ಆಹಾರ

ಕೂದಲು ಉದುರೋದು ನಿಲ್ಲಬೇಕು, ಚರ್ಮ ಹೊಳಿಬೇಕಾ?; ವಾರಕ್ಕೆ 2 ಬಾರಿ ತಿನ್ನಿ ಮೀನು..Health Tips

  • ನಿತ್ಯ ಮೀನು ಸೇವನೆ ಮಾಡೋದ್ರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು?.

  • ಚರ್ಮದ ಕಾಂತಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೀನಿನ ಆಹಾರ ಸೇವಿಸುವುದು ಬೆಸ್ಟ್.

  • ನಿತ್ಯ ಮೀನು ಸೇವಿಸುವುದರಿಂದ ನರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

Eat Fish Every Day These Surprising Health Benefits: ಫಿಶ್​​ ಫ್ರೈ, ತವಾ ಫ್ರೈ, ಡ್ರೈ ಕಬಾಬ್​​​, ಫಿಶ್​ ಕಬಾಬ್​​, ಅಂಜಲ್ ಕರಿ, ಮೀನು ಸಾರು ಹೀಗೆ ನಾನಾ ಹೆಸರಿನಲ್ಲಿ ಕರಾವಳಿ ಪ್ರದೇಶದ ಜನರು ಮೀನಿನ ಖಾದ್ಯ ಸೇವನೆ ಮಾಡುತ್ತಾರೆ. ಡ್ರೈ ಫಿಶ್​​ ಕರಿಯಾದರೂ ಖಾಯಂ ಆಗಿರುತ್ತದೆ. ಮೀನು ತಿನ್ನಲು ಎಷ್ಟು ಸೊಗಸೋ ಅದರಲ್ಲಿರುವ ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲ, ಮತ್ತು ಉತ್ತಮ ಪ್ರೋಟೀನ್​​​, ವಿಟಮಿನ್​​ಗಳು ದೇಹದ ಆರೋಗ್ಯಕ್ಕೆ ಉತ್ತಮ ಪ್ರಯೋಜನ ನೀಡುತ್ತದೆ ಎನ್ನಲಾಗಿದೆ.

ಹಾಗಾದ್ರೆ ಮೀನಿನ ಆಹಾರವನ್ನು ನಿತ್ಯ ತಿಂದರೆ ಏನೆಲ್ಲ ಆರೋಗ್ಯ ಪ್ರಯೋಜನವಿದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆ ಇದೆಯಾ ಎನ್ನುವುದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಆರೋಗ್ಯಕ್ಕೆ ಹೆಚ್ಚು ಪ್ರಯೋಜನ

ಕರಾವಳಿ ಪ್ರದೇಶದವರನ್ನು ಹೊರತು ಪಡಿಸಿ, ಇನ್ನುಳಿದ ಕಡೆಗಳಲ್ಲಿ ವಾಸ ಮಾಡುತ್ತಿರುವ ಜನರಿಗೆ ಸಾಮಾನ್ಯವಾಗಿ ಮೀನು ಪ್ರತಿದಿನದ ಆಹಾರವಲ್ಲ. ಮನಸ್ಸಿಗೆ ಬೇಕೆನಿಸಿದಾಗ ಹುಡುಕಾಡಿ, ತಂದು ಅಡುಗೆ ಮಾಡಿಕೊಳ್ಳುತ್ತಾರೆ. ಆದರೆ, ಪ್ರತಿದಿನ ಅಲ್ಲದೇ ಇದ್ದರೂ, ವಾರಕ್ಕೆ ಎರಡು ಬಾರಿ ಮೀನು ತಿನ್ನುವುದರಿಂದ ಸಾಕಷ್ಟು ಲಾಭ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಸ್ಮರಣ ಶಕ್ತಿ ಹೆಚ್ಚಿಸುತ್ತದೆ

ನಿತ್ಯ ಮೀನು ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮೀನಿನಲ್ಲಿರುವ ಒಮೆಗಾ -3 ಹಾಗೂ ಕೊಬ್ಬಿನಾಮ್ಗಳು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ. ಅಷ್ಟೇ ಅಲ್ಲದೇ ಹೃದಯದ ಆರೋಗ್ಯವನ್ನು ಪರೋಕ್ಷವಾಗಿ ಕಾಪಾಡುತ್ತದೆ ಎನ್ನುವುದು ಹಲವಾರು ಸಂಶೋಧನೆಗಳ ವರದಿಯಾಗಿದೆ.

ಮೀನನ್ನು ತಿನ್ನುವವರು ಚುರುಕಾಗಿ ಇರುತ್ತಾರೆ ಎನ್ನುವುದನ್ನು ಹಿರಿಯರು ಹೇಳುತ್ತಿದ್ದದ್ದು ಉಂಟು. ಅವರ ಕಣ್ಣುಗಳು ಮೀನಿನಂತರ ಸೂಕ್ಷ್ಮವಾಗಿರುತ್ತದೆ ಎನ್ನುತ್ತಾರೆ. ಅದರಂತೆ ಮೀನು ಸೇವನೆ ಮಾಡಿದರೆ, ಸ್ಮರಣ ಶಕ್ತಿ ಹೆಚ್ಚುತ್ತದೆ. ಹೆಚ್ಚಾಗಿ ಸರ್ಕಾರಿ ಎಕ್ಸಾಂ ಹಾಗೂ ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿರುವವರು ಈ ಖಾದ್ಯ ಸೇವಿಸೋದು ಬೆಸ್ಟ್ ಎನ್ನುತ್ತಾರೆ ನುರಿತ

ಸ್ನಾಯು ಬೆಳವಣಿಗೆಗೆ ಸಹಾಯ

ಸುಲಭವಾಗಿ ಜೀರ್ಣವಾಗಲು, ಪ್ರೋಟೀನ್​ ಉದ್ಭವಕ್ಕೆ ಮೀನು ಉತ್ತಮ ಆಹಾರ. ಪೋಷಕಾಂಶಗಳು, ಜೀವ ಸತ್ವ ವೃದ್ಧಿಗಾ ಹಾಗೂ ಸ್ನಾಯುಗಳನ್ನು ಬಲ ಪಡಿಸಲು ಮೀನು ಸಹಾಯ ಮಾಡುತ್ತದೆ. ಹೀಗಾಗಿ ಮೀನು ವಾರಕ್ಕೊಮ್ಮೆಯಾದರೂ ತಿನ್ನುವುದು ಒಳ್ಳೆಯದು.

ಚರ್ಮ ಹೊಳಪು, ಕೂದಲು ಉದುರುವಿಕೆ ತಡೆಯುವ ಮೀನು

ಮೀನು ಪರೋಕ್ಷವಾಗಿ ಚರ್ಮದ ಹೊಳಪನ್ನು ಕಾಪಾಡಲು ಸಹಾಯ ಮಾಡುತ್ತದೆ. ವಯಸ್ಸಾಗುವ ಮುನ್ನವೇ ಕಳೆದುಕೊಳ್ಳುವ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಮೀನು ಸಹಕರಿಸುತ್ತದೆ. ಅಲ್ಲದೇ, ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಡುವ ಕೂದಲು ಉದುರುವಿಕೆ ಸಮಸ್ಯೆಗೆ ಮುಕ್ತಿ ನೀಡಲು ಇದರಲ್ಲಿರುವ ಕೆಲವು ಅಂಶಗಳು ಸಹಾಯ ಮಾಡುತ್ತದೆ.

ಗಮನಿಸಬೇಕಾದ ವಿಚಾರ

ಮೀನಿನಲ್ಲಿ ಪಾದರಸ ಅಂಶವು ಹೆಚ್ಚಿರುತ್ತದೆ. ಹೀಗಾಗಿ ಇದು ನರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆ ಕಾರಣದಿಂದಾಗಿ ವಾರಕ್ಕೆ 2-3 ಬಾರಿ ಮೀನು ತಿನ್ನಿ. ಇನ್ನುಳಿದ ದಿನಗಳಲ್ಲಿ ಮಟನ್​​, ಚಿಕನ್​ ಅಥವಾ ಸಸ್ಯ ಹಾರವನ್ನು ಸೇವನೆ ಮಾಡಿ ಎನ್ನುವುದು ವೈದ್ಯರ ಸಲಹೆಯಾಗಿದೆ,( ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.