುತ್ತದೆ. ಇಂತಹ ಚರ್ಮ ಸೋಂಕಿಗೆ ಮುಕ್ತಿ ಕೊಟ್ಟುಕೊಳ್ಳೋದು ಹೇಗೆ ಎನ್ನುವುದನ್ನು ತಿಳಿಯೋಣ.
ಫಂಗಸ್ ಸೋಂಕು ಕಾಡೋದು ಹೇಗೆ, ಚರ್ಮ ಕಾಪಾಡಿಕೊಳ್ಳೋದು ಯಾವ ರೀತಿ?
ಫಂಗಸ್ಗಳು ಹೆಚ್ಚಾಗಿ ಮೈ ಬೆವರುವ ಕಾರಣಕ್ಕೆ ಕಾಣಿಸಿಕೊಳ್ಳುತ್ತವೆ. ಟೈಟ್ ಬಟ್ಟೆಗಳನ್ನು ಧರಿಸುವುದು. ದೇಹದ ಶುದ್ಧತೆ ಕಾಪಾಡಿಕೊಳ್ಳದೇ ಇರುವುದು ಹಾಗೂ ಮಧುಮೇಹಿಗಳಿಗೆ ಈ ಸೋಂಕು ಕಾಡುತ್ತದೆ ಎಂದು ಚರ್ಮ ರೋಗ ತಜ್ಞರು ಹೇಳುತ್ತಾರೆ.
ಚರ್ಮ ಕಾಪಾಡಿಕೊಳ್ಳೋದು ಹೇಗೆ?
ಬೇಸಿಗೆ ಆರಂಭದ ದಿನಗಳಲ್ಲಿಯೇ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚೆಚ್ಚು ನೀರು ಕುಡಿಯಬೇಕು. ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ ದೇಹ ಹೆಚ್ಚು ಬೆವರುವ ಭಾಗದಲ್ಲಿ ಒಣಗಿರುವಂತೆ ನೋಡಿಕೊಳ್ಳೋದು. ನಿತ್ಯವೂ ನೈಲನ್ ಬಟ್ಟೆ ಬಿಟ್ಟು ಗಾಳಿಯಾಡುವಂತಹ ಸಡಿಲವಾದ ಹತ್ತಿ ಬಟ್ಟೆ ಧರಿಸಬೇಕು. ಸಿಂಥೆಟಿಕ್ ಬಟ್ಟೆಯು ತೇವಾಂಶವನ್ನು ಹಿಡಿದಿಟ್ಟುಕೊಂಡು ಸೋಂಕು ಹೆಚ್ಚಾಗುವಂತೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು.
ದಿನಕ್ಕೆರಡು ಬಾರಿ ಸ್ನಾನ ಮಾಡಿ
ಸಾರ್ವಜನಿಕ ಮತ್ತು ಸ್ವಿಮ್ಮಿಂಗ್ ಪೂಲ್ಗಳ ಬಳಿ ಓಡಾಡುವಾಗ, ಜಿಮ್ಗೆ ತೆರಳಿದಾಗ ಪಾದರಕ್ಷೆ ಬಳಕೆ ಮಾಡಬೇಕು. ಪ್ರತಿದಿನ ಸಾಕ್ಸ್ ಬಳಸುವುದು ಒಳಿತು. ನಿಮ್ಮ ಅಕ್ಕ-ತಂಗಿ ಅಥವಾ ತಮ್ಮ-ಅಣ್ಣನ ಬಟ್ಟೆಗಳನ್ನು, ಬಾಚಣಿಗೆ, ಟವಲ್ ಬಳಕೆ ಮಾಡೋದುನ್ನು ನಿಲ್ಲಿಸಿ. ಏಕೆಂದರೆ ಇದು ಸೋಂಕಿಗೆ ದಾರಿ ಮಾಡಿಕೊಡುತ್ತದೆ. ಸ್ನಾನ ಮಾಡಿದ ನಂತರ, ವ್ಯಾಯಾಮ ಮಾಡಿದ ನಂತರ ನಿಮ್ಮ ಚರ್ಮವನ್ನು ಒಣಗಿಸಿ ನಿಮಗೆ ಅಗತ್ಯವಾಗಿ ಬೇಕಿದ್ದರೆ ಆಂಟಿ ಫಂಗಲ್ ಪೌಡರ್ ಬಳಕೆ ಮಾಡಬಹುದು ಎಂದು ಚರ್ಮ ವೈದ್ಯರು ಸಲಹೆ ನೀಡಿದ್ದಾರೆ.
ಭಾರತದಲ್ಲಿ ಕಾಣಿಸಿಕೊಳ್ಳುವ ಚರ್ಮ ರೋಗ
ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಪ್ರತಿ ಭಾರತೀಯರು ಅನುಭವಿಸುವ ಚರ್ಮ ರೋಗ ಎಂದರೆ ಅದು ರಿಂಗ್ ವರ್ಮ್. ಇದು ದೇಹದ ಕೆಲವು ಭಾಗದಲ್ಲಿ ಕೆಂಪು ಆಕಾರದಲ್ಲಿ ಸಣ್ಣ ಸಣ್ಣ ಗುಳ್ಳೆಗಳಂತೆ ಕಾಣಿಸಿಕೊಳ್ಳುತ್ತವೆ. ಇದು ವೃತ್ತಾಕಾರದಲ್ಲಿದ್ದು, ಆಗಾಗ ತುರಿಕೆಯನ್ನುಂಟು ಮಾಡುತ್ತದೆ. ಇದು ಬೇರೆಯವರೊಂದಿಗಿನ ಸಂಪರ್ಕದ ಮೂಲಕವೂ ಹರಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಅಥ್ಲೀಟ್ಸ್ ಫೂಟ್, ಜೋಕ್ ಇಚ್ ಬಗ್ಗೆ ಗಮನ ಹರಿಸಿ
ದೀರ್ಘ ಕಾಲ ಶೂ ಧರಿಸುವವರಲ್ಲಿ ಈ ಸೋಂಕು ಕಾಡುತ್ತದೆ. ತುರಿಕೆ ಕಾಲ್ಬೆರಳಿನ ಸಿಪ್ಪೆ ಸುಲಿಯುವುದು ಕಾಣಿಸಿಕೊಳ್ಳುತ್ತದೆ. ಇನ್ನು ತೊಡೆ ಸಂಧಿಯ ಸೋಂಕು ಇದು ಹೆಚ್ಚಾಗಿ ಪುರಷರಲ್ಲಿ ಕಾಣಿಸಿಕೊಳ್ಳುತ್ತದೆ. ಬಿಗಿಯಾದ ಒಳುಡುಪು ಧರಿಸುವುದರಿಂದ ತೊಡೆ ಸಂಧಿಯಲ್ಲಿ ಬೆವರು ಹೆಚ್ಚಾಗಿ ಕೆಂಪು ದದ್ದು ಹಾಗೂ ತುರಿಕೆ ಉಂಟಾಗುತ್ತದೆ.
ಯೀಸ್ಟ್ ಸೋಂಕು, ಉಗುರು ಸುತ್ತು ಬಗ್ಗೆ ಎಚ್ಚರ
ದೇಹದ ತೇವಾಂಶ ಭಾಗಗಳಾದ ಬಾಯಿ, ಚರ್ಮದಲ್ಲಿ ಅತಿಯಾದ ಫಂಗಸ್ ಬೆಳವಣಿಗೆಯಾಗಿ ಕಿರಿಕಿರಿಯಾಗುವಂತೆ ಮಾಡುತ್ತದೆ. ಇನ್ನು ಉಗುರು ಸುತ್ತಿನಿಂದ ಉಗುರು ದಪ್ಪಗಾಗುವಂತೆ ಮಾಡುತ್ತದೆ.
ಟಿನಿಯಾ ವರ್ಸಿಕಲ್, ಇಂಟರ್ಟಿಗೋ ಎಂದರೇನು?
ಹೆಚ್ಚು ಬೆವರಿವಿಕೆಯಿಂದ ಎದೆ ಬೆನ್ನು ಅಥವಾ ತೋಳುಗಳ ಮೇಲೆ ಬಿಳಿ ಅಥವಾ ಕಪ್ಪು ಮಚ್ಚೆ ಕಾಣಿಸಿಕೊಳ್ಳುವುದರಿಂದ ಟಿನಿಯಾ ವರ್ಸಿಕಲ್ ಕಾಣಿಸಿಕೊಳ್ಳುತ್ತದೆ. ಇನ್ನು ಬೆವರಿನಿಂದ ಕುತ್ತಿಗೆ, ಕೆಳಹೊಟ್ಟೆ ಸ್ತನಗಳ ಕೆಳಗೆ ಉರಿಯೂತ ಸೋಂಕು ಕಾಣಿಸಿಕೊಳ್ಳುತ್ತದೆ ಇದನ್ನು ಇಂಟರ್ಟಿಗೋ ಎಂದು ಕರೆಯಲಾಗುತ್ತದೆ. (ಏಜೆನ್ಸೀಸ್).