ಹಟ್ಟಿಚಿನ್ನದಗಣಿ ಕಂಪನಿಯ ಕ್ರೀಡಾ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕಮಲಮ್ಮ ಉದ್ಘಾಟಿಸಿದರು. ಪ್ರಮುಖರಾದ ಡಾ.ಎನ್. ಸಂತೋಷ್, ಯಮನೂರಪ್ಪ, ಎಸ್.ಎಂ ಶಫಿ, ರಾಜಕುಮಾರ್, ವಿನೋದಕುಮಾರ್, ಪಂಪಣ್ಣ ಭೇರಿ, ನಿಂಗರಾಜ್ ಕುಪ್ಪಿಗುಡ್ಡ, ಅರುಣಕುಮಾರ್ ಇದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಿ

ಹಟ್ಟಿಚಿನ್ನದಗಣಿ: ದೇಶದ ಜನರಿಗೆ ವಿವಿಧ ಉದ್ದೇಶಗಳಿಗೆ ದಿನಕ್ಕೆ 1.71 ಕೋಟಿ ಯೂನಿಟ್ ರಕ್ತ ಅವಶ್ಯವಿದ್ದು, ಆದರೆ 1.30 ಕೋಟಿ ಯೂನಿಟ್ ಮಾತ್ರ ಸಂಗ್ರಹವಾಗುತ್ತಿದೆ. ಆದ್ದರಿಂದ ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ಹಟ್ಟಿಚಿನ್ನದಗಣಿ ಕಂಪನಿ ಮುಖ್ಯ ವೈದ್ಯಾಧಿಕಾರಿ ಎನ್. ಸಂತೋಷ್ ಹೇಳಿದರು.


ಪಟ್ಟಣದ ಗಣಿ ಕಂಪನಿಯ ಕ್ರೀಡಾ ಸಂಸ್ಥೆಯಲ್ಲಿ ಬೆಳಕು ಯೂತ್ ಫೌಂಡೇಶನ್ ವತಿಯಿಂದ ಹಟ್ಟಿ ಸಂಸ್ಥೆಯ ಉದ್ಘಾಟನಾ ಸಮಾರಂಭದ ನಿಮಿತ್ತ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪಘಾತ, ಹೆರಿಗೆ ಸಂದರ್ಭಗಳಲ್ಲಿ ರಕ್ತ ಸಿಗದೆ ಸಾಯುತ್ತಿದ್ದಾರೆ. ಇಂತಹ ಸಮಸ್ಯೆ ನೀಗಿಸಲು ಸಾರ್ವಜನಿಕರು ರಕ್ತದಾನ ಮಾಡಲು ಸನ್ನದ್ಧರಾಗಬೇಕು ಎಂದರು.


ಗಣಿ ಕಂಪನಿ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಯಮನೂರಪ್ಪ ಮಾತನಾಡಿದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕಮಲಮ್ಮ, ಕಾರ್ಮಿಕ ಮುಖಂಡರಾದ ತಿಪ್ಪಣ್ಣ ಮಾಚನೂರು, ಚಂದ್ರು, ಕುಟ್ಟಿಮಾ, ಕ್ರೀಡಾ ಸಂಸ್ಥೆ ಕಾರ್ಯದರ್ಶಿ ನವೀನಕುಮಾರ್, ಸೇವಾ ಸಂಸ್ಥೆ ಪದಾಧಿಕಾರಿಗಳಾದ ರಾಜಕುಮಾರ್, ವಿನೋದಕುಮಾರ್, ಪಂಪಣ್ಣ ಭೇರಿ, ನಿಂಗರಾಜ್ ಕುಪ್ಪಿಗುಡ್ಡ, ಅರುಣಕುಮಾರ್ ಇದ್ದರು.