More

    ಚುನಾವಣೆಯಲ್ಲಿ ಅರ್ಹರಿಗೆ ಮತಚಲಾಯಿಸಿ – ನೋಡಲ್ ಅಧಿಕಾರಿ ಸಲಹೆ

    ಅಳವಂಡಿ: ಸಂವಿಧಾನ ನೀಡಿದ ಹಕ್ಕನ್ನು ಅರ್ಹರಿಗೆ ಮತದಾನ ಮಾಡುವ ಮೂಲಕ ಸುಭದ್ರ ಸರಕಾರ ರಚಿಸಿ ಎಂದು ಸ್ವೀಪ್ ತಾಲೂಕ ನೋಡೆಲ್ ಅಧಿಕಾರಿ ಎಚ್.ಹನುಮಂತಪ್ಪ ತಿಳಿಸಿದರು.

    ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ

    ಗ್ರಾಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಗ್ರಾಪಂ ಆಶ್ರಯದಲ್ಲಿ ಹಮ್ಮಿಕೊಂಡಿರುವ ಮತದಾನ ಜಾಗೃತಿ ಹಾಗೂ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದರು. ದೇಹದಾನ, ನೇತ್ರದಾನ, ರಕ್ತದಾನಕ್ಕಿಂತ ಮತದಾನ ದೊಡ್ಡದು. ಕಳೆದ ಬಾರಿ ಗ್ರಾಮದಲ್ಲಿ ಕಡಿಮೆ ಮತದಾನವಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ಶೇ.100 ಗುರಿ ತಲಪಬೇಕು ಎಂದರು.

    ಎತ್ತಿನ ಬಂಡಿ ಮೆರವಣಿಗೆ

    ಎತ್ತಿನ ಬಂಡಿ ಮೆರವಣಿಗೆ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಬಂಡಿಗಳಲ್ಲಿ ಮತದಾನದ ಜಾಗೃತಿ ಫಲಕಗಳು ಜನರ ಗಮನ ಸೆಳೆಯಿತು. ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರು, ಗ್ರಾಪಂ, ಸಿಬ್ಬಂದಿ, ಸ್ವೀಪ್ ತಂಡದ ಸದಸ್ಯರು ಮೆರವಣಿಗೆಗೆ ಸಾಥ್ ನೀಡಿದರು.

    ಇದನ್ನೂ ಓದಿ: ದೆಹಲಿ ಚುನಾವಣೆ ಮತದಾನ ಪ್ರಮಾಣ 11ಗಂಟೆಗೆ ಶೇಕಡ 6.28 : ಮತಗಟ್ಟೆಗೆ ಬಂದು ಮತಚಲಾಯಿಸಿದ ಹಿರಿಯಜ್ಜಿಯ ವಯಸ್ಸೆಷ್ಟು ಗೊತ್ತೆ!

    ಪಂಚಾಯತರಾಜ ಸಹಾಯಕ ನಿರ್ದೆಶಕ ಎಚ್.ಮಹೇಶ, ಪಿಡಿಒ ಬಸವರಾಜ ಕೀರ್ದಿ, ತಾಲೂಕಾ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕು ಸ್ವೀಪ್ ತಂಡದ ಸದಸ್ಯರಾದ ಬಸವರಾಜ ಬಳಿಗಾರ, ಪೂರ್ಣೆಂದ್ರಸ್ವಾಮಿ, ಗ್ರೇಡ-1 ಕಾರ್ಯದರ್ಶಿ ಕೊಟ್ರಪ್ಪ ಅಂಗಡಿ, ಸಿಬ್ಬಂದಿಗಳಾದ ಶಿವಮೂರ್ತಿ, ದೇವೆಂದ್ರರಡ್ಡಿ, ಹನುಮಂತ, ಮಾರುತಿ, ಬಿಎಪ್‌ಟಿ ದಾವಲಸಾಬ, ಕಾಯಕಮಿತ್ರ ಗೀತಾ, ಹಾಗೂ ವಿ.ಎಚ್.ಪುಲೇಶಿ, ನೀಲಪ್ಪ ಹಕ್ಕಂಡಿ, ರಮೇಶ ಸುಣಗಾರ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts