ಸಿಂಧನೂರಿನಲ್ಲಿ ಮತಗಟ್ಟೆ ಕಡೆ ನಮ್ಮ ನಡಿಗೆ ಜಾಗೃತಿ ಬೈಕ್ ಜಾಥಾವನ್ನು ಭಾನುವಾರ ನಡೆಸಲಾಯಿತು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ, ಇತರರಿದ್ದರು.  
ಜಿಲ್ಲೆ

ಶೇ.100 ಮತದಾನದ ಗುರಿ: ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಹೇಳಿಕೆ

ಸಿಂಧನೂರು: ನಗರದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ನಗರಸಭೆ ಸಂಯುಕ್ರಾಶ್ರಯದಲ್ಲಿ ಭಾನುವಾರ ಮತಗಟ್ಟೆ ಕಡೆ ನಮ್ಮ ನಡಿಗೆ ಜಾಗೃತಿ ಬೈಕ್ ಜಾಥಾ ನಡೆಸಲಾಯಿತು.


ನಗರಸಭೆಯಿಂದ ಆರಂಭಗೊಂಡ ಬೈಕ್ ಜಾಥಾ, ನಗರದ ಪ್ರಮುಖ ವೃತ್ತಗಳ ಮೂಲಕ ಸಂಚರಿಸಿತು. ವಿಧಾನಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲಾಯಿತು.

ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ

ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮಾತನಾಡಿ, ಶೇ.100 ಮತದಾನ ಗುರಿ ಸಾಧಿಸಬೇಕಿದೆ. ನಗರದ 71 ಮತಗಟ್ಟೆಗಳ ಬಿಎಲ್‌ಒಗಳು ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಮೂಡಿಸಿದ್ದಾರೆ ಎಂದರು. ತಾಪಂ ಇಒ ಲಕ್ಷ್ಮೀದೇವಿ, ನಗರಸಭೆ ವ್ಯವಸ್ಥಾಪಕಿ ರೇಖಾ ಇತರರು ಇದ್ದರು.