ಸುಸ್ತು, ಮೂಡ್ ಸ್ವಿಂಗ್ಸ್ ಕಾಡ್ತಿದ್ಯಾ? ಈ ವಿಟಮಿನ್ ಕಡಿಮೆಯಾಗಿರ್ಬೇಕು ಒಮ್ಮೆ ಚೆಕ್ ಮಾಡ್ಕೊಳ್ಳಿ...Vitamin Deficiency
- ವಿಟಮಿನ್ ಡಿ ನಿಮ್ಮ ಮೂಳೆಗೆ ಮಾತ್ರವಲ್ಲ ಮನಸ್ಸಿಗೂ ಅತ್ಯಗತ್ಯ
- ದಿನಕ್ಕಿ 15 ನಿಮಿಷವಾದರೂ ಸೂರ್ಯನಿಗೆ ಮೈಯೊಡ್ಡಬೇಕು
- ನಿಮ್ಮ ಮೈ-ಕೈ ನೋವು, ಸ್ನಾಯು ದೌರ್ಬಲ್ಯಕ್ಕೆ ವಿಟಮಿನ್ ಡಿ ಕೊರತೆ ಕಾರಣ
Vitamin D Deficiency: ಆಧುನಿಕ ಜೀವನ ಶೈಲಿಯಲ್ಲಿ ನಮ್ಮನ್ನು ನಾವು ಪೋಷಿಸಿಕೊಳ್ಳೋದನ್ನೇ ಮರೆತು ಬಿಡುತ್ತೇವೆ. ಕಂಪನಿಯ ಶಿಫ್ಟ್ ಸಮಯಕ್ಕೆ ಮುಂಜಾನೆ ತೆರಳುವ ಹಲವರು ವಾಪಸ್ಸಾಗೋದು ಸೂರ್ಯಸ್ತನಾದ ಮೇಲೆಯೇ. ನಮ್ಮ ಆರೋಗ್ಯದಲ್ಲಿ ವಿಟಮಿನ್ ಡಿ ಪಾತ್ರ ಬಹಳ ದೊಡ್ಡದು. ಇತ್ತೀಚಿನ ದಿನಗಳಲ್ಲಿ ಶೇ. 70ಕ್ಕೂ ಹೆಚ್ಚು ಜನರಲ್ಲಿ ಈ ವಿಟಮಿನ್ ಕೊರತೆ ಕಂಡುಬರುತ್ತಿದೆ.
ಸತತ ಆಯಾಸ, ಸ್ನಾಯುಗಳ ನೋವು ಮತ್ತು ಖಿನ್ನತೆಯಂತಹ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ಇದೆಲ್ಲವೂ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾದಾಗ ಕಾಣಿಸಿಕೊಳ್ಳುವ ಗುಣಲಕ್ಷಣಗಳು ಎಂದು ವೈದ್ಯರು ಹೇಳುತ್ತಾರೆ.
ಸನ್ಶೈನ್ ವಿಟಮಿನ್ ಡಿ ಇದು ಮೂಳೆಯ ಆರೋಗ್ಯಕ್ಕೆ ಮಾತ್ರವಲ್ಲ ಮನಸ್ಸಿನ ಸ್ಥಿಮಿತತೆಗೂ ಪ್ರಮುಖ ಕಾರಣ. ಇದರಲ್ಲಿ ಕೊರತೆ ಉಂಟಾದರೆ, ದೇಹದಲ್ಲಿ ಅತಿಯಾಗಿ ಇರುವ ಕ್ಯಾಲ್ಸಿಯಂ ಹೀರಿ ಕೊಳ್ಳೋದನ್ನ ಕಡಿಮೆ ಮಾಡುತ್ತದೆ. ಹೀಗಾಗಿ ಮೂಳೆಗಳು ದುರ್ಬಲಗೊಳ್ಳುತ್ತಾ ಹೋಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಬೆಂಬಲಿಸುವ ವಿಟಮಿನ್ ಡಿ ಸ್ನಾಯುಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವಿಟಮಿನ್ ಡಿಯ ಕೊರತೆ ಗುಣಲಕ್ಷಣಗಳೇನು?
ವಿಟಮಿನ್ ಡಿ ಕೊರತೆ ಉಂಟಾದ್ರೆ ಎಷ್ಟೇ ನಿದ್ದೆ ಮಾಡಿದ್ರು, ಇನ್ನು ಮಲಗಬೇಕು. ಎಲ್ಲದಕ್ಕೂ ವಿರಾಮ ಬೇಕು, ದೀರ್ಘ ಕಾಲದ, ಸ್ನಾಯು ದೌರ್ಬಲ್ಯ, ಕೂದಲು ಉದುರುವುದು, ವಯಸ್ಸಾದವರಲ್ಲಿ ಜೀರ್ಣಕ್ರಿಯೆಗೆ ಸಮಸ್ಯೆ, ಮೂಳೆ ನೋವು ಕಾಣಿಸಿಕೊಳ್ಳಲು ಶುರುವಾಗುತ್ತದೆ. ವಿಟಮಿನ್ ಡಿ ಕೊರತೆ ಇದ್ದರೆ ದೇಹದ ಹೊರ ಭಾಗದಲ್ಲಾಗಿರುವ ಗಾಯವೂ ನಿಧಾನಕ್ಕೆ ಗುಣವಾಗುತ್ತದೆ. ಬೆನ್ನು ನೋವು , ಜ್ವರ, ನೆಗಡಿ, ಕೆಮ್ಮು ಎಂದು ಆರೋಗ್ಯದಲ್ಲಿ ಏರುಪೇರುಂಟಾಗಬಹುದು.
ವಿಟಮಿನ್ ಡಿ ವೃದ್ಧಿಗೆ ಏನೆಲ್ಲ ಮಾಡ್ಬೇಕು
ದೇಹದಲ್ಲಿ ವಿಟಮಿಮ್ ಡಿ ಕೊರತೆಯ ಗುಣಲಕ್ಷಣ ಕಂಡುಬಂದರೆ, ತಡಮಾಡದೆ ನೀವು ಹತ್ತರಿಂದ ಇಪ್ಪತ್ತು ನಿಮಿಷ ಮಧ್ಯಾಹ್ನಕ್ಕೂ ಮುನ್ನ ಸೂರ್ಯನಿಗೆ ನಿಮ್ಮ ದೇಹವನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಆಫೀಸ್ ಮತ್ತು ಮನೆಗೆ ಓಡಾಡುವ ಮಧ್ಯೆಯೂ ಈ ವಾಡಿಕೆಯನ್ನು ರೂಢಿಸಿಕೊಳ್ಳಿ ಎನ್ನುತ್ತಾರೆ ತಜ್ಱರು.
ಯಾವೆಲ್ಲ ಆಹಾರ ತಿನ್ಬೇಕು?
ಮೊಟ್ಟೆಯಲ್ಲಿ ಹಳದಿ ಬಣ್ಣದ ಲೋಳೆ, ಮೀನು, ಹಾಲು, ಅಣಬೆ ತಿನ್ನಬೇಕು. ಬಲವರ್ಧಿತ ಆಹಾರವನ್ನು ಸೇವಿಸುವುದು ಕಡಿಮೆ ಮಾಡಬೇಕು ಎಂದು ತಜ್ಱರು ಹೇಳುತ್ತಾರೆ. ನಿಮಗೆ ವಿಟಮಿನ್ ಡಿ ಕೊರತೆಯಾಗುತ್ತಿದೆ ಎನ್ನುವ ಗುಣಲಕ್ಷಣಗಳು ಕಂಡುಬಂದರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ವೈದ್ಯರ ಬಳಿ ಚಿಕಿತ್ಸೆಗೆ ತೆರಳಿ ಎಂದು ಆರೋಗ್ಯ ತಜ್ಱರು ಸಲಹೆ ಕೊಟ್ಟಿದ್ದಾರೆ.
ಒಟ್ಟಾರೆಯಾಗಿ ವಿಟಮಿನ್ ಡಿ ಸುಧಾರಣೆಯ ಜೊತೆಗೆ ವ್ಯಾಯಾಮ ಮಾಡುವುದು, ತೂಕ ಕಾಪಾಡಿಕೊಳ್ಳುವುದು ಸಹ ವಿಟಮಿನ್ ಡಿ ವೃದ್ಧಿಗೆ ಸಹಾಕಾರಿಯಾದ ಮಾರ್ಗ ಎನ್ನುತ್ತಾರೆ ತಜ್ಱರು, (ಏಜೆನ್ಸೀಸ್).