- ಬೆಡ್ರೂಮ್ ಕೇವಲ ಮಲಗುವ ಕೋಣೆಯಲ್ಲ
- ದೇಹಕ್ಕೆ ಬೇಕಾದ ಶಕ್ತಿಯ ಮರು ಸ್ಥಾಪನೆ ಮಾಡುವ ಶಕ್ತಿ ಕೇಂದ್ರ ಬೆಡ್ರೂಮ್
- ವಾಸ್ತು ಶಾಸ್ತ್ರದಲ್ಲಿ ಬೆಡ್ರೂಮ್ಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ.
ವಾಸ್ತುಶಾಸ್ತ್ರ: ಬೆಡ್ರೂಮ್ (Bedroom) ಇದು ಕೇವಲ ಮಲಗುವ ಕೋಣೆಯಲ್ಲ. ಇದು ಮನಸ್ಸಿಗೆ ಶಾಂತಿ ಪಡೆಯುವ, ದೈಹಿಕ ದಣಿವನ್ನು ಕಡಿಮೆ ಮಾಡುವ ಮತ್ತು ದೇಹಕ್ಕೆ ಬೇಕಾದ ಶಕ್ತಿಯ ಮರು ಸ್ಥಾಪನೆ ಮಾಡುವ ಶಕ್ತಿ ಕೇಂದ್ರವಾಗಿದೆ. ವಾಸ್ತು ಶಾಸ್ತ್ರದಲ್ಲಿ ಈ ಮಲಗುವ ಕೋಣೆ ಅಥವಾ ಬೆಡ್ರೂಮ್ಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ನೀವು ಮಲಗುವ ಕೋಣೆಯಲ್ಲಿ ಇಡುವ ಸಸ್ಯಗಳು ನಿಮ್ಮ ಮಾನಸಿಕ, ಶಾರೀರಿಕ ಮತ್ತು ದೈಹಿಕ ಜೀವನದ ಮೇಲೆ ಮಹತ್ತರ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಆದರೆ ಹೆಚ್ಚಿನ ಸಂಖ್ಯೆಯ ಜನರು, ತಾವು ಮಲಗುವ ಕೋಣೆಯಲ್ಲಿ ಸಸ್ಯಗಳನ್ನು ಇಡುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿರುವ ಸಸ್ಯಗಳು ಸಕಾರಾತ್ಮಕ ಶಕ್ತಿಯನ್ನು ಸೂಸುತ್ತವೆ ಎಂದು ನಂಬಲಾಗಿದೆ.
ಹಾಗೆಂದ ಮಾತ್ರಕ್ಕೆ ಕೈಯಿಗೆ ಸಿಕ್ಕ ಗಿಡವನ್ನು ತಂದು ಬೆಡ್ರೂಮಿನಲ್ಲಿಟ್ಟರೆ ಯಾವುದೇ ಪ್ರಯೋಜನವಿಲ್ಲ. ಕೆಲವೊಂದಿಷ್ಟು ಸಸ್ಯಗಳು ಮಾತ್ರ ಮಲಗುವ ಕೋಣೆಯನ್ನು ಪ್ರವೇಶಿಸಿದರೆ ಉತ್ತಮ. ನಿಮಗೆ ಮಾನಸಿಕ, ಆರ್ಥಿಕ, ದೈಹಿಕ ಮತ್ತು ಶಾರೀರಿಕ ನೆಮ್ಮದಿ ಮತ್ತು ಅಭಿವೃದ್ಧಿ ಸಾಧ್ಯವಾಗಬೇಕಾದರೆ ಈ ಹತ್ತು ಸಸ್ಯಗಳನ್ನು ನಿಮ್ಮ ಮಲಗುವ ಕೋಣೆಯಲ್ಲಿ ಇಡಿ.
1. ಹಾವಿನ ಗಿಡ (Snake Plant)
ಹಾವಿನ ಗಿಡ ಎಂದು ಹೆಸರಿದ್ದ ಮಾತ್ರಕ್ಕೆ ಇದು ನಕಾರಾತ್ಮಕ ವಾದ ಸಸ್ಯ ಎಂದು ಭಾವಿಸುವ ತಪ್ಪನ್ನು ಮಾಡಬೇಡಿ. ಈ ಸಸ್ಯವು ರಾತ್ರಿಯ ಸಮಯದಲ್ಲಿ ಹೆಚ್ಚಿನ ಆಮ್ಲಜನಕವನ್ನು ಬೀಡುಗಡೆ ಮಾಡುತ್ತದೆ. ಈ ಗಿಡ ನಿಮ್ಮ ಮಲಗುವ ಕೋಣೆಯಲ್ಲಿದ್ದರೆ ನಿದ್ರಾ ಹೀನತೆ, ಆತಂಕ ಮತ್ತು ಅತೀಯಾಗಿ ಯೋಚಿಸುವ ಗುಣಗಳು ಕಡಿಮೆಯಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹೆಚ್ಚಿನ ಲಾಭಕ್ಕಾಗಿ ಈ ಗಿಡವನ್ನು ದಕ್ಷಿಣ ಅಥವಾ ಆಗ್ನೇಯ ಮೂಲೆಯಲ್ಲಿ ಇರಿಸಿ.
2. ಶಾಂತಿ ಲಿಲ್ಲಿ (Peace Lily)
ಶಾಂತಿ ಲಿಲ್ಲಿ ತನ್ನ ಹೆಸರಿಗೆ ತಕ್ಕಂತೆಯೇ ಇದೆ. ವಾಸ್ತು ಪ್ರಕಾರ ಈ ಸಸ್ಯವು ಮಾನಸಿಕ ಶಾಂತಿ, ಭಾವನಾತ್ಮಕ ಸಮತೋಲನ ಮತ್ತು ಸಂಬಂಧಗಳಲ್ಲಿ ಸಾಮರಸ್ಯ ಹೊಂದಲು ಸಹಾಯಕವಾಗುತ್ತದೆ. ಈ ಸಸ್ಯವನ್ನು ದಂಪತಿಗಳ ಮಲಗುವ ಕೋಣೆಹಳಲ್ಲಿ ಇಡುವುದು ಸೂಕ್ತ. ವಾಸ್ತು ಪ್ರಕಾರ, ಇದನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದರಿಂದ ಸಕಾರಾತ್ಮಕ ಕಂಪನಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
3. ಹಣದ ಗಿಡ (Money Plant)
ಮಲಗುವ ಕೋಣೆಯಲ್ಲಿ ಹಣದ ಗಿಡವನ್ನು ಸರಿಯಾಗಿ ಇರಿಸಿದರೆ ಹಣದ ಹೊಳೆಯನ್ನೇ ಹರಿಸಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಸಸ್ಯವು ಆರ್ಥಿಕ ಸಂಕಷ್ಟದಲ್ಲಿರುವ ವ್ಯಕ್ತಿಯ ಬದುಕನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಈ ಸಸ್ಯವನ್ನು ಆಗ್ನೇಯ ಮೂಲೆಯಲ್ಲಿ ಇಟ್ಟು ಇದರ ಎಲೆಗಳು ಒಣಗದ ಹಾಗೆ ನೋಡಿಕೊಂಡರೆ ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸ್ತ್ರ ಹೇಳುತ್ತದೆ.
4. ಅಡಿಕೆ ಗಿಡ (Areca Palm)
ನೀವು ಮಲಗುವ ಕೋಣೆಯಲ್ಲಿ ನಿರಂತರವಾಗಿ ಜಗಳ ಆಡುತ್ತಿದರೆ ಅಥವಾ ಮಾನಸಿಕ ಶಾಂತಿ ಎನ್ನುವುದು ನಿಮಗೆ ದೊರೆತದ ಪಕ್ಷದಲ್ಲಿ ಅಡಿಕೆ ಗಿಡವನ್ನು ನೀವು ಮಲಗುವ ಕೋಣೆಯಲ್ಲಿ ಇಟ್ಟರೆ ಮಾನಸಿಕ ಶಾಂತಿ ದೊರೆಯುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಗಿಡವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕಿಟಕಿಯ ಬಳಿ ಇರಿಸಿದರೆ ತ್ವರಿತವಾಗಿ ಫಲ ಗೋಚರಿಸುತ್ತದೆ.
5. ಲ್ಯಾವೆಂಡರ್ (Lavender)
ಲ್ಯಾವೆಂಡರ್ ಒಂದು ಪರಿಮಳಯುಕ್ತ ಗಿಡವಾಗಿದ್ದು, ಇದನ್ನು ನಿಮ್ಮ ಮಲಗುವ ಕೋಣೆಯಲ್ಲಿಟ್ಟರೆ, ಉತ್ತಮ ನಿದ್ರೆ, ವಿಶ್ರಾಂತಿ ಮತ್ತು ನಿಮ್ಮ ಸ್ವಭಾವದಲ್ಲಿ ಶಾಂತತೆ ವೃದ್ಧಿಯಾಗುತ್ತದೆ. ಈ ಗಿಡವು ನಿಮ್ಮ ನಿದ್ರಾಹೀನತೆ ಮತ್ತು ಭಾವನಾತ್ಮಕ ಚಡಪಡಿಕೆಯನ್ನು ಕಡಿಮೆ ಮಾಡುತ್ತದೆ. ಈ ಸಸ್ಯವನ್ನು ನಿಮ್ಮ ಬೆಡ್ರೂಮಿನ ಕಿಟಕಿಯ ಹತ್ತಿರ ಇಡುವುದು ಉತ್ತಮ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
6. ಲೋಳೆಸರ (Aloe Vera)
ಅಲೋವೆರಾವನ್ನು ವಾಸ್ತು ಶಾಸ್ತ್ರದಲ್ಲಿ ಗೀಡಮೂಲಿಕೆಯ ದರ್ಜೆಯನ್ನು ನೀಡಲಾಗಿದೆ. ಈ ಗಿಡವನ್ನು ನಿಮ್ಮ ಮಲಗುವ ಕೋಣೆಯಲ್ಲಿ ಇಟ್ಟರೆ, ನಿಮಗೆ ತಗುಲಿರುವ ರೋಗ-ರುಜಿನ, ಕಾಯಿಲೆಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಈ ಗಿಡದ ಉಪಸ್ಥಿತಿಯು ನಿಮ್ಮ ಸಂಬಂಧ ಮತ್ತು ದಾಂಪತ್ಯ ಜೀವನವನ್ನು ಸಹ ಸುಧಾರಿಸುತ್ತದೆ ಎಂದು ನಂಬಲಾಗಿದೆ. ಈ ಸಸ್ಯವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಟ್ಟರೆ ಅಧಿಕ ಲಾಭವನ್ನು ಪಡೆಯ ಬಹುದಾಗಿದೆ.
7. ಮಲ್ಲಿಗೆ (Jasmine)
ಮಲ್ಲಿಗೆ ಕೇವಲ ಪರಿಮಳಯುಕ್ತವಲ್ಲ ಗಿಡವಲ್ಲ ಇದು ನಿಮ್ಮನ್ನು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮಲ್ಲಿಗೆ ಗಿಡವನ್ನು ನಿಮ್ಮ ಮಲಗು ಕೋಣೆಯಲ್ಲಿ ಇಟ್ಟರೆ ಪತಿ- ಪತ್ನಿ ನಡುವಿನ ಸಂಬಂಧ ಉತ್ತಮವಾಗುತ್ತದೆ ಮತ್ತು ನಿಮ್ಮ ಭಾವನಾತ್ಮಕ ಜೀವನ ಸರಾಗವಾಗಿ ಸಾಗುವಲ್ಲಿ ಸಹಕಾರವಾಗುತ್ತದೆ ಎಂದು ಹೇಳಲಾಗಿದೆ. ಈ ಸಸ್ಯವನ್ನು ನಿಮ್ಮ ಮಲಗುವ ಕೋಣೆಯ ಕಿಟಕಿಯ ಬಳಿ ಇಟ್ಟರೆ ಉತ್ತಮ ಎಂದು ಶಾಸ್ತ್ರ ಹೇಳುತ್ತದೆ.
8. ಬಿದಿರು (Bamboo)
ವಾಸ್ತು ಶಾಸ್ತ್ರದಲ್ಲಿ ಬಿದಿರನ್ನು ಶಾಂತಿ, ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿರುವ ಸಸ್ಯವೆಂದು ಗುರುತಿಸಲಾಗಿದೆ. ಈ ಸಸ್ಯ ನಿಮ್ಮ ಮಲಗುವ ಕೋಣೆಯಲ್ಲಿದ್ದರೆ ನಿಮ್ಮಲ್ಲಿ ಶಾಂತತೆ ಮತ್ತು ನಮ್ಯತೆಯ ಗುಣ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಇದು ಆರೋಗ್ಯುವನ್ನು ಸಹ ವೃದ್ಧಿಸುವ ಗುಣವನ್ನು ಹೊಂದಿದ್ದು, ಇದನ್ನು ಪೂರ್ವ ದಿಕ್ಕಿನಲ್ಲಿ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಹೆಚ್ಚಿನ ಲಾಭ ದೊರೆಯುತ್ತದೆ.
9. ಸ್ಪೈಡರ್ ಪ್ಲಾಂಟ್ (Spider Plant)
ಸ್ಪೈಡರ್ ಪ್ಲಾಂಟ್ ಅಥವಾ ಜೇಡ ಸಸ್ಯವು ಗಾಳಿಯನ್ನು ಶುದ್ಧೀಕರಿಸುವ ಮತ್ತು ಸಮತೋಲಿಸುವ ಶಕ್ತಿಯನ್ನು ಹೊಂದಿದ್ದು, ಇದು ನಿಮ್ಮ ಮಾನಸಿಕ ಶಾಂತಿಯನ್ನು ವೃದ್ಧಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಸಸ್ಯವನ್ನು ನಿಮ್ಮ ಬೆಡ್ರೂಮಿನಲ್ಲಿ ಇಟ್ಟರೆ ನಿಮ್ಮ ಆಯಾಸ, ಚಡಪಡಿಕೆ ಮತ್ತು ಚಿಂತೆ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಗಿಡವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕಪಾಟಿಗೆ ನೇತು ಹಾಕುವುದು ಉತ್ತಮ.
10. ಫಿಲೋಡೆನ್ಡ್ರಾನ್ (Philodendron)
ಫಿಲೋಡೆನ್ಡ್ರಾನ್ ಗಿಡವು ಒತ್ತಡ ಕಡಿಮೆ ಮಾಡಲು ಮತ್ತು ಭಾವನಾತ್ಮಕ ಸಾಮರಸ್ಯವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಸಸ್ಯವನ್ನು ನಿಮ್ಮ ಮಲಗುವ ಕೋಣೆಯಲ್ಲಿ ಇಟ್ಟರೆ ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಜೀವನ ಸಮೃದ್ಧಿಯಿಂದ ಕೂಡಿರುತ್ತದೆ ಎಂದು ನಂಬಲಾಗಿದೆ. ಈ ಸಸ್ಯವನ್ನು ಸೂರ್ಯನ ಬೆಳಕು ನೇರವಾಗಿ ಬೀಳುವ ಸ್ಥಳದಲ್ಲಿ ಇಟ್ಟರೆ ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.