ಹರಪನಹಳ್ಳಿ: ದೇಶದ ಮೊಟ್ಟ ಮೊದಲ ರಾಷ್ಟ್ರಮಟ್ಟದ ವಿದ್ಯಾರ್ಥಿ ಸಂಘಟನೆಯಾಗಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್(ಎಐಎಸ್‌ಎಫ್) ಉದಯವಾಯಿತು ಎಂದು ಎಐಎಸ್‌ಎಫ್ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ 88ನೇ ವಷರ್ದ ಸಂಸ್ಥಾಪನಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಸ್ವಾತಂತ್ರೃಕ್ಕಾಗಿ ಎಐಎಸ್‌ಎಫ್ ಸಂಘಟನೆ ವಿದ್ಯಾರ್ಥಿಗಳನ್ನು ಸಂಘಟಿಸುವ ಮೂಲಕ ಹೋರಾಟದ ಮನೋಭಾವ ಬೆಳೆಸಿದೆ, 1947ರ ಪೂರ್ವದಲ್ಲಿ ಸ್ವಾತಂತ್ರೃ ಹೋರಾಟ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳು ಏಕಕಾಲಕ್ಕೆ ಎದುರಾಗಿದ್ದವು. ಆದ್ದರಿಂದ 1935ರಲ್ಲಿ ಎಐಎಸ್‌ಎಫ್ ಮೊದಲ ವಿದ್ಯಾರ್ಥಿ ಸಂಘಟನೆಯಾಗಿ ಉದಯವಾಯಿತು. ಸಂಘಟನೆ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಾ ಬಂದಿದೆ ಎಂದರು.
ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ವಿದ್ಯಾರ್ಥಿಗಳು ಅರೆಸ್ಟ್
ಸಂಘಟನೆಯ ರಾಜ್ಯ ಕಾರ್ಯದರ್ಶಿ ಹೆಚ್.ಎಂ. ಸಂತೋಷ, ತಾಲೂಕು ಅಧ್ಯಕ್ಷ ಹರೀಶ್, ತಾಲೂಕು ಕಾರ್ಯದರ್ಶಿ ಅರುಣ್ ಕುಮಾರ್, ಪ್ರಮುಖರಾದ ದೊಡ್ಡ ಬಸವರಾಜ್, ಪ್ರಸನ್ನ, ಸುದೀಪ್, ಪವನ್ ನಾಯಕ್, ವೀರೇಶ, ಜೇಮ್ಲನಾಯಕ್ ಇದ್ದರು.