ಸಾಂದರ್ಭಿಕ ಚಿತ್ರ  
ಆರೋಗ್ಯ

ನೀವು ಸೇವಿಸುವ ಎಲ್ಲಾ ಪ್ರೋಟೀನ್‌ಗಳು ಆರೋಗ್ಯಕರವಲ್ಲ... ಈ 5 ಆಹಾರಗಳ ಬಗ್ಗೆ ಎಚ್ಚರವಿರಲಿ! High Protein Foods

ಪ್ರಮುಖ ಮುಖ್ಯಾಂಶಗಳು

  • ಪ್ರೋಟೀನ್ ಅನ್ನು ಯಾವಾಗಲೂ ಫಿಟ್‌ನೆಸ್ ಹೀರೋ ಎಂದು ಕರೆಯಲಾಗುತ್ತದೆ
  • ಆಗಿರಲು ಮತ್ತು ಆರೋಗ್ಯಕರವಾಗಿರಲು ಹೆಚ್ಚು ಪ್ರೋಟೀನ್ ತಿನ್ನಲು ಹೇಳುತ್ತಾರೆ
  • ಪ್ರತಿದಿನ ತಿನ್ನುವ ಹೆಚ್ಚಿನ ಪ್ರೋಟೀನ್ ಕೂಡ ತುಂಬಾ ಡೇಂಜರ್​ ಅನ್ನೋದು ನೆನಪಿರಲಿ
High Protein Foods : ಯಾರಿಗೆ? ಯಾವಾಗ? ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಲಾಗದು. ಹೀಗಾಗಿ ಇಂದಿನ ಯುವಕರು ಸೇರಿದಂತೆ ಅನೇಕರು ಫಿಟ್‌ನೆಸ್‌ನತ್ತ ಗಮನ ಹರಿಸುತ್ತಿದ್ದಾರೆ. ಅದರಲ್ಲೂ ಪ್ರೋಟೀನ್​ ಸೇವನೆ ಬಗ್ಗೆ ಒಲವು ತೋರುತ್ತಿದ್ದಾರೆ. ತಾವು ತಿನ್ನುವ ಆಹಾರದಲ್ಲಿ ಪ್ರೋಟೀನ್ ಇದೆಯೇ? ಇಲ್ಲವೇ? ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಅಕ್ಷರಶಃ ಆರೋಗ್ಯದ ಕಾಳಜಿ ಎಲ್ಲರಲ್ಲೂ ಮೂಡುತ್ತಿದೆ.
ಅಂದಹಾಗೆ, ಪ್ರೋಟೀನ್ ಅನ್ನು ಯಾವಾಗಲೂ ಫಿಟ್‌ನೆಸ್ ಹೀರೋ ಎಂದು ಕರೆಯಲಾಗುತ್ತದೆ. ಅದು ಸ್ನಾಯುಗಳನ್ನು ನಿರ್ಮಿಸುವಲ್ಲಿ, ತೂಕ ಇಳಿಸುವಲ್ಲಿ, ಫಿಟ್ ಆಗಿರಲು ಮತ್ತು ಆರೋಗ್ಯಕರವಾಗಿರಲು ಹೆಚ್ಚು ಪ್ರೋಟೀನ್ ತಿನ್ನಲು ಹೇಳುತ್ತಾರೆ. ಆದರೆ, ಅತಿಯಾದರೆ ಅಮೃತವು ವಿಷ ಅನ್ನೋದನ್ನು ನೀವು ಮರೆಯಬಾರದು. ಏಕೆಂದರೆ, ನೀವು ಪ್ರತಿದಿನ ತಿನ್ನುವ ಹೆಚ್ಚಿನ ಪ್ರೋಟೀನ್ ಆಹಾರ ಕೂಡ ತುಂಬಾ ಡೇಂಜರ್​ ಅನ್ನೋದು ನಿಮಗೆ ನೆನಪಿರಲಿ.
ಫಿಟ್‌ನೆಸ್ ತರಬೇತುದಾರ ಸೀನ್ ಫ್ಯಾನಿಂಗ್ ಎಂಬುವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಅವರ ಪ್ರಕಾರ ಮೊಸರು, ಮೊಟ್ಟೆಗಳು, ಪೀನಟ್​ ಬಟರ್​, ಡ್ರೈ ಫ್ರೂಟ್ಸ್​ ಮತ್ತು ಪ್ರೋಟೀನ್ ಬಾರ್‌ಗಳಂತಹ ಕೆಲವು ಸಾಮಾನ್ಯ ಆಹಾರಗಳು ಆರೋಗ್ಯಕರವೆಂದು ತೋರಿದರೂ ಅವು ಯಾವಾಗಲೂ ಪ್ರಯೋಜನಕಾರಿಯಲ್ಲ ಎಂದು ಹೇಳಿದ್ದಾರೆ.
ನಾವು ಸೇವಿಸುವ ಕೆಲವು ಆಹಾರಗಳಲ್ಲಿ ಪ್ರೋಟೀನ್ ಹೆಚ್ಚಿರುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ, ಅವುಗಳಲ್ಲಿ ಬಹಳ ಕಡಿಮೆ ಪ್ರೋಟೀನ್ ಇರುತ್ತದೆ. ಅಷ್ಟೇ ಅಲ್ಲ, ಅವುಗಳಲ್ಲಿ ಕೊಬ್ಬು, ಸಕ್ಕರೆ ಅಥವಾ ಕ್ಯಾಲೊರಿಗಳಿವೆ. ಅವು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತವೆ ಎಂದು ಸೀನ್​ ಅವರು ಎಚ್ಚರಿಸಿದ್ದಾರೆ. ಹಾಗಾದರೆ, ಸೀನ್​ ಪ್ರಕಾರ ಯಾವ ಆಹಾರಗಳ ಬಗ್ಗೆ ಎಚ್ಚರದಿಂದ ಇರಬೇಕೆಂಬುದನ್ನು ನಾವೀಗ ತಿಳಿಯೋಣ.

ಗ್ರೀಕ್ ಮೊಸರು

ಜನರು ಗ್ರೀಕ್ ಮೊಸರನ್ನು ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವೆಂದು ಪರಿಗಣಿಸುತ್ತಾರೆ. ಆದರೆ, ಸೀನ್ ಪ್ರಕಾರ, ಪೂರ್ಣ ಕೊಬ್ಬಿನ ಮೊಸರು ಜನರು ಯೋಚಿಸುವಷ್ಟು ಪ್ರಯೋಜನಕಾರಿಯಲ್ಲ. 100 ಗ್ರಾಂ ಪೂರ್ಣ ಕೊಬ್ಬಿನ ಗ್ರೀಕ್ ಮೊಸರಿನಲ್ಲಿ ಕೇವಲ 10 ಗ್ರಾಂ ಪ್ರೋಟೀನ್ ಇರುತ್ತದೆ. ಆದರೆ, ಕಡಿಮೆ ಕೊಬ್ಬಿನ ಮೊಸರು ಸುಮಾರು 13 ಗ್ರಾಂ ಪ್ರೋಟೀನ್ ಹೊಂದಿರುತ್ತದೆ ಎಂದು ವಿವರಿಸಿದ್ದಾರೆ. ನಿಮ್ಮ ಆಹಾರದಲ್ಲಿ ಪ್ರೋಟೀನ್ ಅನ್ನು ಹೆಚ್ಚಿಸಲು ನೀವು ಬಯಸಿದರೆ, ಕಡಿಮೆ ಕೊಬ್ಬಿನ ಗ್ರೀಕ್ ಮೊಸರನ್ನು ಸ್ವಲ್ಪ ಪ್ರೋಟೀನ್ ಪುಡಿಯೊಂದಿಗೆ ಸೇವಿಸಿ. ಇದು ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿನ ಪ್ರೋಟೀನ್ ಅನ್ನು ಒದಗಿಸುತ್ತದೆ ಎಂದು ಸೀನ್​ ಸಲನೆ ನೀಡಿದ್ದಾರೆ.

ಪೀನಟ್​ ಬಟರ್​

ಪೀನಟ್​ ಬಟರ್​ ಪ್ರೋಟೀನ್‌ಗಳಲ್ಲಿ ಉತ್ತಮವಾಗಿದೆ ಎಂದು ಜನರು ಭಾವಿಸುತ್ತಾರೆ. ಆದರೆ, ವಾಸ್ತವವು ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ನೀವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಯಸಿದರೆ, ಪೀನಟ್​ ಬಟರ್​ನಿಂದ ದೂರವಿರಲು ಸೀನ್ ಸೂಚಿಸುತ್ತಾರೆ. ಏಕೆಂದರೆ, ಪೀನಟ್​ ಬಟರ್​ನಲ್ಲಿ ಕ್ಯಾಲೋರಿಗಳು ಹೆಚ್ಚು ಮತ್ತು ಪ್ರೋಟೀನ್ ಕಡಿಮೆ. ಇದು ಖಂಡಿತವಾಗಿಯೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಸೀನ್​ ಅವರು ಎಚ್ಚರಿಸುತ್ತಾರೆ.

ಮೊಟ್ಟೆಗಳು

ಮೊಟ್ಟೆಗಳನ್ನು "ಸೂಪರ್‌ಫುಡ್" ಎಂದು ಕರೆಯಲಾಗುತ್ತದೆ ಮತ್ತು ಅದು ನಿಜ ಕೂಡ ಹೌದು. ಆದರೆ, ಒಂದು ಮೊಟ್ಟೆಯಲ್ಲಿ ಕೇವಲ 6 ಗ್ರಾಂ ಪ್ರೋಟೀನ್ ಇರುತ್ತದೆ. ಬೆಳಗ್ಗೆ ಎರಡು ಮೊಟ್ಟೆಗಳನ್ನು ತಿನ್ನುವ ಮೂಲಕ ನೀವು ನಿಮ್ಮ ದೈನಂದಿನ ಪ್ರೋಟೀನ್ ಸೇವನೆಯನ್ನು ಪೂರೈಸಿದ್ದೀರಿ ಎಂದು ನೀವು ಭಾವಿಸಿದರೆ, ಅದು ತಪ್ಪು. ಕನಿಷ್ಠ ನಾಲ್ಕು ಅಥವಾ ಐದು ಮೊಟ್ಟೆಗಳನ್ನು ತಿನ್ನಬೇಕು. ಮೊಟ್ಟೆಗಳು ಒಳ್ಳೆಯದೇ ಆದರೆ, ಅವು ಸರಿಯಾದ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಪರಿಣಾಮ ಬೀರುತ್ತವೆ ಎಂದು ಸೀನ್​ ಹೇಳುತ್ತಾರೆ.

ಪ್ರೋಟೀನ್ ಬಾರ್‌ಗಳು ಮತ್ತು ಧಾನ್ಯಗಳು

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರೋಟೀನ್ ಬಾರ್‌ಗಳು, ಪ್ರೋಟೀನ್ ಧಾನ್ಯಗಳು ಅಥವಾ ಪ್ರೋಟೀನ್ ತಿಂಡಿಗಳು ಬಿಸಿ ಕೇಕ್‌ಗಳಂತೆ ಮಾರಾಟವಾಗುತ್ತಿವೆ. ಆದರೆ, ಇವುಗಳು ಹೆಚ್ಚಾಗಿ ಪ್ರೋಟೀನ್‌ಗಿಂತ ಹೆಚ್ಚು ಸಕ್ಕರೆ ಮತ್ತು ಸಂಸ್ಕರಿಸಿದ ಪದಾರ್ಥಗಳನ್ನು ಹೊಂದಿರುತ್ತವೆ. ಪ್ಯಾಕೇಜಿಂಗ್‌ ಪದಾರ್ಥಗಳಲ್ಲಿ ಪ್ರೋಟೀನ್ ಎಂದು ಹೇಳಿರುವುದರಿಂದ ಅದು ಆರೋಗ್ಯಕರ ಎಂದು ಅರ್ಥವಲ್ಲ. ಅನೇಕ ಪ್ರೋಟೀನ್ ಬಾರ್‌ಗಳು ಮತ್ತು ಶೇಕ್‌ಗಳು ಸಿಹಿಯಾಗಿರುತ್ತವೆ. ಏನನ್ನಾದರೂ ಖರೀದಿಸುವ ಮೊದಲು ಲೇಬಲ್ ಅನ್ನು ಓದಲು ಮರೆಯದಿರಿ.

ಡ್ರೈ ಫ್ರೂಟ್ಸ್​

ಬಾದಾಮಿ, ಗೋಡಂಬಿ ಮತ್ತು ವಾಲ್‌ನಟ್‌ಗಳಂತಹ ಬೀಜಗಳು ದೇಹಕ್ಕೆ ಒಳ್ಳೆಯದು ಆದರೆ, ಅವುಗಳನ್ನು ಪ್ರೋಟೀನ್ ಮೂಲಗಳೆಂದು ಪರಿಗಣಿಸುವುದು ತಪ್ಪು. ಒಣ ಹಣ್ಣುಗಳು ಪ್ರೋಟೀನ್‌ಗೆ ಕಳಪೆ ತಿಂಡಿ. ಏಕೆಂದರೆ, ಅವು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಅವುಗಳನ್ನು ಸಣ್ಣ ಪ್ರಮಾಣದಲ್ಲಿ ತಿನ್ನುವುದು ಉತ್ತಮ. ಒಂದು ವೇಳೆ ನೀವು ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ, ನೀವು ಬೇಗನೆ ತೂಕವನ್ನು ಹೆಚ್ಚಿಸಿಕೊಳ್ಳುತ್ತೀರಿ ಎಂದು ಎಚ್ಚರಿಸಿದ್ದಾರೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ಒದಗಿಸಲಾಗಿದೆ. ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ತಡೆಗಟ್ಟಲು ಆಯುರ್ವೇದ ಅಥವಾ ಅಲೋಪತಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್).