ಸಾಂದರ್ಭಿಕ ಚಿತ್ರ 
ಆರೋಗ್ಯ

ನಿಮ್ಮ ಮಗು ಹಗಲಲ್ಲಿ ಮಲಗಿ ರಾತ್ರಿ ಎಚ್ಚರವಿರುತ್ತದೆಯೇ? ನವಜಾತ ಶಿಶುಗಳು ಅತಿಯಾಗಿ ನಿದ್ರಿಸಲು ಅಸಲಿ ಕಾರಣವೇನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್​ | New Born Baby

ಪ್ರಮುಖ ಮುಖ್ಯಾಂಶಗಳು

  • ನಿಮ್ಮ ನವಜಾತ ಶಿಶು ಹಗಲಿನಲ್ಲಿ ಮಲಗಿ ರಾತ್ರಿ ಪೂರ್ತಿ ಎಚ್ಚರವಿರುತ್ತದೆಯೇ?
  • ಒಂದು ಮಗುವಿಗೆ ದಿನಕ್ಕೆ ಎಷ್ಟು ಗಂಟೆಗಳ ನಿದ್ರೆ ಅಗತ್ಯ?
  • ಅತಿಯಾದ ನಿದ್ರೆಯ ಹಿಂದಿನ ವೈಜ್ಞಾನಿಕ ಕಾರಣಗಳೇನು?
New Born Baby: ನವಜಾತ ಶಿಶುಗಳು (New Born Baby) ತಮ್ಮ ಹೆಚ್ಚಿನ ಸಮಯವನ್ನು ತಾಯಿಯ ಎದಹಾಲನ್ನು ಕುಡಿಯುವುದರಲ್ಲಿ ಮತ್ತು ನಿದ್ರೆ ಮಾಡುವುದರಲ್ಲಿ  ಕಳೆಯುವುದನ್ನು ನೀವು ಗಮನಿಸಿರಬಹುದು. ಆದರೆ, ಮೊದಲ ಬಾರಿಗೆ ಪಾಲಕರಾದ ದಂಪತಿಗಳಿಗೆ ಹೊಸ ತಮ್ಮ ಮಗು ಎಷ್ಟು ಗಂಟೆಗಳ ನಿದ್ರೆ ಮಾಡಬೇಕೆಂದು ತಿಳಿದಿರುವುದಿಲ್ಲ.
ಹುಟ್ಟಿದ ಮಕ್ಕಳಿಗೆ ನಿಗದಿತ ನಿದ್ರಾ ವೇಳಾಪಟ್ಟಿ(Sleep Cycle) ಇರದ ಕಾರಣ ಅವರು ಬೆಳಿಗ್ಗಿನ ವೇಳೆಯಲ್ಲಿ ನಿದ್ರಿಸಿ, ರಾತ್ರಿಯ ವೇಳೆ ಎಚ್ಚರವಿರುತ್ತಾರೆ. ತಮ್ಮ ಮಗುವಿನ ಈ ವರ್ತನೆ ನೋಡುವ ಕೆಲ ಪಾಲಕರು ಹೆದರುವುದು ಇದೆ. ಆದರೆ ತಜ್ಞರು ಈ ಕುರಿತು ಏನು ಹೇಳುತ್ತಾರೆ ಎಂದು ಇಲ್ಲಿ ತಿಳಿದುಕೊಳ್ಳೊಣ.

ಇದು ಸಾಮಾನ್ಯ ಪ್ರಕ್ರಿಯೆ

ಹುಟ್ಟಿದ ಮಕ್ಕಳು ಬೆಳಿಗ್ಗೆ ಮಲಗಿ, ರಾತ್ರಿ ಹೊತ್ತು ಎಚ್ಚರವಿರುವುದು ಇದು ಸಂಪೂರ್ಣವಾಗಿ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಇದರ ಬಗ್ಗೆ ಆತಂಕ ಪಡುವ ಯಾವುದೇ ಅಗತ್ಯವಿಲ್ಲ.
ಏಕೆಂದರೆ ನವಜಾತ ಶಿಶುವಿಗೆ ಹಗಲು ಮತ್ತು ರಾತ್ರಿಯ ನಡುವಿನ ವ್ಯತ್ಯಾಸ ಗೊತ್ತಿರದ ಕಾರಣ ಅವರಿಗೆ ನಿದ್ರೆ ಬಂದಾಗ ಮಲಗುವ ಮತ್ತು ಎಚ್ಚರವಾದಾಗ ಏಳುತ್ತವೆ. ಯಾವಾಗ ಅವುಗಳಿಗೆ ರಾತ್ರಿ ಮತ್ತು ಬೆಳಗಿನ ಬಗ್ಗೆ ತಿಳುವಳಿಕೆ ಬರುತ್ತದೆಯೋ ಅಂದು ಅವರು ನಿಗದಿತ ಸಮಯಕ್ಕೆ ಮಲಗುವ ಮತ್ತು ಎದ್ದೇಳುವುದನ್ನು ಮಾಡುತ್ತಾರೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ನವಜಾತ ಶಿಶುಗಳು ಎಷ್ಟು ನಿದ್ರೆ ಮಾಡಬೇಕು?

ತಜ್ಞರ ಪ್ರಕಾರ, ನವಜಾತ ಶಿಶುಗಳು ಸಾಮಾನ್ಯವಾಗಿ ಹಗಲಿನಲ್ಲಿ ಸುಮಾರು 8 ರಿಂದ 9 ಗಂಟೆ ಮತ್ತು ರಾತ್ರಿಯಲ್ಲಿ ಸುಮಾರು 8 ಗಂಟೆಗಳ ಕಾಲ ನಿದ್ರಿಸಬೇಕು. ಅಂದರೆ ಒಂದು ಆರೋಗ್ಯವಂತ ನವಜಾತ ಶಿಶುವು ದಿನಕ್ಕೆ ಒಟ್ಟು 14 ರಿಂದ 17 ಗಂಟೆಗಳ ಕಾಲ ನಿದ್ರಿಸಬೇಕು. 
ಆದರೆ ಈ ನಿದ್ರೆಯು ನಿರಂತರವಾಗಿರುವುದಿಲ್ಲ. ಬದಲಿಗೆ, ಹುಟ್ಟಿದ ಎರಡು ತಿಂಗಳುಗಳಲ್ಲಿ ಮಲಗಿದ ಮೂರು ಗಂಟೆಗಳ ಒಳಗೆ ಊಟಕ್ಕಾಗಿ ಎಚ್ಚರವಾಗುತ್ತವೆ. ಹಾಗೆಯೇ ಶಿಶುಗಳ ಹೊಟ್ಟೆ ಚಿಕ್ಕದಿರುವ ಕಾರಣ ಅವುಗಳಿಗೆ ಎರಡರಿಂದ ಮೂರು ಗಂಟೆಗಳಿಗೊಮ್ಮೆ ತಪ್ಪದೆ ಹಾಲುಣಿಸಬೇಕು. ಮಗು ಆರು ತಿಂಗಳನ್ನು ತಲುಪಿದ ನಂತರ ನಿಧಾನವಾಗಿ ಮಲಗುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. 

ಶಿಶುಗಳು ಏಕೆ ಹೆಚ್ಚು ನಿದ್ರೆ ಮಾಡುತ್ತವೆ?

ನವಜಾತ ಶಿಶುಗಳ ಮೆದುಳು ಮತ್ತು ದೇಹವು ತ್ವರಿತ ವೇಗದಲ್ಲಿ ಬೆಳೆಯಲು ಈ ದೀರ್ಘ ನಿದ್ರೆಯ ಅಗತ್ಯವಿರುತ್ತದೆ. ನಿದ್ರೆಯ ಸಮಯದಲ್ಲಿ ದೇಹವು ಬೆಳವಣಿಗೆ ಮತ್ತು ಬೆಳವಣಿಗೆಗೆ ಸಂಬಂಧಿಸಿದ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಆದಾಗ್ಯೂ, ಪೋಷಕರು ತಮ್ಮ ಮಗು ಹೆಚ್ಚು ಅಥವಾ ಅಸಾಮಾನ್ಯವಾಗಿ ನಿದ್ರಿಸುತ್ತಿರುವುದನ್ನು ಗಮನಿಸಿದರೆ, ತಜ್ಞರನ್ನು ಸಂಪರ್ಕಿಸುವುದು ಮುಖ್ಯ. ಕೆಲವೊಮ್ಮೆ, ಜ್ವರ, ಸೋಂಕು ಅಥವಾ ಇತರ ಸಮಸ್ಯೆಗಳು ಅತಿಯಾದ ನಿದ್ರೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.