ಜಿಲ್ಲೆ

ರಾಗಿಮಸಲವಾಡ ಗ್ರಾಪಂಗೆ ಲಾಟರಿ ಮೂಲಕ ಆಯ್ಕೆ

ಹರಪನಹಳ್ಳಿ: ತಾಲೂಕಿನ ರಾಗಿಮಸಲವಾಡ ಗ್ರಾಪಂಗೆ ಅಧ್ಯಕ್ಷೆ ಹೊಳೆಯಪ್ಪನವರ ಜಯಮ್ಮ, ಉಪಾಧ್ಯಕ್ಷರಾಗಿ ತುಂಬಿಗೇರಿ ಬೆಟ್ಟಪ್ಪವರ ಮಲ್ಲಪ್ಪ ಮಂಗಳವಾರ ಆಯ್ಕೆಯಾದರು.


ಗ್ರಾಪಂಯು ಒಟ್ಟು 14 ಸದಸ್ಯರ ಬಲ ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಹೊಳೆಯಪ್ಪರ ಜಯ್ಯಮ್ಮ ಹಾಗೂ ಉಷಾಬಾಯಿ, ಉಪಾಧ್ಯಕ್ಷ ಸ್ಥಾನಕ್ಕೆ ತುಂಬಿಗೇರಿ ಬೆಟ್ಟಪ್ಪನವರ ಮಲ್ಲಪ್ಪ, ಹೆಚ್.ಎಸ್.ರೇಖಾ, ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ 7 ಮತ ಬಿದ್ದಿದ್ದರಿಂದ ಲಾಟರಿ ಮೂಲಕ ಅಧ್ಯಕ್ಷೆ ಹೊಳೆಯಪ್ಪನವರ ಜಯಮ್ಮ, ಉಪಾಧ್ಯಕ್ಷರಾಗಿ ತುಂಬಿಗೇರಿ ಬೆಟ್ಟಪ್ಪವರ ಮಲ್ಲಪ್ಪ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಜಯಸಿಂಹ ತಿಳಿಸಿದರು.


ಪ್ರಮುಖರಾದ ಟೀಕ್ಯನಾಯ್ಕ, ಹೆಗ್ಗಪ್ಪರ ಶಂಭುಲಿಗಂಪ್ಪ, ಶಂಕರನಹಳ್ಳಿ ಹನುಮಂತಪ್ಪ, ಅಣಿಮೆಗಳತಾಂಡ ಕೃಷ್ಣನಾಯ್ಕ, ಶಿವಾಜಿನಾಯ್ಕ, ಕೋಟಿತಾಂಡ ಹನುಮಂತನಾಯ್ಕ ಇದ್ದರು.