ಬೆಳಗಾವಿ ಟಿಳಕವಾಡಿಯಲ್ಲಿ ಬಿ.ಎಸ್.ಚನ್ನಬಸಪ್ಪ ಆಂಡ್ ಸನ್ಸ್ ಮಳಿಗೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಸಚಿವರಾದ ಭೈರತಿ ಬಸವರಾಜ, ಉಮೇಶ ಕತ್ತಿ, ಡಾ. ಪ್ರಭಾಕರ ಕೋರೆ, ಬಿ.ಸಿ.ಉಮಾಪತಿ, ಬಿ.ಸಿ.ಚಂದ್ರಶೇಖರ, ಬಿ.ಸಿ. ಶಿವಕುಮಾರ ಇದ್ದರು. 
ಜಿಲ್ಲೆ

ಬೆಳಗಾವಿಯಲ್ಲಿ ಚನ್ನಬಸಪ್ಪ ಆ್ಯಂಡ್ ಸನ್ಸ್ ಮಳಿಗೆ ಆರಂಭ; ಬಿಎಸ್​ಸಿ ಬ್ರ್ಯಾಂಡ್ ಕರ್ನಾಟಕದ ಮನೆಮಾತು: ಸಿಎಂ ಮೆಚ್ಚುಗೆ

ಬೆಳಗಾವಿ: ಬಿ.ಎಸ್.ಚನ್ನಬಸಪ್ಪ ಆಂಡ್ ಸನ್ಸ್ ಜವಳಿ ಉದ್ಯಮವು ಪ್ರಾಮಾಣಿಕ ಸೇವೆ, ಉತ್ಕೃಷ್ಟ ದರ್ಜೆಯ ಬಟ್ಟೆಗಳಿಂದಾಗಿ ಕರ್ನಾಟಕದಲ್ಲಿ ಮನೆಮಾತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಟಿಳಕವಾಡಿಯ ಮಿಲೇನಿಯಂ ಗಾರ್ಡನ್ ಬಳಿ ದಾವಣಗೆರೆಯ ಬಿ.ಎಸ್.ಚನ್ನಬಸಪ್ಪ ಆಂಡ್ ಸನ್ಸ್ ಜವಳಿ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕವೇ ಜವಳಿ ಉದ್ಯಮದಲ್ಲಿ ಬಿ.ಎಸ್.ಚನ್ನಬಸಪ್ಪ ಆಂಡ್ ಸನ್ಸ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ ಎಂದರು. ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಗೋವಾ ಮತ್ತು ಮಹಾರಾಷ್ಟ್ರದಿಂದ ತರಕಾರಿ ಹಾಗೂ ಬಟ್ಟೆ ಖರೀದಿಗೆ ಜನರು ಬರುತ್ತಾರೆ. ಇಲ್ಲಿ ಮಳಿಗೆ ತೆರೆಯುವಂತೆ ನಾನು ಸಲಹೆ ನೀಡಿದ್ದೆ. ಬೆಳಗಾವಿಯಲ್ಲಿ ಬಿ.ಎಸ್. ಚನ್ನಬಸಪ್ಪ ಸನ್ಸ್ ಮಳಿಗೆ ಆರಂಭಿಸಿ ಮಹತ್ವದ ಹೆಜ್ಜೆ ಇಟ್ಟಿರುವುದು ಸಂತಸದ ಸಂಗತಿ ಎಂದರು.

ಬಿ.ಎಸ್. ಚನ್ನಬಸಪ್ಪ ಆಂಡ್ ಸನ್ಸ್ ನಿರ್ದೇಶಕ ಬಿ.ಸಿ.ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಅಜ್ಜ ಆ ಕಾಲದಲ್ಲಿ ಗಂಟು ಹೊತ್ತು ಊರೂರು ಸುತ್ತಿ ಬಟ್ಟೆ ಮಾರುತ್ತಿದ್ದ. ಅಜ್ಜಿ ಶಾಂತಮ್ಮ ಅವರ ಆಸೆಯಂತೆ ದಾವಣಗೆರೆಯಲ್ಲಿ ಚಿಕ್ಕ ಅಂಗಡಿ ತೆರೆಯಲಾಯಿತು. ಹಗಲು ರಾತ್ರಿ ಕಷ್ಟ ಪಟ್ಟು ದುಡಿದು, ಉದ್ಯಮ ಬೆಳೆಸಿದರು. ಈಗ ನಾಲ್ಕನೇ ತಲೆಮಾರಿನ ಮಕ್ಕಳೊಂದಿಗೆ ಉದ್ಯಮವನ್ನು ಉನ್ನತ ಮಟ್ಟಕ್ಕೆ ಏರಿಸಿದ್ದೇವೆ ಎಂದರು. ಸಚಿವರಾದ ಭೈರತಿ ಬಸವರಾಜ, ಉಮೇಶ ಕತ್ತಿ, ಸಂಸದೆ ಮಂಗಲ ಅಂಗಡಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮತ್ತಿತರರು ಉಪಸ್ಥಿತರಿದ್ದರು.