ದುಗ್ಗಾವತಿ ಗ್ರಾಪಂ ಗದ್ದುಗೆ ಏರಿದ ಮಹಿಳೆಯರು

Untitled design (4)
ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಪಂಗೆ ಅಧ್ಯಕ್ಷೆ ತಳವಾರ ಸಿದ್ದಮ್ಮ ಮೈಲಪ್ಪ, ಉಪಾಧ್ಯಕ್ಷೆಯಾಗಿ ಬಣಕಾರ ಬಸಮ್ಮ ಸುರೇಶ ಆಯ್ಕೆಯಾದರು. ಮುಖಂಡರಾದ ಎಂ.ಎಚ್.ಪರಶುರಾಮ, ಮಂಜುನಾಥ, ಬಣಕಾರ ಮಲ್ಲಿಕಾರ್ಜುನ, ಗುಡಿಗುಡಿ ಪ್ರಕಾಶ, ಟಿ.ತಿಮ್ಮಪ್ಪ, ಜೆ.ವಿಶ್ವನಾಥ ಇದ್ದರು.
Published on

ಹರಪನಹಳ್ಳಿ: ದುಗ್ಗಾವತಿ ಗ್ರಾಪಂಗೆ ಅಧ್ಯಕ್ಷೆ ತಳವಾರ ಸಿದ್ದಮ್ಮ ಮೈಲಪ್ಪ, ಉಪಾಧ್ಯಕ್ಷೆಯಾಗಿ ಬಣಕಾರ ಬಸಮ್ಮ ಸುರೇಶ ಸೋಮವಾರ ಆಯ್ಕೆಯಾಗಿದ್ದಾರೆ.


ಗ್ರಾಪಂಯು ಒಟ್ಟು 11 ಸದಸ್ಯರ ಬಲ ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಟಿ.ಸಿದ್ದಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಬಣಕಾರ ಬಸಮ್ಮ ಹಾಗೂ ಸಿದ್ದರಾಮಣ್ಣ ನಾಮಪತ್ರ ಸಲ್ಲಿಸಿದ್ದರು.

ಸಿದ್ದರಾಮಣ್ಣ 4 ಮತ, ಬಣಕಾರ ಬಸಮ್ಮ 7 ಮತ ಪಡೆದು ಉಪಾಧ್ಯಕ್ಷೆಯಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಇಒ ಕೆ.ಆರ್.ಪ್ರಕಾಶ ಘೋಷಿಸಿದರು.ಸದಸ್ಯರಾದ ಎಚ್ ನಾಗೇಂದ್ರ, ಡಿ.ಪರಶುರಾಮ, ರೇಣುಕಮ್ಮ, ಚಿಗರಿ ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net